ಸಮಸ್ಯೆ ಇದ್ರೆ ನೇರವಾಗಿ ನನ್ನ ಗಮನಕ್ಕೆ ತನ್ನಿ: ಜಿಲ್ಲಾಧಿಖಧಿಕಾರಿ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಅಧಿಕಾರಿಗಳೆ ದಿನದ ಅರ್ಧದಿನ ಕಚೇರಿಯಲ್ಲಿ ಜನರ ಕೆಲಸ ಮಾಡಿ ಇನ್ನೂಳಿದ ಅರ್ಧದಿನ ಇಲಾಖೆ ಕಾರ್ಯವ್ಯಾಪ್ತಿಗೆ ಹೋಗಿ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ನಡೆಸಿದ್ರೆ ೬ ತಿಂಗಳಲ್ಲಿ ಆಗುವ ಕೆಲಸ ಕೇವಲ ಮೂರೇ ತಿಂಗಳಲ್ಲಿ ಆಗುತ್ತೆ ಎಂದು ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅಧಿಕಾರಿಗಳಿಗೆ ಚಾಟಿ ಬೀಸಿದರು.ಪಟ್ಟಣದ ತಹಸೀಲ್ದಾರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಜನಸಂಪರ್ಕ ಮತ್ತು ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಸರ್ಕಾರದಿಂದ ಕಾಮಗಾರಿಗಳ ಅನುಮೋದನೆ ಸಿಕ್ಕಿದೆ. ಅನುದಾನಗಳು ಬಿಡುಗಡೆ ಆಗಿದೆ, ಆದರೇ ಕಾಮಗಾರಿಗಳೆ ಪ್ರಾರಂಭವಾಗಿಲ್ಲ ಏಕೆ. ಕಾಮಗಾರಿ ಪ್ರಾರಂಭಿಸಿ ಪೂರ್ಣಗೊಳಿಸಲು ೬ ತಿಂಗಳು ಏಕೆ ಬೇಕು. ಸಮಸ್ಯೆ ಇದ್ರೆ ನೇರವಾಗಿ ನನ್ನ ಗಮನಕ್ಕೆ ತನ್ನಿ ತಕ್ಷಣ ಪರಿಹಾರ ನೀಡುವ ಕೆಲಸ ಮಾಡೋಣ ಎಂದರು.ಜಿಪಂ ಸಿಇಓ ಆಗಿ ಈಗ ಜಿಲ್ಲಾಧಿಕಾರಿ
ನಾನು ಜಿಪಂ ಸಿಇಒ ಆಗಿ ಈಗ ಜಿಲ್ಲಾಧಿಕಾರಿ ಆಗಿದ್ದೀನಿ. ನನಗೆ ಗ್ರಾಪಂಗೆ ಬರುವ ಅನುದಾನಗಳ ಬಗ್ಗೆ ಮಾಹಿತಿ ಇದೆ. ಗ್ರಾಮಗಳ ಸ್ವಚ್ಚತೆಗೆ ೧೫ನೇ ಹಣಕಾಸು ಅಥವಾ ವರ್ಗ-೧ರ ಹಣ ಬಳಕೆಗೆ ಅವಕಾಶವಿದೆ. ಗ್ರಾಮಗಳ ನೈರ್ಮಲ್ಯಕ್ಕೆ ಪ್ರಮುಖ ಆದ್ಯತೆ ನೀಡಬೇಕು. ಅನಾರೋಗ್ಯ ಹರಡದಂತೆ ಗ್ರಾಪಂ ಪಿಡಿಒಗಳು ತುರ್ತಾಗಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಜಿಪಂ ಸಿಗೊಓ ಅಶ್ವಿಜಾ, ಮಧುಗಿರಿ ಎಸಿ ಶಿವಪ್ಪ ಗೋಟೋರು, ತಹಸೀಲ್ದಾರ್ ಮಂಜುನಾಥ, ತಾಪಂ ಇಒ ಅಪೂರ್ವಾ, ಸಿಪಿಐ ಅನಿಲ್, ಯಮುನಾ, ಅನಂತರಾಜು, ಗಂಗಾಧರ್, ಪ್ರಸನ್ನಕುಮಾರ್, ದೀಪಕ್, ಉಮೇಶ್, ಕಾಂತರಾಜು, ಜಿಪಂ ದಯಾನಂದ ಸೇರಿದಂತೆ ಇತರರು ಇದ್ದರು.ಬಾಕ್ಸ್ .
೨೨೫ಕ್ಕೂ ಅಧಿಕ ಅರ್ಜಿಗಳ ಸ್ವೀಕಾರ..೨೦ಕ್ಕೂ ಅಧಿಕ ಇಲಾಖೆಯಲ್ಲಿ ಬಡಜನರ ಕೆಲಸವಾಗದೆ ಹಾಗೆ ಉಳಿದಿದ್ದ ೨೨೫ಕ್ಕೂ ಅಧಿಕ ಜನರು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು. ಅದರಲ್ಲಿ ಕಂದಾಯ ಇಲಾಖೆಗೆ ೧೪೧, ತಾಪಂ ಇಲಾಖೆಗೆ ೩೬, ಪಪಂ ಗೆ ಸಂಬಂಧಿಸದ ೬ ಅರ್ಜಿ, ಹೇಮಾವತಿ ನಾಲಾಗೆ ಸಂಬಂಧಿಸಿದ ೧ ಅರ್ಜಿಗಳ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದ್ದು, ಸ್ಥಳದಲ್ಲಿಯೇ ೨೭ಜನರ ಸಮಸ್ಯೆಯ ಬಗ್ಗೆ ನಾನೇ ಖುದ್ದಾಗಿ ಬಗೆಹರಿಸುತ್ತೇನೆ. ಇನ್ನೂಳಿದ ಅರ್ಜಿಗಳನ್ನು ವಾರದೊಳಗೆ ಬಗೆಹರಿಸಿ ಮಾಹಿತಿ ನೀಡುವಂತೆ ಸೂಚಿಸಿದರು.