ಬಸವ ಜಯಂತಿ ಪ್ರಯುಕ್ತ ಮೌಢ್ಯತೆ ತೊಡೆದು ಹಾಕುವ ಕಾರ್ಯಕ್ರಮ

KannadaprabhaNewsNetwork |  
Published : May 01, 2025, 12:46 AM IST
30ಕೆಎಂಎನ್ ಡಿ19 | Kannada Prabha

ಸಾರಾಂಶ

ಬಸವೇಶ್ವರ ಆಶಯಗಳಂತೆ ನಡೆದರೆ ಬದುಕಿನ ಉದ್ದಕ್ಕೂ ಯಾವುದೇ ಗೊಂದಲವಿಲ್ಲದೆ ಸಾರ್ಥಕತೆಯಿಂದ ಜೀವನ ಸಾಗಿಸಬಹುದು. ಬಸವಣ್ಣನವರು ತಮ್ಮ ಜೀವನದ ಉದ್ದಕ್ಕೂ ಸಾಮಾಜಿಕ ಚಟುವಟಿಕೆಗಳ ಜೊತೆಗೆ ಕಾಯಕ ದಾಸೋಹ ಪದ್ಧತಿಯನ್ನು ಸಮಾಜಕ್ಕೆ ತೋರಿಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಪಾಲಹಳ್ಳಿಯರುದ್ರಮ್ಮ ನಾಗರಾಜ್ ಅವರ ಮನೆಯಲ್ಲಿ ಬಸವ ಜಯಂತಿ ಪ್ರಯುಕ್ತ ಮೌಢ್ಯತೆ ತೊಡೆದು ಹಾಕುವ ಕಾರ್ಯಕ್ರಮ ನಡೆಯಿತು.

ಶಿಕ್ಷಕ ಮಹಾದೇವ ಮಾತನಾಡಿ, ಬಸವೇಶ್ವರ ಆಶಯಗಳಂತೆ ನಡೆದರೆ ಬದುಕಿನ ಉದ್ದಕ್ಕೂ ಯಾವುದೇ ಗೊಂದಲವಿಲ್ಲದೆ ಸಾರ್ಥಕತೆಯಿಂದ ಜೀವನ ಸಾಗಿಸಬಹುದು. ಬಸವಣ್ಣನವರು ತಮ್ಮ ಜೀವನದ ಉದ್ದಕ್ಕೂ ಸಾಮಾಜಿಕ ಚಟುವಟಿಕೆಗಳ ಜೊತೆಗೆ ಕಾಯಕ ದಾಸೋಹ ಪದ್ಧತಿಯನ್ನು ಸಮಾಜಕ್ಕೆ ತೋರಿಸಿಕೊಟ್ಟರು. ಅವರ ಹಾದಿಯನ್ನು ಎಲ್ಲರೂ ಅನುಸರಿಸಿದರೆ ನೆಮ್ಮದಿ ಬದುಕಿನ ಜೊತೆ, ಹೊಸ ಸಮಾಜ ಕಟ್ಟಬಹುದು ಎಂದರು.

ಇದಕ್ಕೂ ಮುನ್ನ ಮೌಢ್ಯ ಹಿನ್ನೆಲೆಯಲ್ಲಿ ಎಕ್ಕ ಗಿಡಕ್ಕೆ ಕಾಸು, ಮಡಿಕೆ ಕಟ್ಟಿರುವುದನ್ನ ಕಿತ್ತು ಹಾಕುವ ಮೂಲಕ ಮೌಢ್ಯಾಚರಣೆ ಪದ್ಧತಿ ತೊಡೆದು ಹಾಕಿ ನಾಶಪಡಿಸಲಾಯಿತು. ಕಾರ್ಯಕ್ರಮದಲ್ಲಿ ರುದ್ರಮ್ಮ ನಾಗರಾಜು, ದೇವರಾಜು, ದಿವಾಕರ್, ಮಧುಸೂದನ್, ನಿಂಗರಾಜು ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ ಸರಸ್ವತಿ ಮುಂತಾದವರು ಇದ್ದರು.

ಸಾಮಾಜಿಕ ಸುಧಾರಣೆಯ ಶರಣರು ಬಸವಣ್ಣ: ಬಿ.ಎಸ್.ವಿಜಯ್

ಕಿಕ್ಕೇರಿ:

ಸಾಮಾಜಿಕ ಸುಧಾರಣೆಯ ಶರಣರಾಗಿ ಬಸವೇಶ್ವರರು ವಚನಸಾರದಲ್ಲಿ ಲೋಕದ ಡೊಂಕು ತಿದ್ದಿದ ಮಹಾನ್ ಪುರುಷರು ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಿ.ಎಸ್.ವಿಜಯ್ ಹೇಳಿದರು.

ಐಕನಹಳ್ಳಿಯಲ್ಲಿ ನಡೆದ ಬಸವ ಜಯಂತಿಯಲ್ಲಿ ಮಾತನಾಡಿ, ರಾಜ ಪ್ರಭುತ್ವ ಕಾಲ ಘಟ್ಟದ 12ನೇ ಶತಮಾನದಲ್ಲಿ ಬಿಜ್ಜಳ ದೊರೆಯ ಮಂತ್ರಿಯಾಗಿ ಲಿಂಗ ಸಮಾನತೆಗೆ ಧ್ವನಿ ಎತ್ತಿದರು. ಅಂತರ್ಜಾತಿ, ಸರಳ ವಿವಾಹಕ್ಕೆ ಪ್ರತಿಪಾದಿಸಿದರು. ಆಸೆ ಎನ್ನುವುದು ಅರಸರಿಗೆ ವಿನಃ ಶರಣರಿಗಲ್ಲ ಎಂದು ಅನುಭವಮಂಟಪ ಸ್ಥಾಪಿಸಿ, ಅಲ್ಲಮಪ್ರಭುವನ್ನು ಅಧ್ಯಕ್ಷರಾಗಿಸಿ ಜಾತಿ ಸಂಕೋಲೆಗೆ ಬೆಲೆ ನೀಡದ ಜ್ಞಾನದ ಅಕ್ಷರ ಬೀಜ ಬಿತ್ತಿ ಸುಶಿಕ್ಷಿತ ಸಮಾಜಕ್ಕೆ ಮುಂದಾದರು ಎಂದರು.

ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಇತಿಹಾಸದ ಕ್ರಾಂತಿಕಾರಿ ಬೆಳಕಾದ ಬಸವಣ್ಣನವರ ವಚನ, ಬದುಕು ಮೊದಲು ಮಕ್ಕಳಿಗೆ, ಯುವಕರಿಗೆ ಸರಳವಾಗಿ ತಿಳಿಸಲು ಜಾಗೃತಿ ಮೂಡಿಸಬೇಕಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಅಂಬುಜಾ ಉದಯಶಂಕರ್ ಮಾತನಾಡಿದರು. ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿಸಿ ನೆನೆದರು. ಗ್ರಾಪಂ ಸದಸ್ಯರು, ಮುಖಂಡರು, ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ