ಕನ್ನಡಪ್ರಭ ವಾರ್ತೆ ಮೈಸೂರು
ಸ್ವಾಸ್ಥ್ಯಮುಖಿಯು ಡಾ.ಎನ್.ಮಧುಸೂದನ ಅವರು 1997ರಿಂದ ಈವರೆಗೆ ವಿವಿಧ ಪತ್ರಿಕೆಗಳಲ್ಲಿ ಬರೆದಿರುವ 38 ಲೇಖನಗಳ ಸಂಕಲನ. ಹಸುವಿನ ಹಾಲು, ಪಲ್ಸ್ ಪೋಲಿಯೋ, ಮಲೇರಿಯಾ, ಏಡ್ಸ್, ಕರಳುಬೇನೆ, ಅಂಥ್ರಾಕ್ಸ್, ಡೆಂಘೀ, ಕುಷ್ಠ, ಕ್ಷಯ, ಖಿನ್ನತೆ, ಕೊರೋನಾ, ಮಧುಮೇಹ, ಕೊಬ್ಬು, ಅನೀನಿಯಾ, ಇದಲ್ಲದೇ ಎ ಅನ್ನಾಂಗ, ಸ್ತನ್ಯಪಾನ, ನಿಫಾ ವೈರಸ್, ರೋಟಾವೈರಸ್ ವ್ಯಾಕ್ಸಿನ್, ಪಿಸಿವಿ ಲಸಿಕೆ, ಆಯೋಡಿನ್, ಲಸಿಕೆಗಳ ಆವಿಷ್ಕಾರ, ಜನಸಂಖ್ಯಾ ಸ್ಫೋಟ, ಕುಟುಂಬ ಕಲ್ಯಾಣ ಯೋಜನೆ, ಸೊಳ್ಳೆಗಳ ನಿಯಂತ್ರಣ, ರಕ್ತದಾನ, ಜೀನ್‌ಗಳು-ಹೀಗೆ ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳು ಇವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಡಾ.ಎನ್. ಮಧುಸೂದನ ಅವರು ತಮ್ಮ ಅನುಭವ ಹಾಗೂ ಕ್ಷೇತ್ರ ಕಾರ್ಯಗಳ ಆಧಾರದ ಮೇಲೆಯೇ ಈ ಕೃತಿ ರಚಿಸಿದ್ದು, ವಿಷಯ ವೈವಿಧ್ಯತೆಯಿಂದ ಇದೆ. ಬರವಣಿಗೆ ಸರಳ, ಸುಂದರ ಶೈಲಿಯಿಂದ ಕೂಡಿದ್ದು, ಎಲ್ಲರೂ ಸುಲಭವಾಗಿ ಗ್ರಹಿಸುವಂತಿದೆ. ಆರೋಗ್ಯ ಕ್ಷೇತ್ರದ ವೃತ್ತಿಪರರು, ವಿದ್ಯಾರ್ಥಿಗಳು, ಸಾರ್ವಜನಿಕರಿಗೂ ತುಂಬಾ ಉಪಯುಕ್ತವಾಗಿದೆ.ಮಗುವಿಗೆ ಮೊದಲ ಆರು ತಿಂಗಳು ತಾಯಿ ಹಾಲು ಮಾತ್ರ ನೀಡಬೇಕು. ಮೂಢನಂಬಿಕೆ ಬಿಡಿ, ಕುಷ್ಠ ರೋಗಕ್ಕೆ ಮದ್ದು ನೀಡಿ, ಆಂಟಿಬಯಾಟಿಕ್ಸ್ ಆಟದ ವಸ್ತುವಲ್ಲ ರೋಗನಿರೋಧಕ ಶಕ್ತಿಗೆ ಲಸಿಕೆಗಳು ವರದಾನ, ಅನ್ನವೇ ಬ್ರಹ್ಮ- ಆಹಾರವೇ ಔಷಧ, ಒತ್ತಡಮುಕ್ತ ಜೀವನ ಶೈಲಿ- ಆರೋಗ್ಯಕ್ಕೆ ಸೋಪಾನ ಎಂಬ ಅರಿವು ಮೂಡಿಸಿದ್ದಾರೆ. ಕೋವಿಡ್ ಕೇರ್ ಸೆಂಟರ್‌ನ ಹತ್ತು ದಿನಗಳು- ಅನುಭವ ಕಥನ, ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.
ಬಯಲು ಕವನ ಸಂಕಲನದಲ್ಲಿ 56 ಕವನಗಳಿವೆ. ಈ ಸಂಕಲನದಲ್ಲಿ ಬಯಲು, ದೇವರು, ಅಮ್ಮ, ಜನ್ಮ, ಬೆಳದಿಂಗಳು, ದೃಷ್ಟಿ, ನಿಸರ್ಗ, ಜೀವನ, ಪಯಣ, ಜ್ಞಾನೋದಯ ಸೇರಿದಂತೆ ಬೇರೆ ಬೇರೆ ವಿಷಯಗಳೊಂದಿಗೆ ಕವನ ರಚಿಸಿದ್ದಾರೆ.
ನೀನಾರು ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್, ಬಯಲು ಕವನ ಸಂಕಲನಕ್ಕೆ ಮೈಸೂರು ವಿವಿ ಗಾಂಧಿ ಭವನ ಹಾಗೂ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿವೃತ್ತ ನಿರ್ದೇಶಕ ಪ್ರೊ.ಎಸ್. ಶಿವರಾಜಪ್ಪ ಮುನ್ನುಡಿ ಹಾಗೂ ಶಿವಣ್ಣ ಇಂದ್ವಾಡಿ ಬೆನ್ನುಡಿ ಬರೆದಿದ್ದಾರೆ. ಆಸಕ್ತರು ಡಾ.ಎನ್.ಮಧುಸೂದನ, 99809 44655 ಸಂಪರ್ಕಿಸಬಹುದು. ಕವನಗಳ ಕೆಲ ತುಣುಕುಅಮ್ಮ
ಕಷ್ಟಗಳ ದಾಟಿ
ದಡ ಸೇರಿಸಿದವಳುಅಪ್ಪ
ಎತ್ತಾಡದೇ ಎಲ್ಲರೆದುರು
ಬಾಂಧವ್ಯ ಬೆಸೆದವರೇ...