ಕನ್ನಡಪ್ರಭ ವಾರ್ತೆ ದಾವಣಗೆರೆ
ಮಹಾನಗರ ಪಾಲಿಕೆಯ ವತಿಯಿಂದ ₹2.5 ಕೋಟಿ ವೆಚ್ಚದಲ್ಲಿ ಇಲ್ಲಿನ 2ನೇ ವಾರ್ಡ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದಾವಣಗೆರೆ ನಗರ ಮತ್ತು ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಿರಂತರ ಅನುದಾನ ನೀಡುತ್ತಿದೆ. ಈ ಅನುದಾನದಲ್ಲಿ ಅವಶ್ಯಕತೆ ಇರುವ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸದೇ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.ಮಹಾಪೌರರಾದ ಕೆ.ಚಮನ್‌ಸಾಬ್ ಮಾತನಾಡಿ, ದಾವಣಗೆರೆಗೆ ಶಾಮನೂರು ಕುಟುಂಬದ ಕೊಡುಗೆ ಸಾಕಷ್ಟಿದ್ದು, ಅವರ ಅಭಿವೃದ್ಧಿ ಚಿಂತನೆ ಇತರರಿಗೆ ಮಾದರಿ ಆಗಿದೆ. ಸ್ವತಃ ಮುಖ್ಯಮಂತ್ರಿಗಳೇ ದಾವಣಗೆರೆ ಅಭಿವೃದ್ಧಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಉಪ ಮಹಾಪೌರರಾದ ಸೋಗಿ ಶಾಂತಕುಮಾರ್, ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಧಾ ಇಟ್ಟಿಗುಡಿ ಮಂಜುನಾಥ್, ಸವಿತಾ ಗಣೇಶ್ ಹುಲ್ಮನಿ, ಆಶಾ ಉಮೇಶ್, ಸದಸ್ಯರಾದ ನೂರ್‌ಜಹಾನ್ ಬೀ, ಜಾಕೀರ್ ಅಲಿ, ಜಿ.ಡಿ.ಪ್ರಕಾಶ್, ಕಬೀರ್ ಅಲಿ, ದಾದಾಪೀರ್ (ಅಯ್ಯಪ್ಪ ದಾದು) ಶಫೀಕ್ ಪಂಡಿತ್, ಮಹಾನಗರ ಪಾಲಿಕೆ ಅಭಿಯಂತರರು ಸೇರಿ ಅನೇಕರಿದ್ದರು.