ಕನ್ನಡಪ್ರಭ ವಾರ್ತೆ ಬೀರೂರು
ಪಟ್ದಣದ ಪುರಸಭಾ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ಲಿಂಗದಹಳ್ಳಿ- ಅಜ್ಜಂಪುರ ರಸ್ತೆಗಳಲ್ಲಿ 7 ಕೋಟಿ ರು. ವೆಚ್ಚದಲ್ಲಿ ದ್ವಿಪಥಗೊಳಿಸಿ ವಿದ್ಯುತ್ ದೀಪಾಲಂಕಾರದ ಜೊತೆ ರಸ್ತೆ ಅಗಲೀಕರಣವು ಸಹ ಆಗಿದ್ದು, ಅದರಂತೆ ಪಟ್ಟಣದಲ್ಲಿ ಹಾದು ಹೋಗಿರುವ ಬಿ.ಎಚ್ ರಸ್ತೆಯ, ತರಳಬಾಳು ಕಲ್ಯಾಣ ಮಂದಿರದಿಂದ ಕೆಇಬಿವರೆಗೂ ರಸ್ತೆಯನ್ನು ದ್ವಿಪಥಗೊಳಿಸಿ, ಕಾಂಕ್ರೀಟ್ ಹಾಗೂ ರಸ್ತೆಯ ಎರಡು ಕಡೆಗಳಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಮಾಡಲು ಸುಮಾರು 30 ಕೋಟಿ ರು. ಅಂದಾಜು ಪಟ್ಟಿ ತಯಾರಿಸಿ ಅನುಮೋದನೆಗೆ ಕಳುಹಿಸಲಾಗಿದ್ದು, ಶೀಘ್ರವೇ ಈ ಕಾಮಗಾರಿ ಪ್ರಾರಂಭಕ್ಕೆ ಭೂಮಿ ಪೂಜೆ ನಡೆಸಲಾಗುವುದು ಎಂದರು.ಮಾರ್ಗದ ಕ್ಯಾಂಪಿನಲ್ಲಿ ಈಗಾಗಲೇ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಅದಕ್ಕೆ ಚಾಲನೆ ನೀಡಿದರೆ ಬೇಸಿಗೆಯನ್ನು ತೂಗಿಸುವುದರ ಜೊತೆ ಸುಮಾರು 6-7 ವಾರ್ಡ್‌ಗಳಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ನೀಡಲಾಗುವುದು ಎಂದರು. ಜೊತೆಗೆ ಕೆ.ಎಸ್.ಆರ್.ಟಿ,ಸಿ ಬಸ್ ನಿಲ್ದಾಣಕ್ಕೆ ನೂತನ ಅಭಿವೃದ್ಧಿಗಾಗಿ 3 ಕೋಟಿ ರು. ಹಣ ಬಿಡುಗಡೆಯಾಗಿದ್ದು, ನಿಲ್ದಾಣವನ್ನು ಶೀಘ್ರದಲ್ಲೇ ನವೀಕರಿಸಲು ಭೂಮಿ ಪೂಜೆ ಮಾಡಲಾಗುವುದು ಎಂದರು.
ಎಸ್.ಆರ್.ಲಕ್ಷ್ಮಯ್ಯ ಬಡಾವಣೆಯಲ್ಲಿ ಶೀಘ್ರ ಜಿ+2 ಮನೆ ನಿರ್ಮಾಣ: ಕಳೆದ ಸಭೆಯಲ್ಲಿ ಎಸ್.ಆರ್.ಲಕ್ಷ್ಮಯ್ಯ ಬಡಾವಣೆ ಮನೆ ನಿರ್ಮಾಣ ಮಾಡಲು ನಕ್ಷೆ ತಯಾರಿಸಿ ಅದರ ಪ್ಲಾನ್ ರಿವಯಸ್ ಮಾಡಲು ಜಿಲ್ಲಾಧಿಕಾರಿಗಳಿಂದ ಮೈಸೂರಿಗೆ ಕಳುಹಿಸಲಾಗಿದ್ದು, ಅದು ಸರ್ಕಾರಕ್ಕೆ ಹೋದ ಮೇಲೆ ಅದನ್ನು ಬದಲಾಯಿಸಿ ಜಿ+2 ಮನೆ ನಿರ್ಮಾಣ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಅಜ್ಜಂಪುರ ರಸ್ತೆ ಪುಟ್‌ಪಾತ್ ತೆರವುಗೊಳಿಸಿ: ಸಭೆಯಲ್ಲಿ ಮಾತನಾಡಿದ ಆಶ್ರಯ ಕಮಿಟಿ ಸದಸ್ಯ ಬಿ.ಟಿ.ಚಂದ್ರಶೇಖರ್, ಅಜ್ಜಂಪುರ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ರಸ್ತೆಗೆ ಜಾಗ ಬಿಡಲು ಕೋಟ್ಯಾಂತರ ರು. ಗಳನ್ನು ಸರ್ಕಾರದಿಂದ ಪಡೆದಿದ್ದರೂ ಸಹ ಜಾಗ ಬಿಡದೆ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತಿದ್ದಾರೆ ಎಂದರು. ಇದಕ್ಕೆ ಉತ್ತರಿಸಿದ ಶಾಸಕ ಆನಂದ್, ಶೀಘ್ರವೇ ಪೊಲೀಸ್ ಬಂದೋಬಸ್ತಿನಲ್ಲಿ ಅತಿಕ್ರಮ ಮಾಡಿದವರನ್ನು ತೆರವುಗೊಳಿಸಿ ಎಂದು ಸೂಚಿಸಿದರು. ಬೀರೂರು ಸ್ಮಶಾಣದ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.