ಹುಬ್ಬಳ್ಳಿ: ದೇಶದಲ್ಲಿ ಹತ್ತಾರು ಕಾರಣಗಳನ್ನು ಮುಂದಿಟ್ಟುಕೊಂಡು ಜಾತಿ ಜಾತಿಗಳನ್ನು ಒಡೆಯುವ ಕಾರ್ಯ ಮಾಡಲಾಗುತ್ತಿದೆ. ನಾವೆಲ್ಲರೂ ಒಂದು, ನಾವೆಲ್ಲರೂ ಭಾರತೀಯರು ಎಂಬ ಭಾವನೆ ನಮ್ಮಲ್ಲಿ ಮೂಡಬೇಕು, ಅಂದಾಗ ಮಾತ್ರ ಸಮೃದ್ಧ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಆರ್‌ಎಸ್‌ಎಸ್‌ನ ದಕ್ಷಿಣ ಮಧ್ಯ ಕ್ಷೇತ್ರ ಬೌದ್ಧಿಕ ಪ್ರಮುಖ ಶ್ರೀಧರ ಸ್ವಾಮಿ ಹೇಳಿದರು.
ವಿವಿಧ ಆಕ್ರಮಣಗಳಿಗೆ ತುತ್ತಾಗಿ ಹಿಂದೂಗಳು ಸ್ವಾತಂತ್ರ್ಯ ಕಳೆದುಕೊಂಡರು. ಅದಕ್ಕಾಗಿ ಹೆಡಗೇವಾರರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಿದ್ದಾರೆ. ಆ ಸಂಘ ಇದೀಗ 99 ವರ್ಷಗಳನ್ನು ಪೂರೈಸಿ ನೂರರತ್ತ ದಾಪುಗಾಲು ಇಡುತ್ತಿರುವ ಪರ್ವ ಕಾಲವಾಗಿದೆ ಎಂದರು.
ನಮ್ಮ ಸಿದ್ಧಾಂತ ಎಷ್ಟೇ ಒಳ್ಳೆಯದಿದ್ದರೂ ನಾವು ದುರ್ಬಲವಾಗಿದ್ದರೆ ಯಾವುದೇ ಪ್ರಯೋಜನವಿಲ್ಲ. ಸಜ್ಜನರ ರಕ್ಷಣೆ ಮಾಡಲು, ದುಷ್ಟರ ಶಿಕ್ಷಿಸಲು ಶಸ್ತ್ರ ಬಳಕೆ ಮಾಡಬೇಕು ಎಂಬುದನ್ನು ಸನಾತನ ಧರ್ಮ ತಿಳಿಸುತ್ತದೆ. ದುಷ್ಟರ ದುಷ್ಟತನ ಶಿಕ್ಷಿಸಲು ದೇವರ ಕೈಗಳಲ್ಲಿ ಶಸ್ತ್ರಗಳಿವೆ. ಕಲಿಯುಗದಲ್ಲಿ ಸಂಘಟನೆಯೇ ಶಕ್ತಿ ಎಂಬುದನ್ನು ಅರಿತ ಹೆಡಗೇವಾರ ಅವರು ಸಂಘವನ್ನು ಸಂಘಟಿಸಿದ್ದಾರೆ ಎಂದರು.ಶಕ್ತಿಯುತ ಸಮಾಜ ನಿರ್ಮಿಸಿ:
ಧರ್ಮ ರಕ್ಷಿಸಿ:
ಈ ಸಂದರ್ಭದಲ್ಲಿ ಸಂಸದ ಜಗದೀಶ ಶೆಟ್ಟರ, ಶಾಸಕ ಮಹೇಶ ಟೆಂಗಿನಕಾಯಿ, ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ಡಾ. ವಿ.ಎಸ್.ವಿ. ಪ್ರಸಾದ, ಗೋವಿಂದ ಜೋಶಿ, ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ಮಲ್ಲಿಕಾರ್ಜುನ ಸಾಹುಕಾರ, ರಾಜಣ್ಣ ಕೊರವಿ, ಲಿಂಗರಾಜ ಪಾಟೀಲ, ಶಂಕರಣ್ಣ ಮುನವಳ್ಳಿ, ತಿಪ್ಪಣ್ಣ ಮಜ್ಜಗಿ, ನಾಗೇಶ ಕಲಬುರ್ಗಿ ಸೇರಿದಂತೆ ಹಲವರಿದ್ದರು.
ವಿಜಯದಶಮಿ ಅಂಗವಾಗಿ ಭಾನುವಾರ ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ನ ಗಣವೇಷಧಾರಿಗಳಿಂದ ಅದ್ಧೂರಿಯಾಗಿ ಪಥ ಸಂಚಲನ ನಡೆಯಿತು. ಇಲ್ಲಿಯ ನೆಹರೂ ಮೈದಾನದಿಂದ ಆರಂಭಗೊಂಡ ಪಥಸಂಚಲನಕ್ಕೆ ನಗರದೆಲ್ಲೆಡೆ ಅದ್ಧೂರಿ ಸ್ವಾಗತ ದೊರೆಯಿತು.
ನೆಹರು ಮೈದಾನದಿಂದ ಎರಡು ಮಾರ್ಗದಲ್ಲಿ ಸಾಗಿದ ಪಥಸಂಚಲನಲ್ಲಿ ಒಂದು ಕೃಷ್ಣಭವನ, ಕಂಬಳಿ ಮಾರ್ಗ, ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನ್‌ಪೇಟೆ, ತುಳಜಾಭವಾನಿ ವೃತ್ತ, ಪೆಂಡಾರಗಲ್ಲಿ, ಶಂಕರ ಮಠ, ಕಂಚಗಾರ ಗಲ್ಲಿ, ಹಿರೇಪೇಟೆ, ಸರಾಫ್‌ಗಟ್ಟಿ ವೃತ್ತ, ಜವಳಿ ಸಾಲ, ಬೆಳಗಾವಿ ಗಲ್ಲಿ ಮಾರ್ಗವಾಗಿ ದುರ್ಗದಬೈಲ್ ತಲುಪಿತು. ಇನ್ನೊಂದು ತಂಡ ಟೌನ್‌ಹಾಲ್, ಶಕ್ತಿ ರಸ್ತೆ, ಸ್ಟೇಷನ್ ರಸ್ತೆ, ಗಣೇಶಪೇಟೆ ವೃತ್ತ, ಸಿಬಿಟಿ, ಮಂಗಳವಾರ ಪೇಟೆ ಮಾರ್ಗವಾಗಿ ದುರ್ಗಬೈಲ್ ತಲುಪಿತು. ಇಲ್ಲಿಂದ ಎರಡು ತಂಡಗಳು ಸಂಗಮಗೊಂಡು ಬ್ರಾಡವೇ, ಶಿವಾಜಿ ವೃತ್ತ, ಕೊಪ್ಪಿಕರ ರಸ್ತೆ ಮಾರ್ಗವಾಗಿ ಮರಳಿ ನೆಹರು ಮೈದಾನಕ್ಕೆ ಆಗಮಿಸಿ ಸಂಪನ್ನಗೊಂಡಿತು.