ಎಲ್ಲ 12 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿಗರ ಜಯಭೇರಿ

KannadaprabhaNewsNetwork |  
Published : Jul 28, 2026, 01:15 AM IST
51 | Kannada Prabha

ಸಾರಾಂಶ

ಎ ವರ್ಗದ ಐದು ಸ್ಥಾನಗಳಿಗೆ ಮತ್ತು ಬಿ ವರ್ಗದ ಏಳು ಸ್ಥಾನಗಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್‌ ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ ಭಾರಿ ಕುತೂಹಲ ಕೆರಳಿಸಿದ್ದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್‌) ನಿರ್ದೇಶಕ ಸ್ಥಾನದ ಎ ವರ್ಗದ ಐದು, ಬಿ ವರ್ಗದ ಏಳು, ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ 12 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಜಯಭೇರಿ ಬಾರಿಸುವ ಮೂಲಕ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್‌ತೀವ್ರ ಮುಖಭಂಗ ಅನುಭವಿಸಿದೆ.26ರ ಭಾನುವಾರ ನಡೆದ ಚುನಾವಣೆಯಲ್ಲಿ ಎ ವರ್ಗದ ಐದು ಸ್ಥಾನಗಳಿಗೆ ಮತ್ತು ಬಿ ವರ್ಗದ ಏಳು ಸ್ಥಾನಗಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್‌ ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಎರಡು ಪಕ್ಷದ ಸ್ಪರ್ಧಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಎರಡು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಎಂದಿನ ರಾಜಕೀಯ ಚುನಾವಣೆಗೆ ಕಡಿಮೆ ಇಲ್ಲದಂತೆ ಪ್ರಚಾರ ಮತ್ತು ಮತದಾರರನ್ನು ಮನವೊಲಿಸುವ ಕಾರ್ಯದಲ್ಲಿ ಮಗ್ನರಾಗಿ ಗೆಲುವಿಗಾಗಿ ಶ್ರಮಿಸಿದ್ದರು.ನಂತರ ಸಂಜೆ ನಡೆದ ಮತ ಎಣಿಕೆ ಕಾರ್ಯದಲ್ಲಿ ಎರಡು ವರ್ಗದ ಎಲ್ಲ 12 ನಿರ್ದೇಶಕ ಸ್ಥಾನಗಳಲ್ಲಿ ಕಾಂಗ್ರೇಸ್ ಬೆಂಬಲಿತರು ಜಯಿಸುವ ಮೂಲಕ ಕಾಂಗ್ರೆಸ್ ಗೆಲುವಿನ ನಗೆ ಬೀರಿತು. ಕಾಂಗ್ರೆಸ್ ಬೆಂಬಲಿತರಾಗಿ ಎ ತರಗತಿಯಿಂದ ನಾರಾಯಣಪುರದಿಂದ ಎನ್.ಎಸ್. ವಿಠಲ ಪಡೆದ ಮತಗಳು-15, ಚನ್ನಂಗೆರೆಯಿಂದ ಶಂಕರನಾಯಕ-16, ಚಿಬುಕಹಳ್ಳಿಯಿಂದ ಎಚ್.ಎಸ್.ವೆಂಕಟೇಶ್-15 ಹರದನಹಳ್ಳಿಯಿಂದ ಕೆಡಗನಟರಾಜ್-16 ಹಂಪಾಪುರದಿಂದ ಎಂ.ಎಸ್. ಅನಂತ್-16.ಬಿ ತರಗತಿಯಿಂದ ಸಾಮಾನ್ಯ ಕ್ಷೇತ್ರದಿಂದ ಎಚ್.ಪಿ. ಪ್ರಶಾಂತ್ ಪಡೆದ ಮತಗಳು- 904, ಹಿಂದುಳಿದ ಬಿ. ವರ್ಗದಿಂದ ಎಚ್.ಎಚ್. ನಾಗೇಂದ್ರ-959 ಹಿಂದುಳಿದ ಎವರ್ಗದಿಂದ ಎಸ್. ಸಿದ್ದೇಗೌಡ-1009, ಪ. ಜಾತಿಯಿಂದ ಡಿ.ಪಿ. ದಿನೇಶ್-817, ಪ. ವರ್ಗದಿಂದ ಎಂ. ಮಹದೇವನಾಯಕ-942, ಮಹಿಳಾ ಮೀಸಲು ಕ್ಷೇತ್ರದಿಂದ ಡಿ.ಕೆ. ವನಜಾಕ್ಷಿ-955, ಜಿ.ಆರ್. ಸ್ವರೂಪ-972 ಮತಗಳನ್ನು ಪಡೆದು ಜಯಗಳಿಸುವ ಮೂಲಕ ಗೆಲುವಿನ ನಗೆ ಬೀರಿದರು.ಕಾಂಗ್ರೆಸ್ ಬೆಂಬಲಿಗರು ಜಯಭೇರಿ ಭಾರಿಸುತ್ತಿದ್ದಂತೆ ಭಾರಿ ಜಯಘೋಷದೊಂದಿಗೆ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಕಾಂಗ್ರೆಸ್ ಬೆಂಬಲಿತರು ಸಂಭ್ರಮಾಚರಿಸಿದರು.ಶಾಸಕ ಡಿ. ರವಿಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಎಂ.ಎಸ್. ಮಹದೇವ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಶಿವಣ್ಣ, ಮಹದೇವ, ಶ್ರೀನಿವಾಸ್, ಪಶುಪತಿ ರವಿಕುಮಾರ್, ಗೌರೀಶ್, ತೇಜೋಮೂರ್ತಿ, ಮಹದೇವ,ನಟರಾಜ್, ನಂದೀಶ್, ನವೀನ್, ರಾಜಶೇಖರ್, ಪ್ರತಾಪ್‌ ರಾಜೇ ಅರಸ್ ಇತರರು ಇದ್ದರು.ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ತಾಲೂಕು ಸಹಕಾರ ಅಭಿವೃದ್ದಿ ಅಧಿಕಾರಿ ರವಿ, ಟಿಎಪಿಸಿಎಂಎಸ್ ಕಾರ್ಯದರ್ಶಿ ರವಿ, ನಟರಾಜ್ ಸಹಕರಿಸಿದರು. ಸಿಪಿಐ ಶಿವಪ್ರಕಾಶ್ ನೇತೃತ್ವದ ಬಿಗಿ ಪೋಲೀಸ್ ಬಂದೋಬಸ್ತ್‌ ನಲ್ಲಿ ಶಾಂತಿಯುತ ಮತದಾನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗನವಾಡಿ ಕಾರ್ಯಕರ್ತೆ ನೇಮಿಸಿಸಲು ಪೋಷಕರ ಒತ್ತಾಯ
೩೦-೩೧ ರಂದು ವಿಸ್ಮಯ ಕೀಟ ಪ್ರಪಂಚ ಪ್ರದರ್ಶನ