ಕಲಾವಿದರಿಗೆ ಪ್ರೋತ್ಸಾಹ ದೊರೆಯಲು ವೇದಿಕೆ ಅಗತ್ಯ: ಅಭಯ್ ವೈದ್ಯ

KannadaprabhaNewsNetwork |  
Published : Nov 27, 2024, 01:03 AM IST
ಕಲಾವಿದರಿಗೆ ಪ್ರೋತ್ಸಾಹ ನೀಡಲು ವೇದಿಕೆ ಕಲ್ಪಿಸಬೇಕು: ಅಭಯ್ ವೈಧ್ಯ | Kannada Prabha

ಸಾರಾಂಶ

ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಟ್ಟಂದಿ ಗ್ರಾಮದ ರೆಸಾರ್ಟ್‌ನಲ್ಲಿ ಅಯೋಜಿಸಲಾಗಿದ್ದ ಕಲಾ ಉತ್ಸವ ಕೊಡಗು ಅಂಗವಾಗಿ ‘ಇನಿಕಾ ನ್ಯಾಷನಲ್ ಆರ್ಟ್ ಕ್ಯಾಂಪ್‌ ಚಿತ್ರಕಲೆ’ ಕಲಾಶಿಬಿರ ನಡೆಯಿತು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಎಲೆ ಮರೆಯ ಕಾಯಿಯಂತೆ ಹಲವಾರು ಚಿತ್ರ ಕಲಾವಿದರು ತಮ್ಮ ಕಲೆಯ ಆರಾಧನೆ ಮಾಡಿಕೊಂಡು ಜೀವನ ಸಾಗಿಸುತಿದ್ದಾರೆ. ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದಲ್ಲಿ ಅವರು ಬೆಳಕಿಗೆ ಬರುತ್ತದೆ ಎಂದು ಉದ್ಯಮಿ ಅಭಯ್ ವೈದ್ಯ ಅಭಿಪ್ರಾಯಪಟ್ಟಿದ್ದಾರೆ.

ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಟ್ಟಂದಿ ಗ್ರಾಮದ ರೆಸಾರ್ಟ್‌ನಲ್ಲಿ ಅಯೋಜಿಸಲಾಗಿದ್ದ ಕಲಾ ಉತ್ಸವ ಕೊಡಗು ಅಂಗವಾಗಿ ‘ಇನಿಕಾ ನ್ಯಾಷನಲ್ ಆರ್ಟ್ ಕ್ಯಾಂಪ್‌ ಚಿತ್ರಕಲೆ’ ಕಲಾಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಚಿತ್ರಕಲೆ ವಿಶ್ವವ್ಯಾಪಿಯಾಗಿದೆ. ಚಿತ್ರಕಲೆಗೆ ಜಾತಿ, ಧರ್ಮ ಭೇದವಿಲ್ಲ. ಕಲೆಯು ಮನದ ಭಾವನೆಯನ್ನು ಕುಂಚದ ಮೂಲಕ ಪರದೆಯಲ್ಲಿ ಬಿಂಬಿಸುವ ವ್ಯವಸ್ಥೆಯಾಗಿದೆ. ಕಲಾವಿದರು ರಚಿಸುವ ಚಿತ್ರಗಳನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಲು ಸಂಘ ಸಂಸ್ಥೆಗಳು ಮುಂದಾಗಬೇಕು. ಇದರಿಂದ ಕಲಾವಿದರ ಆರ್ಥಿಕ ಮಟ್ಟ ಸುಧಾರಿಸುತ್ತದೆ ಎಂದರು.

ಹಾಸನದ ಚಿತ್ರಕಲಾವಿದ ಚಂದ್ರಕಾಂತ್‌ ನಾಯರ್‌ ಮಾತನಾಡಿ, ಕೊಡಗು ಜಿಲ್ಲೆ ಪ್ರಕೃತಿ ರಮಣೀಯವಾಗಿದ್ದು. ಇಲ್ಲಿನ ವಾತವರಣ ಚಿತ್ರಕಲಾವಿದರಿಗೆ ಹೇಳಿ ಮಾಡಿಸಿದಂತಿದೆ ಎಂದರು.

ಕಲಾ ಉತ್ಸವ ಕೊಡಗು ಪ್ರಮುಖ ಆಯೋಜಕ ಸಾಧಿಕ್ ಹಂಸ ಮಾತನಾಡಿ, ಕಲಾ ಉತ್ಸವ ಆರಂಭಗೊಂಡು 8 ವರ್ಷಗಳು ಸಂದಿವೆ. ಈ ಅವಧಿಯಲ್ಲಿ ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ 100ಕ್ಕಿಂತ ಹೆಚ್ಚು ಮಂದಿ ಕಲಾ ಶಿಬಿರದಲ್ಲಿ ಭಾಗವಹಿಸಿ ತಮ್ಮ ಕಲಾಸುಧೆ ಧಾರೆಎರೆದಿದ್ದಾರೆ ಎಂದರು.

ಶಿಬಿರದಲ್ಲಿ ಬಾವಾ ಮಾಲ್ದಾರೆ, ಬಿ.ಆರ್. ಸತೀಶ್, ಎಂ.ಬಿ.ರಂಜು ಇರಿಟ್ಟಿ, ತುಫೇಲ್ ಕೆ.ಎಲ್., ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಸಿಂಜಿತ್ ಕುಮಾರ್, ಸತೀಶ್ ಶೈಲಂ, ಬೈಜು ಕೆ ತಟ್ಟಿಲ್, ಮಂಡೇಪಂಡ ಎಸ್. ಉತ್ತಪ್ಪ ಮತ್ತಿತರರು ಭಾಗವಹಿಸಿದ್ದರು.

ಹಿರಿಯ ಚಿತ್ರ ಕಲಾವಿದ ಬಾವಾ ಮಾಲ್ದಾರೆ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಕ್ಯಾಲಿಗ್ರಫಿಗೆ ಲಭಿಸಿದ ಅಂತಾರಾಷ್ಟ್ರೀಯ ಪ್ರಶಸ್ತಿ
569 ಲೈಸೆನ್ಸ್‌ ಇ-ಹರಾಜಿಗೆ ಮುಂದಾದ ಅಬಕಾರಿ ಇಲಾಖೆ