ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಇಂದು ಭಾರತೀಯ ಶಿಕ್ಷಣ ಮಟ್ಟದಲ್ಲಿ ಗಮನಾರ್ಹ ಬದಲಾವಣೆಯಾಗಿದೆ ಎಂದು ಹೊಸೂರು-ರಬಕವಿಯ ಹಜಾರೆ ಫೌಂಡೇಶನ್ ಚೇರಮನ್ ಸತೀಶ ಹಜಾರೆ ಹೇಳಿದರು.ಹಜಾರೆ ಫೌಂಡೇಶನ್ ಪದ್ಮಾವತಿ ವಿಜ್ಞಾನ ಮತ್ತು ವಾಣಿಜ್ಯ ಪ.ಪೂ.ಮಹಾವಿದ್ಯಾಲಯದಲ್ಲಿ ಜರುಗಿದ ೧೦ನೇ ತರಗತಿ ಮಕ್ಕಳಿಗಾಗಿ ಶ್ರೀನಿವಾಸ ರಾಮಾನುಜಂರ ಜನ್ಮದಿನ ನಿಮಿತ್ತ ಆಚರಿಸುವ ರಾಷ್ಟ್ರೀಯ ಗಣಿತ ದಿನಾಚರಣೆ ದಿನದ ಅಂಗವಾಗಿ ೮ನೇ ಬ್ಯಾಟಲ್ ಆಫ್ ದಿ ಬ್ರೇನ್ಸ್ ೨೦೨೪- ಲಿಖಿತ ಪರೀಕ್ಷೆ ಮತ್ತು ಥಟ್ ಅಂತ ಹೇಳಿ ಮೌಖಿಕ ರಸಪ್ರಶ್ನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವದರ್ಜೆಯ ಶಿಕ್ಷಣ ನೀಡಿಕೆ ಕ್ರಮದಿಂದ ಜಾಗತಿಕ ಮಟ್ಟದಲ್ಲಿ ನಮ್ಮ ಮಕ್ಕಳ ಸ್ಪರ್ಧೆ ತಂತ್ರಜ್ಞಾನ ಯುಗದಲ್ಲಿ ದಾಖಲೆ ಸೃಜಿಸದೆ ಮಕ್ಕಳಲ್ಲಿನ ಸುಪ್ತ ಪ್ರಜ್ಞೆಯನ್ನು ಗುರುತಿಸಿ ಹೊರತರುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ವಿವಿಧ ವಲಯಗಳಿಂದ ೧೨೦೦ಕ್ಕೂ ಅಧಿಕ ಮಕ್ಕಳು ಭಾಗಿಯಾಗಿದ್ದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸರ್ಕಾರಿ ಪ.ಪೂ.ಕಾಲೇಜನ ವಿಶ್ವನಾಥ ಕೊಳದೂರು ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಗುರಿ ಎಂಬುವುದು ಮುಖ್ಯವಾಗಿದೆ. ಸಾಧನೆ ಮಾಡಲು ಕಠಿಣ ಪರಿಶ್ರಮದ ಅಗತ್ಯವಿದ್ದು, ಮುಂದೆ ಗುರಿ, ಹಿಂದೆ ಗುರು ಇದ್ದರೆ ಎಲ್ಲವೂ ಸುಲಲಿತವಾಗುತ್ತದೆ ಎಂದರು.ಲಿಖಿತ ಪರೀಕ್ಷೆಯಲ್ಲಿ ಬೆಳಗಲಿಯ ರೂಪಾ ಹಳ್ಳೂರ ಪ್ರಥಮ, ಜೆಸಿ ಮಹಾಲಿಂಗಪುರದ ಜಹೀರ ರೋಣ ಮತ್ತು ಸಮೀರವಾಡಿಯ ಕೆಜೆ ಸೋಮಯ್ಯಾ ಪ್ರೌಢಶಾಲೆಯ ಸುಪ್ರೀತಗೌಡ ಬಿರಾದಾರ ದ್ವಿತೀಯ, ಬನಹಟ್ಟಿ ಎಸ್‌ಆರ್‌ಎ ಪ್ರೌಢಶಾಲೆಯ ಬಸವರಾಜ ಧೂಪದಾಳ ತೃತೀಯ ಸ್ಥಾನ ಗಳಿಸಿ ನಗದು ಬಹುಮಾನ ಗಳಿಸಿದರು. ಥಟ್ ಅಂತ ಹೇಳಿ ಮೌಖಿಕ ರಸಪ್ರಶ್ನೆ ಸ್ಪರ್ಧೆಯಲ್ಲಿ ತೇರದಾಳ ಎಸ್.ಎಂ.ಪ್ರೌಢಶಾಲೆಯ ತಂಡ ಪ್ರಥಮ, ಮೂಡಲಗಿ ಚೈತನ್ಯ ಆಶ್ರಮ ಶಾಲೆಯ ತಂಡ ದ್ವಿತೀಯ, ಬಾಲಿಕೀಯರ ಪ್ರೌಢಶಾಲೆಯ ತಂಡ ತೃತೀಯ ಸ್ಥಾನಗಳನ್ನು ಪಡೆದು ನಗದು ಬಹುಮಾನ ಗಳಿಸಿದರು.ಸಮಾರಂಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಭಾರತಿ ತಾಳಿಕೋಟಿ, ಪ್ರಾಚಾರ್ಯ ಶ್ರೀಶೈಲ ಕುಂಬಾರ, ಪ್ರಾಚಾರ್ಯ ಬಸವರಾಜ ಕಲಾದಗಿ ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರಿದ್ದರು.ಇಂದು ಭಾರತೀಯ ಶಿಕ್ಷಣ ಮಟ್ಟದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ವಿಶ್ವದರ್ಜೆಯ ಶಿಕ್ಷಣ ನೀಡಿಕೆ ಕ್ರಮದಿಂದ ಜಾಗತಿಕ ಮಟ್ಟದಲ್ಲಿ ನಮ್ಮ ಮಕ್ಕಳ ಸ್ಪರ್ಧೆ ತಂತ್ರಜ್ಞಾನ ಯುಗದಲ್ಲಿ ದಾಖಲೆ ಸೃಜಿಸದೆ ಮಕ್ಕಳಲ್ಲಿನ ಸುಪ್ತ ಪ್ರಜ್ಞೆಯನ್ನು ಗುರುತಿಸಿ ಹೊರತರುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ವಿವಿಧ ವಲಯಗಳಿಂದ ೧೨೦೦ಕ್ಕೂ ಅಧಿಕ ಮಕ್ಕಳು ಭಾಗಿಯಾಗಿದ್ದು ಸಂತಸ ತಂದಿದೆ.
-ಸತೀಶ ಹಜಾರೆ, ಹೊಸೂರು-ರಬಕವಿಯ ಹಜಾರೆ ಫೌಂಡೇಶನ್ ಚೇರಮನ್.