ರಾಜ್ಯದಲ್ಲಿ ದಲಿತರು ಎದುರಿಸುತ್ತಿರುವ ಹಲವು ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸರ್ಮಪಕವಾದ ಯೋಜನೆ ರೂಪಿಸಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಗೆ ರಾಜ್ಯ ಛಲವಾದಿ ಮಹಾಸಭಾ ಮನವಿ ಮಾಡಿದೆ.
ಬಾಗಲಕೋಟೆ: ರಾಜ್ಯದಲ್ಲಿ ದಲಿತರು ಎದುರಿಸುತ್ತಿರುವ ಹಲವು ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸರ್ಮಪಕವಾದ ಯೋಜನೆ ರೂಪಿಸಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಗೆ ರಾಜ್ಯ ಛಲವಾದಿ ಮಹಾಸಭಾ ಮನವಿ ಮಾಡಿದೆ.
ಬಾಗಲಕೋಟ ಜಿಲ್ಲಾಧ್ಯಕ್ಷ ಪ್ರೇಮನಾಥ ಗರಸಂಗಿ ಅವರ ನೇತೃತ್ವದ ನಿಯೋಗ ಬೆಳಗಾವಿ ಸುವರ್ಣಸೌಧದಲ್ಲಿ ಭೇಟಿಯಾಗಿ ಮನವಿ ಮಾಡಿತು. ವಿಷಯದ ಗಂಭೀರತೆ ಅರಿತ ನಾರಾಯಣಸ್ವಾಮಿ ಅವರು ಈ ಸಂಬಂಧ ತಾವು ಶೀಘ್ರದಲ್ಲಿ ದಲಿತ ಮುಖಂಡರ ಸಭೆ ಕರೆದು ಸಮಾಲೋಚನೆ ಮಾಡಿ ಒಂದು ನಿರ್ಧಾರಕ್ಕೆ ಬರುವ ಅಶ್ವಾಸನೆ ನೀಡಿದರು. ಮನವಿಯಲ್ಲಿ ಇನ್ನಿತರೆ ಬೇಡಿಕೆಗಳಾದ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಒನಕೆ ಓಬವ್ವನ ಹೆಸರು ಇಡುವುದು ಹಾಗೂ ನವಬೌದ್ಧರಿಗೆ ಗಣಕೀಕೃತ ಪ್ರಮಾಣ ಪತ್ರ ನೀಡುವುದು ಸೇರಿ ಅನೇಕ ಸಮಸ್ಯೆಗಳ ಬಗ್ಗೆ ಪರಿಹಾಕ್ಕೆ ತಾವು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. ನಿಯೋಗದಲ್ಲಿ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಬಾಗಲಕೋಟೆ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಚಲವಾದಿ, ಪ್ರಧಾನ ಕಾರ್ಯದರ್ಶಿ ಎನ್.ಬಿ.ಗಸ್ತಿ, ಪದಾಧಿಕಾರಿಗಳಾದ ಮಹೇಶ ಬೀಳಗಿ, ಮನೋಹರ ಗರಸಂಗಿ, ಆನಂದ ನಾರಾಯಣಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.