ಕನ್ನಡಪ್ರಭ ವಾರ್ತೆ, ತರೀಕೆರೆ
ಪ್ರವಾಸಿ ಮಂದಿರದ ಆವರಣದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಪ್ರತಿಮೆಗೆ ಸಮ್ಮೇಳನಾಧ್ಯಕ್ಷ ಡಾ.ಎ.ಎಸ್.ಶಂಕರನಾರಾಯಣ, ಮಾಲಾರ್ಪಣೆ ನೆರವೇರಿಸಿದರು, ನಂತರ ಮಾಜಿ ಪುರಸಭಾಧ್ಯಕ್ಷ ಎಂ.ನರೇಂದ್ರ ಮೆರವಣಿಗೆ ಉದ್ಘಾಟಿಸಿ ಶುಭ ಕೋರಿದರು. ಕಸಾಪ ಅಧ್ಯಕ್ಷ ರವಿ ದಳವಾಯಿ, ಕನ್ನಡಶ್ರೀ ಬಿ.ಎಸ್.ಭಗವಾನ್, ಕಸಾಪ ಪದಾಧಿಕಾರಿಗಳು ಇದ್ದರು.
ಸಮ್ಮೇಳನಾಧ್ಯಕ್ಷ ಡಾ.ಎ.ಎಸ್.ಶಂಕರನಾರಾಯಣ ದಂಪತಿ ಇದ್ದ ಅಲಂಕೃತ ವಾಹನಕ್ಕೆ ಸ.ನೌ.ಸಂಘದ ಅಧ್ಯಕ್ಷ ಸಿ.ಆರ್.ಅನಂತಪ್ಪ ಚಾಲನೆ ನೀಡಿದರು.ಪೂರ್ಣಕುಂಬ, ಮಂಗಳವಾದ್ಯ, ಡೊಳ್ಳು ಕುಣಿತದಂತಹ ಅನೇಕ ಕಲಾ ತಂಡಗಳು ಮತ್ತು ಭಜನಾ ಮಂಡಳಿಯ ಸದಸ್ಯೆಯರು ಭಾಗವಹಿಸಿದ್ದು ವಿಶೇಷ ಮೆರಗು ತಂದು ಕೊಟ್ಟಿತು.