ನಗರ ಪ್ರದೇಶದಲ್ಲಿ ಅರಣ್ಯ ಹೆಚ್ಚಿಸಲು ಹೊಸ ಮಾದರಿ: ಅಹಮದ್ ಹಗರೆ

KannadaprabhaNewsNetwork |  
Published : Jun 09, 2024, 01:37 AM IST
8ಎಚ್ಎಸ್ಎನ್8 : ಕೇಂದ್ರ ಗ್ರಂಥಾಲಯದ ಹಿಂಭಾಗದ ಖಾಲಿ ಜಾಗದಲ್ಲಿ ಗಿಡಗಳನ್ನು ನೆಡಲಾಯಿತು. | Kannada Prabha

ಸಾರಾಂಶ

ನಗರದ ಪ್ರದೇಶದಲ್ಲಿ ದಟ್ಟವಾಗಿ ಬೆಳೆಸಲು ಕಡಿಮೆ ಅವಧಿಯಲ್ಲಿ ಬರುವ ಕಾಡು ಬೆಳೆಸುವುದಾಗಿದೆ. ಇದು ರಾಜ್ಯಾದ್ಯಂತ ಹಾಗೂ ದೇಶದಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಹೇಳಿದರು. ಹಾಸನದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಮಿಯಾವಾಕಿ ಪುಟ್ಟಡವಿ ನಿರ್ಮಾಣ ಕಾರ್ಯಕ್ರಮದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

ಭಾರತ ಜ್ಞಾನ ವಿಜ್ಞಾನ ಸಮಿತಿ । ಕೇಂದ್ರ ಗ್ರಂಥಾಲಯ ಹಿಂಭಾಗ ಗಿಡ ನೆಟ್ಟು ಪೋಷಣೆ

ಕನ್ನಡಪ್ರಭ ವಾರ್ತೆ ಹಾಸನ

ಭಾರತ ಪ್ರಸ್ತುತದಲ್ಲಿ ಅರಣ್ಯವನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಹೊಸ ಮಾದರಿ ಎಂದರೆ ನಗರದ ಪ್ರದೇಶದಲ್ಲಿ ದಟ್ಟವಾಗಿ ಬೆಳೆಸಲು ಕಡಿಮೆ ಅವಧಿಯಲ್ಲಿ ಬರುವ ಕಾಡು ಬೆಳೆಸುವುದಾಗಿದೆ. ಇದು ರಾಜ್ಯಾದ್ಯಂತ ಹಾಗೂ ದೇಶದಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಹೇಳಿದರು.

ನಗರದ ಕೇಂದ್ರ ಗ್ರಂಥಾಲಯದ ನೂತನ ಕಟ್ಟಡದ ಹಿಂಭಾಗ ಇರುವ ಖಾಲಿ ಜಾಗದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಹಸಿರುಭೂಮಿ ಪ್ರತಿಷ್ಠಾನ ನಗರ ಕೇಂದ್ರ ಗ್ರಂಥಾಲಯ, ಅರಣ್ಯ ಇಲಾಖೆ, ಮುಂಜಾನೆ ಮಿತ್ರರರು, ಎವಿಕೆ ಕಾಲೇಜು ಮತ್ತು ಎಂ.ಕೃಷ್ಣ ಕಾನೂನು ಕಾಲೇಜು ಎನ್‌ಎಸ್‌ಎಸ್ ಘಟಕ ಜಂಟಿಯಾಗಿ ವಿಶ್ವ ಪರಿಸರ ದಿನದ ಅಂಗವಾಗಿ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಮಿಯಾವಾಕಿ ಪುಟ್ಟಡವಿ ನಿರ್ಮಾಣ ಕಾರ್ಯಕ್ರಮದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

ಹಾಸನ ನಗರದಲ್ಲಿ ನಾವು ಹಸಿರುಭೂಮಿ ಪ್ರತಿಷ್ಠಾನ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಇತರೆ ಸಂಸ್ಥೆಗಳ ಸಹಯೋಗದಲ್ಲಿ ನಗರದ ಕೇಂದ್ರ ಗ್ರಂಥಾಲಯದ ಹಿಂಬಾಗದ ಜಾಗದಲ್ಲಿ ಸುಮಾರು ೨೦೦ ಗಿಡವನ್ನು ಹಾಕಿ ಇಲ್ಲಿ ನಗರದ ಕಾಡು ನಿರ್ಮಾಣ ಮಾಡಲಾಗುತ್ತಿದೆ. ನೂರು ವರ್ಷದಲ್ಲಿ ಬೆಳೆಯುವ ಗಿಡ ೨೦ ವರ್ಷದಲ್ಲಿ ಬೆಳೆಯುವ ಪ್ರಯೋಗವನ್ನು ಹಾಸನದಲ್ಲಿ ಮಾಡಲಾಗುತ್ತಿದ್ದು, ಎಲ್ಲರು ಅಗತ್ಯವಾದ ಸಹಕಾರ ಕೊಡುತ್ತಿದ್ದಾರೆ ಎಂದು ಹೇಳಿದರು.

ಪೋಷಣೆ ಮಾಡಲು ಕೇಂದ್ರ ಗ್ರಂಥಾಲಯದ ಆವರಣದಲ್ಲಿ ನೀರು ಇದ್ದು, ಪ್ರತಿವಾರ ಎವಿಕೆ ಕಾಲೇಜಿನ ಮತ್ತು ಎಂ. ಕೃಷ್ಣ ಕಾನೂನು ಕಾಲೇಜಿನ ಎನ್‌ಎಸ್‌ಎಸ್ ಘಟಕಗಳು ಸರದಿಯಲ್ಲಿ ಮಕ್ಕಳು ಬಂದು ಗಿಡವನ್ನು ಪೋಷಣೆ ಮಾಡಲಿದ್ದಾರೆ. ಎರಡು ವರ್ಷಗಳ ಕಾಲ ಈ ಗಿಡಗಳ ಬಗ್ಗೆ ನಿಗಾ ವಹಿಸಿದರೆ ಸಾಕು ನಂತರ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು.

ಎಂ. ಕೃಷ್ಣ ಕಾನೂನು ಕಾಲೇಜು ಪ್ರಾಂಶುಪಾಲ ಶ್ರೀನಿವಾಸ್, ಎವಿಕೆ ಕಾಲೇಜು ಪ್ರಾಂಶುಪಾಲ ಸೀ.ಚ.ಯತೀಶ್ವರ್, ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಆರ್.ಪಿ. ವೆಂಕಟೇಶ್ ಮೂರ್ತಿ, ಮುಂಜಾನೆ ಮಿತ್ರ ತಂಡದ ಅಧ್ಯಕ್ಷ ವೆಂಕಟೇಗೌಡ, ಡಾ.ಸಾವಿತ್ರಿ, ಡಾ.ಸೌಮ್ಯ, ಡಾ. ತೇಜಸ್ವಿ, ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ, ಅರ್ಜುನ್ ಶೆಟ್ಟಿ, ಬಿಜಿವಿಎಸ್ ಅಧ್ಯಕ್ಷ ಗುರುರಾಜು, ಕಲಾವಿದ ಯಾಕೂಬ್, ಡೆಂಟಲ್ ಅಸೋಸಿಯೇಷನ್‌ನ ನಿಖಿತಾ ಇದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''