ವಡೆಕೆಹಳ್ಳದ ಗ್ರಾಮದ ಬಳಿ ಆಕ್ರಮವಾಗಿ ಗಾಂಜಾ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಆರೋಪಿ ಪತ್ತೆಯಾಗಿದ್ದಾನೆ.
ಹನೂರು: ತಾಲೂಕಿನ ವಡೆಕಹಳ್ಳ ಗ್ರಾಮದ ಬಳಿ ಆಕ್ರಮವಾಗಿ ಒಣ ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊರ್ವನನ್ನು ಅಬಕಾರಿ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ.
ತಾಲೂಕಿನ ವಡ್ಡರದೊಡ್ಡಿ ಗ್ರಾಮದ ಚಾರ್ಲ್ಸ್ಅಂತೋನಿ (50) ಬಂಧಿತ ಆರೋಪಿಯಾಗಿದ್ದಾನೆ. ಬಸವರಾಜ ಹಡಪದ ಅಬಕಾರಿ ಅಬಕಾರಿ ಉಪ ಆಯುಕ್ತರಾದ ಚಂದ್ರ ಪಿ. ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕರಾದ ವಿಜಯಕುಮಾರ ಕೆ .ಟಿ, ನಿರ್ದೇಶನದ ಮೇರೆಗೆ ಚಾಮರಾಜನಗರದ ಅಬಕಾರಿ ನಿರೀಕ್ಷಕರಾದ ಉಮಾಶಂಕರ್ ಹಾಗೂ ಕೊಳ್ಳೇಗಾಲ ಅಬಕಾರಿ ನಿರೀಕ್ಷಕರಾದ ದಯಾನಂದ ನೇತೃತ್ವದ ತಂಡ ವಡೆಕೆಹಳ್ಳದ ಗ್ರಾಮದ ಬಳಿ ಆಕ್ರಮವಾಗಿ ಗಾಂಜಾ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ವಡ್ಡರದೊಡ್ಡಿ ಗ್ರಾಮದ ಚಾರ್ಲ್ಸ್ಅಂತೋನಿ ಎಂಬುವವನನ್ನು ಬಂಧಿಸಿ, ದ್ವಿಚಕ್ರ ವಾಹನ ಹಾಗೂ 1.200 ಕೆ.ಜಿ ಒಣಗಾಂಜಾವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.ಈ ದಾಳಿ ವೇಳೆ ಅಬಕಾರಿ ಇಲಾಖೆಯ ರವಿಕುಮಾರ್, ಮುಖ್ಯ ಪೇದೆ, ಶಿವಣ್ಣ ಅಬಕಾರಿ ಪೇದೆ ಮತ್ತು ವಾಹನ ಚಾಲಕರಾದ ವೀರತಪ್ಪ ಹಾಜರಿದ್ದರು.----------------
9ಸಿಎಚ್‌ಎನ್57
ಹನೂರು ತಾಲೂಕಿನ ವಡೆಕಹಳ್ಳ ಗ್ರಾಮದ ಬಳಿ ಆಕ್ರಮವಾಗಿ ಒಣ ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊರ್ವನನ್ನು ಅಬಕಾರಿ ಪೊಲೀಸರು ವಾಹನ ಸಮೇತ ಬಂಧಿಸಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.