ಕನ್ನಡಪ್ರಭ ವಾರ್ತೆ ಯಾದಗಿರಿ
ಈ ವೇಳೆ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ನಿಜಗುಣ ದೋರಹನಳ್ಳಿ, ಬಿಜೆಪಿ ದೇಶದಲ್ಲಿ ಕೋಮುಗಲಭೆ ಪ್ರಚೋದನೆಗಳಿಗೆ ಮಾತ್ರ ಸೀಮಿತವಾಗಿದೆ. ಬಿಜೆಪಿ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗಿಲ್ಲ. ಬಿಜೆಪಿ ರೈತ ವಿರೋಧಿ ಸರಕಾರ ಮತ್ತು ಸುಳ್ಳಿನ ಪಕ್ಷ. ಆದರೆ, ನಮ್ಮ ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ. ಬಡವರ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಈ ಹಿಂದೆ ವಿಧಾನಸಭಾ ಚನಾವಣಾ ಸಂದರ್ಭದಲ್ಲಿ ಕಾಂಗ್ರಸ್ ಪಕ್ಷ ನೀಡಿದ್ದ ಭರವಸೆಯಂತೆ 5 ಗ್ಯಾರಂಟಿ ಈಡೇರಿಸಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಹಾಗೂ ಪ್ರತಿ ಮಹಿಳೆಯರಿಗೆ ಅನುಕೂಲವಾಗುವಂತೆ ಮತ್ತೆ ಗ್ಯಾರಂಟಿ ಭರವಸೆ ನೀಡಿದ್ದಾರೆ ಎಂದರು.ಈ ವೇಳೆ ಗ್ರಾಮದ ಹಿರಿಯ ಮುಖಂಡರಾದ ಸಿದ್ದಪ್ಪ ರಾಕಂಗೆರ, ಹನುಮಂತ ಕಸನ್, ಮಾನಪ್ಪ ಹಾಲಬಾವಿ, ರಾಯಪ್ಪ ಕೋಂಬಿನ್, ರಾಜು ಕುದರಿ, ಮರಲಿಂಗಪ್ಪ ಕುದರಿ, ಹಣಮಂತ ರಸ್ತಾಪೂರ, ಮಾನಪ್ಪ ಗಡ್ಡಿಮನಿ, ಚಂದ್ರಾಮಪ್ಪ ಕೋಂಬಿನ್ ಇತರರಿದ್ದರು.