ಅಗ್ರಹಾರ ಗ್ರಾಮದಲ್ಲಿ ನೂರಾರು ಜನ ಯುವ ಕ್ರೀಡಾಪಟುಗಳು ಸಮಾಜ ಸೇವಕ ಎಂಎನ್ಜೆ ಮಂಜುನಾಥ ಅವರಿಗೆ ಬೈರೇನಹಳ್ಳಿಯಿಂದ ಅಗ್ರಹಾರದವರೆಗೆ ಬೈಕ್ ರ್ಯಾಲಿ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ನಂತರ ಮಂಜುನಾಥ ದಸರಾ ಕ್ರೀಡೆ ಭಾಗವಾದ ಕ್ರಿಕೆಟ್ ಟೂರ್ನಿಗೆ ಆಟ ಆಡುವ ಮೂಲಕ ಚಾಲನೆ ನೀಡಿ ಯುವಕರಿಗೆ ಪ್ರೋತ್ಸಾಹ ನೀಡಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಪ್ರತಿ ಗಾಮ ಪಂಚಾಯಿತಿಗೊಂದು ಕ್ರೀಡಾಂಗಣ ಇದ್ದರೆ ಗ್ರಾಮೀಣ ಭಾಗದಲ್ಲಿ ಹಲವು ಕ್ರೀಡಾಪಟುಗಳು ಸೃಷ್ಟಿಯಾಗುತ್ತಾರೆ. ಗ್ರಾಮೀಣ ಕ್ರೀಡೆಗಳು ಜೀವಂತವಾಗಿದ್ದರೆ ಯುವಕರ ಅನಾರೋಗ್ಯ ದೂರವಾಗುತ್ತದೆ. ಆದ್ದರಿಂದ ಕ್ರೀಡಾಂಗಣ ನೀಡುವುದು ಸರ್ಕಾರಗಳ ಪ್ರಮುಖ ಕರ್ತವ್ಯ ಎಂದು ಸಮಾಜ ಸೇವಕ ಎಂಎನ್ಜೆ ಮಂಜುನಾಥ ಆಗ್ರಹ ಮಾಡಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಅಗ್ರಹಾರ ಗ್ರಾಮದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ದಸರಾ ಕ್ರಿಕೆಟ್ ಕಪ್ ಟೂರ್ನಮೆಂಟ್ ಗೆ ಚಾಲನೆ ನೀಡಿ ಮಾತನಾಡಿದರು.
ಯುವ ಜನತೆ ಕ್ರೀಡೆಯ ಮೂಲಕ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಕ್ರೀಡೆಯು ಶಿಸ್ತು, ನಾಯಕತ್ವದ ಗುಣ ಕಲಿಸುತ್ತದೆ ಜೊತೆಗೆ ಅನೇಕ ಪ್ರತಿಭಾವಂತ ಕ್ರೀಡಾಪಟುಗಳು ಸೃಷ್ಟಿ ಆಗುತ್ತಾರೆ. ಯುವಕರಿಗೆ ಕ್ರೀಡಾ ಸೌಲಭ್ಯದ ಜೊತೆ ಆಟದ ಮೈದಾನ ಕಲ್ಪಿಸುವುದು ಗ್ರಾಮೀಣ ಅಭಿವೃದ್ಧಿಯ ಜವಾಬ್ದಾರಿಯೂ ಹೌದು ಎಂದು ತಿಳಿಸಿದರು.
ಅಗ್ರಹಾರ ಗ್ರಾಮದಲ್ಲಿ ನೂರಾರು ಜನ ಯುವ ಕ್ರೀಡಾಪಟುಗಳು ಸಮಾಜ ಸೇವಕ ಎಂಎನ್ಜೆ ಮಂಜುನಾಥ ಅವರಿಗೆ ಬೈರೇನಹಳ್ಳಿಯಿಂದ ಅಗ್ರಹಾರದವರೆಗೆ ಬೈಕ್ ರ್ಯಾಲಿ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ನಂತರ ಮಂಜುನಾಥ ದಸರಾ ಕ್ರೀಡೆ ಭಾಗವಾದ ಕ್ರಿಕೆಟ್ ಟೂರ್ನಿಗೆ ಆಟ ಆಡುವ ಮೂಲಕ ಚಾಲನೆ ನೀಡಿ ಯುವಕರಿಗೆ ಪ್ರೋತ್ಸಾಹ ನೀಡಿದರು.
ಕಾರ್ಯಕ್ರಮದಲ್ಲಿ ಅರಸಾಪುರ ಗ್ರಾಪಂ ಮಾಜಿ ಅಧ್ಯಕ್ಷ ರಾಮಕೃಷ್ಣಯ್ಯ, ಬಿ.ಎಸ್.ರಾಜಣ್ಣ, ಮಂಜುನಾಥ, ಮುಖಂಡರಾದ ನಯಾಜ್ ಅಹಮ್ಮದ್, ಆನಂದ್, ಮರುಡಪ್ಪ, ರಾಯವಾರ ರಾಮಕೃಷ್ಣ, ನಂದೀಶ್, ಶಿವಕುಮಾರ್, ಮದನ್, ಪುರುಷೋತ್ತಮ, ಜಯಣ್ಣ, ಮಂಜುನಾಥ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.