ಮನುಷ್ಯ ಮತ್ತೊಬ್ಬರಿಗೆ ಕೆಟ್ಟದ್ದನ್ನು ಬಯಸಬಾರದು-ಶಶಿಧರ ಶಾಸ್ತ್ರಿ

KannadaprabhaNewsNetwork |  
Published : Apr 29, 2025, 12:51 AM IST
28ಎನ್.ಆರ್.ಡಿ3 ಬಸವ ಪುರಾಣದಲ್ಲಿ ಶಶಿಧರ ಶಾಸ್ತ್ರೀಗಳು ಮಾತನಾಡುತ್ತಿದ್ದಾರೆ, ಸರ್ ಈ ಸುದ್ದಿಗೆ ಸ್ಪಾನ್ಸರ ಕಾಫೀ ಇವೆ.)   | Kannada Prabha

ಸಾರಾಂಶ

ಸಮಾಜದಲ್ಲಿ ಜೀವಿಸುವ ಮನುಷ್ಯ ತನ್ನ ಕೈಯಿಂದ ಒಳ್ಳೆಯದನ್ನು ಮಾಡಲು ಆಗದಿದ್ದರೆ ಬಿಟ್ಟು ಬಿಡಿ, ಆದರೆ ಮತ್ತೊಬ್ಬರಿಗೆ ಕೆಟ್ಟದ್ದನ್ನು ಬಯಸಬಾರದೆಂದು ಶರಣರು ತಿಳಿಸಿದ್ದಾರೆಂದು ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಶಶಿಧರ ಶಾಸ್ತ್ರಿ ಹಿರೇಮಠ ಹೇಳಿದರು.

ನರಗುಂದ: ಸಮಾಜದಲ್ಲಿ ಜೀವಿಸುವ ಮನುಷ್ಯ ತನ್ನ ಕೈಯಿಂದ ಒಳ್ಳೆಯದನ್ನು ಮಾಡಲು ಆಗದಿದ್ದರೆ ಬಿಟ್ಟು ಬಿಡಿ, ಆದರೆ ಮತ್ತೊಬ್ಬರಿಗೆ ಕೆಟ್ಟದ್ದನ್ನು ಬಯಸಬಾರದೆಂದು ಶರಣರು ತಿಳಿಸಿದ್ದಾರೆಂದು ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಶಶಿಧರ ಶಾಸ್ತ್ರಿ ಹಿರೇಮಠ ಹೇಳಿದರು.

ಅವರು ತಾಲೂಕಿನ ಶಿರೋಳ ಗ್ರಾಮದ ಶ್ರೀ ತೋಂಟದಾರ್ಯ ಮಠದ ಗದ್ದುಗೆ ಶಿಲಾ ಮಂಟಪ ಮತ್ತು ಗೋಪುರ ಲೋಕಾರ್ಪಣೆ ನಿಮಿತ್ತ ನಡೆದ 25ನೇ ದಿನದ ಬಸವ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಸಮಾಜದಲ್ಲಿ ಮನುಷ್ಯ ಶ್ರೀಮಂತನಾಗಿರಲಿ, ಬಡವನಾಗಿರಲಿ ಅವನ್ನಲ್ಲಿ ಒಳ್ಳೆ ಗುಣಗಳು ಇರದಿದ್ದರೆ ಅವನು ಸಮಾಜಕ್ಕೆ ಭಾರವೆಂದು ನಮ್ಮ ಶರಣರು ವಚನಗಳಲ್ಲಿ ಹೇಳುತ್ತಾರೆ ಎಂದರು.

ನಮ್ಮ ಸಮಾಜದಲ್ಲಿ ಇಂದು ಒಬ್ಬ ವ್ಯಕ್ತಿ ಬೆಳೆದರೆ ಮತ್ತೊಬ್ಬ ವ್ಯಕ್ತಿ ಸಹಿಸುವುದಿಲ್ಲ. ಆ ಬೆಳೆದ ವ್ಯಕ್ತಿಯ ಬಗ್ಗೆ ಇಲ್ಲ ಸಲ್ಲದ ಸುಳ್ಳನ್ನು ಸಮಾಜದಲ್ಲಿ ಹೇಳಿ ವ್ಯಕ್ತಿಯ ಗೌರವವನ್ನು ಹಾಳು ಮಾಡಲು ನೋಡುತ್ತಾನೆ. ಈ ಸಮಾಜಕ್ಕೆ ನಮಗೆ ಒಳ್ಳೆಯದನ್ನು ಮಾಡಲಾಗದಿದ್ದರೂ ಸರಿ ನಾವು ಸುಮ್ಮನಿದ್ದು ಬಿಡಬೇಕು. ಆದರೆ ಈ ಸಮಾಜಕ್ಕಾಗಲಿ, ಒಬ್ಬ ವ್ಯಕ್ತಿಗೆ ಕೆಟ್ಟದ್ದನ್ನು ಮಾಡಿದರೆ ಆ ಮನುಷ್ಯನಿಗೆ ಈ ಸಮಾಜದಲ್ಲಿ ಶಾಂತಿ, ನೆಮ್ಮದಿ, ಅವನ ಕುಟುಂಬ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಆದ್ದರಿಂದ ನಾವು ಶರಣರ ಆದರ್ಶಗಳನ್ನು ತಿಳಿದುಕೊಂಡು ಈ ಸಮಾಜದಲ್ಲಿ ಬದುಕಿದರೆ ಆದರ್ಶ ವ್ಯಕ್ತಿಗಳು ಆಗುತ್ತವೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಂತಲಿಂಗ ಶ್ರೀಗಳು, ಅವರಾಧಿ ಶ್ರೀ ಫಲಹಾರೇಶ್ವರ ಮಠದ ಶ್ರೀಗಳು, ಪ್ರಕಾಶಗೌಡ ತಿರಕನಗೌಡ್ರ, ವೀರಯ್ಯ ದೊಡ್ಡಮನಿ, ಶೆಲ್ಲಿಕೇರಿ, ದ್ಯಾಮಣ್ಣ ಕಾಡಪ್ಪನವರ, ನಾಗನಗೌಡ ತಿಮ್ಮನಗೌಡ್ರ, ಲಾಲಸಾಬ ಅರಗಂಜಿ, ನಾಗಲೋಟಿಮಠ, ಶಿವಾನಂದ ಯಲಬಳ್ಳಿ, ಹನಮಂತ ಕಾಡಪ್ಪನವರ, ಪ್ರಾಚಾರ್ಯ ಬಿ.ಆರ್.ಸಾಲಿಮಠ, ಇದ್ದರು.

PREV

Recommended Stories

ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು
ಮುಂದೇಕೆ, ಈಗ್ಲೆ ಮುಸ್ಲಿಂ ಆಗ್ಬಿಡಿ : ಬಿಜೆಪಿಗರ ಕಿಡಿ