ಮನುಷ್ಯನಿಗೆ ಅತ್ಯಗತ್ಯ ಸೇವೆ ನೀಡುವ ವೃತ್ತಿ ಔಷಧ ವರ್ತಕರದ್ದು-ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Mar 22, 2024, 01:12 AM IST
ಫೋಟೊ ಶೀರ್ಷಿಕೆ: 21ಆರ್‌ಎನ್‌ಆರ್4ರಾಣಿಬೆನ್ನೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಔಷಧ ವ್ಯಾಪಾರಸ್ಥರ ಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. | Kannada Prabha

ಸಾರಾಂಶ

ಮನುಷ್ಯನಿಗೆ ಅತ್ಯಗತ್ಯ ಸೇವೆ ನೀಡುವ ವೃತ್ತಿ ಔಷಧ ವರ್ತಕರದಾಗಿದೆ. ಇದೊಂದು ವಿಶ್ವಾಸಾರ್ಹ ವೃತ್ತಿಯಾಗಿದೆ. ಲಾಭ ನಷ್ಟದ ಜತೆ ಮಾನವೀಯ ಸೇವೆ ಕಲ್ಪಿಸುವುದಾಗಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಣಿಬೆನ್ನೂರು: ಮನುಷ್ಯನಿಗೆ ಅತ್ಯಗತ್ಯ ಸೇವೆ ನೀಡುವ ವೃತ್ತಿ ಔಷಧ ವರ್ತಕರದಾಗಿದೆ. ಇದೊಂದು ವಿಶ್ವಾಸಾರ್ಹ ವೃತ್ತಿಯಾಗಿದೆ. ಲಾಭ ನಷ್ಟದ ಜತೆ ಮಾನವೀಯ ಸೇವೆ ಕಲ್ಪಿಸುವುದಾಗಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು. ತಾಲೂಕಿನ ಮಾಕನೂರ ಕ್ರಾಸ್ ಬಳಿ ಇಟ್ಟಿಗೆ ಭಟ್ಟಿಯವರು, ನಗರದ ಔಷಧ ವ್ಯಾಪಾರಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಯವರೊಂದಿಗೆ ಗುರುವಾರ ಸಭೆ ನಡೆಸಿ ಅವರು ಮಾತನಾಡಿದರು. ಎಲ್ಲ ಕ್ಷೇತ್ರದ ಹಾಗೂ ಎಲ್ಲ ವೃತ್ತಿಯವರು ಬೆಳೆಯಬೇಕು. ಅದಕ್ಕೆ ಅಗತ್ಯವಾದ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಮುಂದಿನ ದಿನದಲ್ಲಿ ನಮ್ಮ ಸರ್ಕಾರದಿಂದ ಎಲ್ಲ ವೃತ್ತಿಯವರು ಬೆಳೆಯುವ ರೀತಿಯಲ್ಲಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದರು.ಯಾವ ಜನ್ಮದ ಋಣವೋ ಗೊತ್ತಿಲ್ಲ. ನಾನು ಹೋದ ಎಲ್ಲ ಕಡೆಗಳಲ್ಲಿ ಅಪಾರ ಜನ ಬೆಂಬಲ ದೊರೆಯುತ್ತಿದೆ. ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.ಬಿಜೆಪಿಯಲ್ಲಿ ಭುಗಿಲೆದ್ದಿರುವ ಅಸಮಾಧಾನ ವಿಚಾರಕ್ಕೆ ಪ್ರಕ್ರಿಯಿಸಿದ ಅವರು, ಈಗಾಗಲೇ ವರಿಷ್ಠರು ಅಸಮಾಧಾನ ಹೊಂದಿದವರೊಂದಿಗೆ ಮಾತನಾಡುತ್ತಿದ್ದಾರೆ. ಇನ್ನೂ ಎರಡ್ಮೂರು ದಿನದಲ್ಲಿ ಸರಿಯಾಗುತ್ತದೆ. ಒಬ್ಬೊಬ್ಬರನ್ನಾಗಿ ನಾಯಕರು ಮಾತಾಡಿಸುವ ಪ್ರಯತ್ನ ನಡೆದಿದೆ. ಟಿಕೆಟ್ ಸಿಗದ ಕಾರಣ ಬೇಸರವಿದೆ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಭಾರತಿ ಜಂಬಗಿ, ರಮೇಶ ಗುತ್ತಲ, ಚೋಳಪ್ಪ ಕಸವಾಳ, ಪರಮೇಶ ಗೂಳಣ್ಣನವರ, ಬಸವರಾಜ ಕೇಲಗಾರ, ಮಲ್ಲಿಕಾರ್ಜುನ ಅಂಗಡಿ, ಅಮೋಘ ಬದಾಮಿ, ಬಸವರಾಜ ಹುಲ್ಲತ್ತಿ, ಮೈಲಪ್ಪ ಗೋಣಿಬಸಮ್ಮನವರ, ತುಳಸಿದಾಸ ಇಲಕಲ್ಲ, ರೂಪಾ ಬಾಕಳೆ, ಮಂಜುಳಾ ಹತ್ತಿ, ಗೀತಾ ಜಂಬಗಿ, ದೀಪಕ ಹರಪನಹಳ್ಳಿ, ಲಲಿತಾ ಜಾಧವ, ಪ್ರಭು ಎಳೆಹೊಳಿ, ಪ್ರಕಾಶ ಪೂಜಾರ ಮತ್ತಿತರರಿದ್ದರು.

ಶಿವಾನಂದ ಹೇಳಿಕೆಗೆ ತಿರುಗೇಟು...ಲೋಕಸಭಾ ಚುನಾವಣೆಯಲ್ಲಿ ಬೊಮ್ಮಾಯಿ ಒಬ್ಬಂಟಿ ಎಂಬ ಶಿವಾನಂದ ಪಾಟೀಲ ಹೇಳಿಕೆಗೆ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ, ಶಿವಾನಂದ ಹಾವೇರಿಗೆ ಹೊಸಬರು. ಇಡೀ ಹಾವೇರಿ-ಗದಗ ಜಿಲ್ಲೆಯ ಜನರು ನನ್ನ ಹಿಂದೆ ಇದ್ದಾರೆ. ನಿನ್ನೆ ಅವರ ಕಾರ್ಯಕ್ರಮದಲ್ಲಿ ಸ್ಟೇಜ್ ಮೇಲೆ ಜನರು ಸೇರಿದ್ದರು. ಆದರೆ ಕೆಳಗೆ ಇರಲಿಲ್ಲ. ಅದು ಯಾವುದರ ಸಂಕೇತ ತೋರಿಸುತ್ತದೆ ಎಂದು ಪ್ರಶ್ನಿಸಿದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ