ಸತ್ಸಂಗದಿಂದ ನೆಮ್ಮದಿಯ ಜೀವನ ಸಾಧ್ಯ; ಶ್ರೀಮಂತ ಮಹಾರಾಜ

KannadaprabhaNewsNetwork |  
Published : May 27, 2024, 01:04 AM IST
ಮಹಾಲಿಂಗಪುರ  | Kannada Prabha

ಸಾರಾಂಶ

ಮನುಷ್ಯ ಜೀವನದಲ್ಲಿ ನೆಮ್ಮದಿ, ಶುಖ ಶಾಂತಿ ಹೊಂದಬೇಕೆಂದರೆ ಸತ್ಸಂಗದಲ್ಲಿ ಭಾಗವಹಿಸಬೇಕು. ಆಗಲೇ ಜೀವನ ಮುಕ್ತಿ ಹೊಂದಲು ಸಾಧ್ಯ ಎಂದು ಶರಣ ಮಹಾರಾಜರಾದ ಶ್ರೀಮಂತ ಮಹಾರಾಜರು ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಮನುಷ್ಯ ಜೀವನದಲ್ಲಿ ನೆಮ್ಮದಿ, ಶುಖ ಶಾಂತಿ ಹೊಂದಬೇಕೆಂದರೆ ಸತ್ಸಂಗದಲ್ಲಿ ಭಾಗವಹಿಸಬೇಕು. ಆಗಲೇ ಜೀವನ ಮುಕ್ತಿ ಹೊಂದಲು ಸಾಧ್ಯ. ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯ ಒಂದಿಲ್ಲೊಂದು ರೀತಿಯಲ್ಲಿ ಮನಸ್ಸಿಗೆ ಹಿಡಿಸಿದ ಅಧ್ಯಾತ್ಮ ಕಾರ್ಯದಲ್ಲಿ ಭಾಗವಹಿಸಿ ನೆಮ್ಮದಿ ಕಂಡುಕೊಳ್ಳುತ್ತಾನೆ. ಪ್ರತಿಯೊಬ್ಬರೂ ಸತ್ಸಂಗದಲ್ಲಿ ಭಾಗಿಯಾದರೆ ಬದುಕಿನಲ್ಲಿ ಶಾಂತಿ ನೆಮ್ಮದಿ ಹೊಂದಲು ಸಾಧ್ಯ ಎಂದು ಮಾರಾಪುರದ ಇಂಚಗೇರಿ ಸಂಪ್ರದಾಯದ ಶರಣ ಮಹಾರಾಜರಾದ ಶ್ರೀಮಂತ ಮಹಾರಾಜರು ಹೇಳಿದರು.

ಸ್ಥಳೀಯ ಬಸ್ ನಿಲ್ದಾಣದ ಹತ್ತಿರವಿರುವ ಗಿರಿಮಲ್ಲೇಶ್ವರ ಆಶ್ರಮದ 220ನೇ ಸತ್ಸಂಗದ ವಿಶೇಷ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯ ಮಾನಸಿಕ ನೆಮ್ಮದಿಗೆ ನಾನಾ ದಾರಿ ಹುಡುಕಿಕೊಂಡು ಹೋಗುತ್ತಾನೆ. ಆದರೆ ನಿಜವಾಗಿಲೂ ನೆಮ್ಮದಿ ಸಿಗುವುದೇ ಅಧ್ಯಾತ್ಮದಲ್ಲಿ. ಯಾರಕೊಮ್ಮೆಯಾದರೂ ಅಧ್ಯಾತ್ಮ ಸತ್ಸಂಗದಲ್ಲಿ ಪಾಲ್ಗೊಳ್ಳುವುದರಿಣದ ಮಾನಸಿಕ ನೆಮ್ಮದಿ ಹೊಂದಿ ಸುಂದರ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದರು.

ಪ್ರಾಸ್ತವಿಕವಾಗಿ ಮಾತನಾಡಿದ ಡಾ.ಸಂಗಮೇಶ ಹಿಡಕಲ್, ಯಾರು ತನು, ಮನ, ಧನ ಅರ್ಪಿಸಿ ದೇವರ ಸೇವೆ ಮಾಡುತ್ತಾರೋ ಅವರನ್ನು ದೇವರು ಯಾವುದೇ ರೂಪದಲ್ಲಿಯಾದರೂ ಬಂದು ಕಾಪಾಡುತ್ತಾನೆ. ಮಹಾಲಿಂಗಪುರ ನಗರ ಆಧ್ಯಾತ್ಮ ಕ್ಷೇತ್ರದ ಆತ್ಮ ಇದ್ದಂತೆ. ಇಲ್ಲಿ ಒಂದಿಲ್ಲೊಂದು ಅಧ್ಯಾತ್ಮ ಕಾರ್ಯಕ್ರಮ ಪ್ರತಿ ವಾರ ನಡೆಯುತ್ತಿರುತ್ತವೆ ಎಂದರು .

ಡಾ ಮಹಾದೇವ ಕದ್ದಿಮನಿ ಮಾತನಾಡಿ, 1971ರಲ್ಲಿ ಇಂಚಗೇರಿ ಮಾಧವಾನಂದ ಮಹಾರಾಜರು ಮಹಾಲಿಂಗಪುರಕ್ಕೆ ಭೇಟಿ ನೀಡಿದಾಗ ಇದೆ ಸ್ಥಳದಲ್ಲಿ ಸಂಕಲ್ಪ ಮಾಡಿ ಈ ಸ್ಥಳದಲ್ಲಿ ನಮ್ಮ ಗುರುಗಳಾದ ಗಿರಿಮಲ್ಲೇಶ್ವರ ಮಹಾರಾಜರ ಮಂದಿರ ನಿರ್ಮಾಣ ಆಗುತ್ತದೆ ಎಂದಿದ್ದರೋ ಈಗ ಅದೇ ಸ್ಥಳದಲ್ಲಿ ಮಂದಿರ ನಿರ್ಮಾಣವಾಗಿರುವುದು ದೇವರು ಇರುವಿಕೆಗೆ ಸಾಕ್ಷಿಯಾಗಿದೆ. ದೇವರು ಭಕ್ತರ ಮನಸ್ಸಿನಲ್ಲಿ ಸೇರಿ ಪರಿವರ್ತನೆ ತಂದು ಮಂದಿರ ನಿರ್ಮಿಸಲು ಶಕ್ತಿ ನೀಡಿದ್ದಾನೆ ಎಂದರು.

ಅರ್ಜುನ ಸಣ್ಣಕ್ಕಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗೌಡಪ್ಪಗೌಡ ಪಾಟೀಲ, ಟ್ರಸ್ಟ್ ಸದಸ್ಯರಾದ ಚಂದ್ರಪ್ಪ ದೋಣಿ, ಉದ್ದಪ್ಪಗೋಳ, ಶ್ರೀಶೈಲ ರೊಡ್ಡಣ್ಣನವರ, ಬಾಬು ಜೇಡರ, ಗಂಗಾಧರ ಮಗದುಮ್, ಮಲ್ಲಪ್ಪ ಹಳ್ಳೂರು, ಮುದಕಪ್ಪ ದೋಣಿ, ಮುಖಂಡರಾದ ಚಂದ್ರಶೇಖರ ಕೊಳಕಿ, ಗುರಪ್ಪ ಪಂಕಿ, ಗುರುಸಿದ್ದ ಅಂಬಿ, ಬಸವರಾಜ ಪಶ್ಚಾಪುರ, ಡಾ.ಷಣ್ಮುಖ ಕದ್ದಿಮನಿ, ಡಾ.ಮಾನು ಕಲಾಲ, ಮಹಾದೇವ ಕದ್ದಿಮನಿ, ಮೈತ್ರಾದೇವಿ ಕದ್ದಿಮನಿ ಸೇರಿದಂತೆ ಸುತಮುತ್ತಲಿನ ಗ್ರಾಮಗಳ ಹಲವಾರು ಭಕ್ತರು ಭಾಗವಹಿಸಿದ್ದರು. ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಈ ಸಂಧರ್ಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ