26ರಂದು ದೇಶವೇ ತಿರುಗಿ ನೋಡುವಂತೆ ಕಾರ್ಯಕ್ರಮ ಆಯೋಜನೆ

KannadaprabhaNewsNetwork |  
Published : Nov 21, 2025, 01:15 AM IST
ಪಟ್ಟಣದ ತೀನಂಶ್ರೀಭವನದಲ್ಲಿ ನವೆಂಬರ್ ೨೬ರಂದು ನಡೆಯಲಿರುವ ಸರ್ವದಾರ್ಶನಿಕರ ಜಯಂತೋತ್ಸವದ ಅಂಗವಾಗಿ ೫೨ದಾರ್ಶನಿಕರ ಭಾವಚಿತ್ರಗಳನ್ನು ಆಯಾ ಸಮುದಾಯದ ಮುಖಂಡರುಗಳಿಗೆ ಶಾಸಕ ಸಿ.ಬಿ.ಸುರೇಶ್‌ಬಾಬು ವಿತರಿಸಿದರು. | Kannada Prabha

ಸಾರಾಂಶ

ನಮ್ಮ ನಾಡು ಕಂಡಂತಹ ಎಲ್ಲಾ ಮಹಾ ದಾರ್ಶನಿಕರ ಜಯಂತಿಗಳನ್ನು ಒಂದೇ ದಿನ ಒಂದೇ ವೇದಿಕೆಯಲ್ಲಿ ಆಚರಿಸುತ್ತಿರುವುದು ಇತಿಹಾಸದಲ್ಲೇ ಮೊದಲು. ಈ ಕಾರ್ಯಕ್ರಮವನ್ನು ಈಡೀ ದೇಶವೇ ತಿರುಗಿ ನೋಡುವಂತೆ ನಡೆಯಲಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ನಮ್ಮ ನಾಡು ಕಂಡಂತಹ ಎಲ್ಲಾ ಮಹಾ ದಾರ್ಶನಿಕರ ಜಯಂತಿಗಳನ್ನು ಒಂದೇ ದಿನ ಒಂದೇ ವೇದಿಕೆಯಲ್ಲಿ ಆಚರಿಸುತ್ತಿರುವುದು ಇತಿಹಾಸದಲ್ಲೇ ಮೊದಲು. ಈ ಕಾರ್ಯಕ್ರಮವನ್ನು ಈಡೀ ದೇಶವೇ ತಿರುಗಿ ನೋಡುವಂತೆ ನಡೆಯಲಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಪಟ್ಟಣದ ತೀನಂಶ್ರೀಭವನದಲ್ಲಿ ನವೆಂಬರ್ ೨೬ರಂದು ನಡೆಯಲಿರುವ ಸರ್ವದಾರ್ಶನಿಕರ ಜಯಂತ್ಯುತ್ಸವದ ಅಂಗವಾಗಿ ೫೨ದಾರ್ಶನಿಕರ ಭಾವಚಿತ್ರಗಳನ್ನು ಆಯಾ ಸಮುದಾಯದ ಮುಖಂಡರುಗಳಿಗೆ ವಿತರಿಸಿ ಮಾತನಾಡಿದ ಅವರು, ಧರ್ಮಾತೀತವಾಗಿ, ಜಾತ್ಯತೀತವಾಗಿ, ಪಕ್ಷಾತೀತವಾಗಿ ಎಲ್ಲರೂ ಒಂದೇ ಭಾವನೆ ಎಂದು ನಮ್ಮ ದಾರ್ಶನಿಕರ ಜಯಂತಿಗಳನ್ನು ಒಂದೇ ದಿನ ಒಂದೇ ವೇದಿಕೆಯಲ್ಲಿ ಎಲ್ಲಾ ಸಮುದಾಯಗಳ ಸ್ವಾಮಿಜಿಗಳು, ಮುಖಂಡರುಗಳನ್ನೊಳಗೊಂಡು ಆಯೋಜಿಸಲಾಗಿದೆ ಎಂದರು.

ನವೆಂಬರ್ ೨೬ರಂದು ವಿಶೇಷ ಸಂವಿಧಾನ ಸಮರ್ಪಣಾ ದಿನಾವಾಗಿದ್ದು ಅಂದು ತಾಲೂಕು ಆಡಳಿತ ಸೌಧದ ಮುಂಭಾಗ ಅಂಬೇಡ್ಕರ್ ಹಾಗೂ ಗಾಂಧಿ ಕಂಚಿನ ಪುತ್ಥಳಿಗಳನ್ನು ಅನಾವರಣ ಮಾಡಲಿದ್ದು ಇದರೊಂದಿಗೆ ಎಲ್ಲಾ ದಾರ್ಶನಿಕರ ಭಾವಚಿತ್ರ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ಯಾವುದೇ ಮಹನೀಯರು ಮೇಲು ಕೀಳು ಎಂಬ ಭಾವನೆ ಬಾರದಂತೆ ಕ್ಯಾಲೆಂಡರ್‌ನಲ್ಲಿ ಬರುವಂತೆ ಮೊದಲಿನಿಂದ ಬರುವ ರೀತಿಯಲ್ಲಿ ಆಯೋಜಿಸಲಾಗಿದ್ದು ಮೆರವಣಿಗೆಯಲ್ಲೂ ಅದೇ ರೀತಿ ನಿಲ್ಲಿಸಲಾಗುವುದು ಇದರಲ್ಲಿ ಯಾವುದೇ ಬಿನ್ನಾಭಿಪ್ರಾಯ ಬೇಡ ಎಲ್ಲರೂ ಸಹಕಾರ ನೀಡಿ ನಮ್ಮ ತಾಲೂಕಿನ ಹಬ್ಬದ ರೀತಿಯಲ್ಲಿ ಆಚರಣೆ ಮಾಡೋಣ ಎಂದರು. ತಹಸೀಲ್ದಾರ್ ಪುರಂದರ ಕೆ ಮಾತನಾಡಿದರು. ಈ ಸಂದರ್ಭದಲ್ಲಿ ಇಒ ದೊಡ್ಡಸಿದ್ದಯ್ಯ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಆರ್.ಶಶಿಧರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‌ಕುಮಾರ್, ಕಾಂಗ್ರೆಸ್‌ ಮುಖಂಡ ರಘುನಾಥ್, ಡಿಎಸ್‌ಎಸ್ ಸಂಚಾಲಕ ಲಿಂಗದೇವರು ಸೇರಿದಂತೆ ಇತರೆ ಎಲ್ಲಾ ಸಮುದಾಯಗಳ ಅಧ್ಯಕ್ಷರುಗಳು, ಮುಖಂಡರುಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ