ಬೆದರಿಕೆ ತಂತ್ರ ನಿವಾರಣೆಗೆ ಹೊಸ ಕಾನೂನು ಜಾರಿಗೆ ಬರಲಿ

KannadaprabhaNewsNetwork |  
Published : Oct 25, 2026, 02:15 AM IST
ಗುರುರಾಜ ಹುಣಸೀಮರದ | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಹಲವು ತಾಂತ್ರಿಕತೆ ಬಳಸಿಕೊಂಡು ಸ್ಟಿಂಗ್‌ ಆಪರೇಶನ್‌ ಮೂಲಕ ಗಣ್ಯರನ್ನು ಬೆದರಿಸುವ, ಗೌರವ ತೆಗೆಯುವ ಜತೆಗೆ ಹಣ ಮಾಡುವ ದಂಧೆ ರಾಜ್ಯದಲ್ಲಿ ಶುರುವಾಗಿದೆ.

ಧಾರವಾಡ:

ಇತ್ತೀಚಿನ ದಿನಗಳಲ್ಲಿ ಹಲವು ತಾಂತ್ರಿಕತೆ ಬಳಸಿಕೊಂಡು ಸ್ಟಿಂಗ್‌ ಆಪರೇಶನ್‌ ಮೂಲಕ ಗಣ್ಯರನ್ನು ಬೆದರಿಸುವ, ಗೌರವ ತೆಗೆಯುವ ಜತೆಗೆ ಹಣ ಮಾಡುವ ದಂಧೆ ರಾಜ್ಯದಲ್ಲಿ ಶುರುವಾಗಿದ್ದು, ನಿಯಂತ್ರಿಸಲು ಹೊಸ ಕಾನೂನು ಜಾರಿಗೆ ತರಬೇಕೆಂದು ಜೆಡಿಎಸ್‌ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ ಆಗ್ರಹಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮಂತ್ರಿಗಳು ಸೇರಿದಂತೆ ಸ್ವಾಮೀಜಿಗಳು, ದೊಡ್ಡ ವ್ಯಾಪಾರಸ್ಥರು, ಐಎಎಸ್‌ ಅಧಿಕಾರಿಗಳು ಸೇರಿದಂತೆ ಗಣ್ಯಾತೀಗಣ್ಯರನ್ನು ಸ್ಟಿಂಗ್‌ ಆಪರೇಶನ್ ಮೂಲಕ ಬೆದರಿಸಿ ಹಣ ದುರ್ಬಳಕೆ ಮಾಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಕ್ಷಣೆ ಇಲ್ಲದ ಮೇಲೆ ಇನ್ನು ಸಾಮಾನ್ಯ ಜನರ ಸ್ಥಿತಿ ಏನು? ಅವರ ಪ್ರಕರಣದ ನಡೆದ 15 ದಿನ ಕಳೆದರೂ ಯಾವ ಕಾರಣಕ್ಕೆ ಸ್ಟಿಂಗ್‌ ಆಪೇರೇಶನ್ ಮಾಡಿಸಿದ್ದಾರೆಂದು ಈ ವರೆಗೂ ಗೃಹ ಇಲಾಖೆ ಪತ್ತೆ ಹಚ್ಚಿಲ್ಲ. ಈ ಕಾರ್ಯವನ್ನು ಕಾಂಗ್ರೆಸ್‌ ಪಕ್ಷದವರೇ ಅದರಲ್ಲೂ ಮುಖ್ಯಮಂತ್ರಿಗಳೇ ಮಾಡಿಸಿದ್ದಾರೆಂಬ ಆರೋಪ ಇದ್ದು ಏತಕ್ಕೆ ತನಿಖೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಎಐ ತಂತ್ರಜ್ಞಾನ ಬಳಸಿ ಏನೆಲ್ಲ ಅಕ್ರಮಗಳು ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ಜಾರಿಗೆ ತರಬೇಕು. ಜತೆಗೆ ಹತ್ತಾರು ವರ್ಷಗಳಾದ ಬಳಿಕ ನನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ಬಹಿರಂಗವಾಗಿ ಗಣ್ಯರ ಮೇಲೆ ಆರೋಪಿಸುವುದು ಎಷ್ಟರ ಮಟ್ಟಿಗೆ ಸರಿ? ಎಂದ ಅವರು, ಇಂತಹ ಅಪರಾಧಗಳಾಗಿದ್ದರೆ ಇಂತಿಷ್ಟು ವರ್ಷಗಳ ಅವಧಿಗೆ ಮೀಸಲು ಮಾಡಬೇಕು. ಇಲ್ಲದೇ ಹೋದಲ್ಲಿ ಇಂತಹ ಪ್ರಕರಣಗಳಿಂದ ರಾಜ್ಯದ ಗೌರವ ದೇಶದಲ್ಲಿ ಹರಾಜಾಗುತ್ತದೆ. ರಾಜ್ಯದಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ಗೃಹ ಸಚಿವ ಪ್ರಿಯಾಂಕ ಖರ್ಗೆ ಈ ಬಗ್ಗೆ ಗಂಭೀರ ಕ್ರಮ ತೆಗೆದುಕೊಳ್ಳಬೇಕು. ಇಲ್ಲದೇ ಹೋದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಹುಣಸೀಮರದ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಮಂಜುನಾಥ ಹಗೇದಾರ, ಚಿದಂಬರ ನಾಡಗೌಡ, ಶಂಕರ ಪವಾರ ಹಾಗೂ ಬಸವರಾಜ ಕುರಹಟ್ಟಿಮಠ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹತ್ತಾರು ಕ್ಷೇತ್ರಗಳಲ್ಲಿ ಕೊಂಕಣಿಗರ ಛಾಪು: ಫಾ. ಥಾಮಸ್ ಫರ್ನಾಂಡೀಸ್
ಬೇಡ್ತಿ- ಅಘನಾಶಿನಿ ತಿರುವು ಯೋಜನೆ ವಿರೋಧಿಸಿ ನವೆಂಬರ್ 3ರಂದು ಹೆದ್ದಾರಿ ತಡೆ