ಕುದೂರು: ಸಾಕ್ಷಾತ್ ಶ್ರೀ ರಾಮಚಂದ್ರರೇ ಕುದೂರು ಬಳಿಯ ವಿರುಪಾಪುರ ಗ್ರಾಮದ ರಾಮಲಿಂಗೇಶ್ವರ ದೇವಾಲಯದಲ್ಲಿರುವ ಮರಳುಲಿಂಗವನ್ನು ರೂಪಿಸಿದ್ದರು ಎಂಬ ಐತಿಹ್ಯವಿದೆ.
ರಾಮ ರೂಪಿಸಿದ ಮರಳುಲಿಂಗು :
ರಾಮ ಮತ್ತು ಲಕ್ಷ್ಮಣ ವನವಾಸದಲ್ಲಿ ಸೀತಾಮಾತೆಯನ್ನು ಅರಸುತ್ತಾ ಬಂದಾಗ ಇಲ್ಲಿನ ಸುಂದರ ಪರಿಸರ ಅವರನ್ನು ಆಕರ್ಷಿಸಿ ಆಂಜನೇಯನ ಸಮೇತ ಅಲ್ಲಿಯೇ ತಂಗುತ್ತಾರೆ. ಆದರೆ ಬೆಳಗಿನ ಪೂಜೆಗೆ ಶ್ರೀರಾಮರಿಗೆ ಲಿಂಗು ಪೂಜೆ ಮಾಡಲು ಮನಸಾಗುತ್ತದೆ. ಆಂಜನೇಯನಿಗೆ ಲಿಂಗು ತರಲು ಹೇಳುತ್ತಾರೆ. ಆಂಜನೇಯ ಲಿಂಗು ತರುವುದು ತಡವಾಗುತ್ತದೆ. ಸೂರ್‍ಯ ನೆತ್ತಿ ಮೇಲೆ ಬರಲಾರಂಭಿಸುತ್ತಾನೆ. ಆಗ ಪೂಜೆಗೆ ಸಮಯ ಮೀರುತ್ತಿದೆ ಎಂದು ಬೆಟ್ಟದ ಮೇಲೆ ಬಿದ್ದಿದ್ದ ಮರಳನ್ನು ಗುಡ್ಡೆ ಮಾಡಿ ಲಿಂಗುವನ್ನು ರೂಪಿಸಿ ಅದಕ್ಕೆ ಪೂಜೆ ಸಲ್ಲಿಸಿದರು ಎಂಬುದು ಪ್ರತೀತಿ. ಅದಕ್ಕಾಗಿ ಇಲ್ಲಿನ ಲಿಂಗು ಕೂಡಾ ಮರಳು ಮರಳಿನಂತೆ ಕಂಡು ಬರುತ್ತದೆ. ಹನುಮಂತ ಕಾಶಿಯಿಂದ ಲಿಂಗು ತರುವಷ್ಟರಲ್ಲಿ ಪೂಜೆ ಮುಗಿದ ಕಾರಣ ಆ ಲಿಂಗುವನ್ನು ದೇವಾಲಯದ ಪ್ರಾಂಗಣದಲ್ಲಿಟ್ಟು ಪೂಜಿಸಲಾಗುತ್ತಿದೆ.ಲಿಂಗುವಿನ ಹಿಂದೆ ಪಾರ್ವತಿ ದೇವಿಯ ಚಿತ್ರವೂ ಅಲ್ಲಿನ ಬಂಡೆಯ ಮೇಲೆ ಮೂಡಿದೆ. ಅದಕ್ಕಾಗಿ ಇಲ್ಲಿ ಶಿವ ಮತ್ತು ಪಾರ್ವತಿ ಇಬ್ಬರೂ ನೆಲೆಸಿರುವ ದೇವಾಲಯ ಎಂಬುದು ಒಂದು ಹೆಸರಾದರೆ, ಶ್ರೀರಾಮಚಂದ್ರನ ಸ್ವಹಸ್ತದಿಂದ ನಿರ್ಮಾಣವಾದ ಲಿಂಗು ಎಂಬ ಹೆಗ್ಗಳಿಕೆ. ಆದ್ದರಿಂದ ಈ ಬೆಟ್ಟವನ್ನು ರಾಮಲಿಂಗೇಶ್ವರ ಬೆಟ್ಟ ಎಂದೇ ಕರೆಯಲಾಗುತ್ತಿದೆ.
ಸುಂದರ ಪರಿಸರ:
ಸುತ್ತಮುತ್ತಲೂ ಹೊಲಗದ್ದೆ ತೋಟಗಳಿಂದ ಕೂಡಿದ ವಾತಾವರಣದ ಮಧ್ಯಭಾಗದಲ್ಲಿ ವಿಶಾಲವಾದ ಬಂಡೆಯೊಂದಿದೆ. ಗಂಗರು, ಚೋಳರ ಕಾಲದಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿತ್ತು. ಹೊಯ್ಸಳ ದೊರೆ ವೀರಬಲ್ಲಾಳರ ಕಾಲದಲ್ಲಿ ಗುರುಚಿತ್ತಾರಾಧ್ಯರು ಎಂಬ ಗುರುವಿಗಾಗಿ ಮಠವೊಂದನ್ನು ಸ್ಥಾಪಿಸಿಕೊಟ್ಟಿದ್ದರು ಎಂಬುದು ಇತಿಹಾಸ. ಗ್ರಾಮದ ಹೊರಗಿರುವ ಈ ದೇವಾಲಯ ಅತ್ಯಂತ ಪ್ರಶಾಂತವಾದ ವಾತಾವರಣದಲ್ಲಿ ಇದ್ದು, ತನ್ನ ಒಡಲ ಗರ್ಭದಲ್ಲಿ ಹತ್ತಾರು ವಿಸ್ಮಯಕಾರಕ ರಹಸ್ಯಗಳನ್ನು ಒಳಗೊಂಡಂತಿದೆ.ಕೋಟ್ ............ದೇವಾಲಯದಲೊಂದು ಸಾತ್ವಿಕ ವಾತಾವರಣ ಇದೆ. ಜ.22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಶ್ರೀರಾಮನೆ ನಿರ್ಮಿಸಿರುವ ಲಿಂಗುವನ್ನು ಹೊಂದಿರುವ ರಾಮಲಿಂಗೇಶ್ವರ ಬೆಟ್ಟ ಮಹತ್ವ ಹೊಂದಿದೆ. ನಮ್ಮ ಮನೆದೇವರಾಗಿರುವ ದೇವಾಲಯದ ಜೀರ್ಣೋದ್ಧಾರ ಕಾರ್‍ಯಕ್ಕೆ ಮುಂದಾಗಿದ್ದೇವೆ.
-ರೇವಣಸಿದ್ದಯ್ಯ, ನಿವೃತ್ತ ಪೊಲೀಸ್ ಕಮೀಷನರ್ಕೋಟ್ ..........
ಇಲ್ಲಿನ ಲಿಂಗು ನೋಡಿದರೆ ಪುರಾಣಕ್ಕು ಜನರ ನಾಣ್ಣುಡಿಗೂ ಸಂಬಂಧವಿದೆ ಎನಿಸದೇ ಇರಲಾರದು. ಶ್ರೀರಾಮ ಪೂಜೆಗೆ ತಡವಾಗುತ್ತದೆಂದು ಇರುವ ಮರಳಿನಲ್ಲಿ ಲಿಂಗು ಪ್ರತಿಷ್ಠಾಪಿಸುತ್ತಾರೆ. ಇಲ್ಲಿರುವ ಲಿಂಗು ಮರಳಿನಂತೆಯೇ ಕಾಣುತ್ತದೆ. ಭಗವಂತನ ಕರುಣೆಯಿದ್ದರೆ ಮರಳು ಲಿಂಗುವಾಗುತ್ತದೆ. ಬೆಟ್ಟ ದೇವಾಲಯವಾಗುತ್ತದೆ ಎನ್ನುವುದಕ್ಕೆ ರಾಮಲಿಂಗೇಶ್ವರ ಬೆಟ್ಟವೇ ಸಾಕ್ಷಿ.- ಪ್ರಸಾದ್. ಪ್ರಧಾನ ಅರ್ಚಕರು
21ಕೆಆರ್ ಎಂಎನ್ 6,7,8.ಜೆಪಿಜಿ6. ವಿರುಪಾಪುರದ ರಾಮೇದೇವರ ಬೆಟ್ಚದ ಶ್ರೀರಾಮಲಿಂಗೇಶ್ವರ ದೇವಾಲಯ.7. ಶ್ರೀರಾಮ ನಿರ್ಮಿಸಿರುವ ಮರಳುಲಿಂಗು.8.ಅಲಂಕೃತಗೊಂಡ ಮರಳುಲಿಂಗು.