ಒಂದೇ ದಿನಕ್ಕೆ ಗುಂಡಿ ಮುಚ್ಚಿದ ಗುತ್ತಿಗೆದಾರ!

KannadaprabhaNewsNetwork |  
Published : Jul 28, 2026, 01:15 AM IST
22 | Kannada Prabha

ಸಾರಾಂಶ

ಈ ವರದಿಯಿಂದ ಎಚ್ಚೆತ್ತ ಗುತ್ತಿಗೆದಾರ ಯಾದವಗಿರಿಯ ವಿವೇಕಾನಂದ ಮುಖ್ಯರಸ್ತೆಯಲ್ಲಿ ಅರ್ಧ ಅಡಿಗೂ ಹೆಚ್ಚು ಗುಂಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಕೇಬಲ್ ಅಳವಡಿಕೆ

- ‘ಕನ್ನಡಪ್ರಭ’ ವರದಿ ಪರಿಣಾಮ- ಮೈಸೂರಿನ ಯಾದವಗಿರಿಯಲ್ಲಿ ನೆಲದಡಿ ವಿದ್ಯುತ್ ಕೇಬಲ್ ಅಳವಡಿಕೆ ಅವ್ಯವಸ್ಥೆ ಕುರಿತು ‘ಕನ್ನಡಪ್ರಭ’ ಪತ್ರಿಕೆಯಲ್ಲಿ ವರದಿ ಬರುವ ಮುನ್ನಾ ಹಾಗೂ ವರದಿ ಬಂದ ನಂತರ ಚಿತ್ರಣ.--------ಎಲ್.ಎಸ್. ಶ್ರೀಕಾಂತ್‌ಕನ್ನಡಪ್ರಭ ವಾರ್ತೆ ಮೈಸೂರು‘ಕನ್ನಡಪ್ರಭ’ ಪತ್ರಿಕೆಯಲ್ಲಿ ವರದಿ ಬಂದ ಒಂದೇ ದಿನದಲ್ಲಿ ಗುಂಡಿಗಳನ್ನು ಮುಚ್ಚಿ, ಅಲ್ಲಿ ಡಾಂಬರು ಹಾಕಿ, ಸಾರ್ವಜನಿಕರಿಗೆ ಯಾವುದೇ ತೊಂದರೆ ಇಲ್ಲದಂತೆ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಟ್ಟ ಗುತ್ತಿಗೆದಾರ.., ನಗರದ ಯಾದವಗಿರಿಯಲ್ಲಿ ಪ್ರದೇಶದಲ್ಲಿ ನಡೆಯುತ್ತಿರುವ ನೆಲದಡಿ ವಿದ್ಯುತ್ ಕೇಬಲ್ ಅಳವಡಿಕೆ ವೇಳೆ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಕಾಮಗಾರಿಯನ್ನು ಬೇಕಾಬಿಟ್ಟಿಯಾಗಿ, ತೀವ್ರ ಕಳಪೆಯಾಗಿ ನಡೆಸಿದ್ದರು. ಮುಖ್ಯರಸ್ತೆಗಳಲ್ಲಿ ಮಣ್ಣುಗಳನ್ನು ಸರಿಯಾಗಿ ಮುಚ್ಚದೆ ವಾಹನ ಸವಾರರು, ಪಾದಚಾರಿಗಳು ಪರದಾಡುತ್ತಿದ್ದು, ಕೇಬಲ್ ಅಳವಡಿಕೆ ಕಾಮಗಾರಿಯಂತು ಅವ್ಯವಸ್ಥೆಯ ಅಗರವಾಗಿರುವುದನ್ನು ಕನ್ನಡಪ್ರಭ ಪತ್ರಿಕೆಯಲ್ಲಿ ಜು. 25 ರಂದು ವಿಶೇಷ ವರದಿ ಪ್ರಕಟವಾಗಿತ್ತು.ಈ ವರದಿಯಿಂದ ಎಚ್ಚೆತ್ತ ಗುತ್ತಿಗೆದಾರ ಯಾದವಗಿರಿಯ ವಿವೇಕಾನಂದ ಮುಖ್ಯರಸ್ತೆಯಲ್ಲಿ ಅರ್ಧ ಅಡಿಗೂ ಹೆಚ್ಚು ಗುಂಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಕೇಬಲ್ ಅಳವಡಿಕೆಯಾದ ನಂತರ ಎಲ್ಲೆಂದರಲ್ಲಿ ರಸ್ತೆ ಮಧ್ಯೆ ಮಣ್ಣುಗಳನ್ನು ಸುರಿದು ಹೋಗಿದ್ದ ಕಾರ್ಮಿಕರು, ಹಾಗೆ ಹಲವೆಡೆ ಬಿಟ್ಚಿದ್ದ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಿ, ಡಾಂಬರನ್ನು ಹಾಕಿ ವಾಹನ ಸವಾರರಿಗೆ ಸಂಚಾರಕ್ಕೆ, ಪಾದಚಾರಿಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಒಡೆದು ನೀರಿನ ಪೈಪ್ಗಳ ದುರಸ್ತಿಕೇಬಲ್ ಅಳವಡಿಗೆ ಕಾಮಗಾರಿ ವೇಳೆ ನೀರಿನ ಪೈಪ್ಗಳನ್ನು ಒಡೆದು ಹೋಗುತ್ತಿದ್ದು, ಮೂರ್ನಾಲ್ಕು ದಿನಗಳು ಕಳೆದರೂ ಅದನ್ನು ದುರಸ್ತಿ ಮಾಡದೆ ರಸ್ತೆ ತುಂಬೆಲ್ಲ ಹರಿಯುತ್ತಿತ್ತು, ಸುತ್ತಮುತ್ತಲಿನ ನಿವಾಸಿಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿತ್ತು, ಇದರಿಂದ ಎಚ್ಚೆತ್ತ ಗುತ್ತಿಗೆದಾರ ಕೂಲಜೇ ಎಲ್ಲೆಡೆ ಒಡೆದಿದ್ದ ನೀರನ್ನು ಪೈಪ್ಗಳನ್ನು ದುರಸ್ತಿ ಮಾಡಿದ್ದಾರೆ. ಕಾರನ್ನು ತಂದು ಪ್ರಯಾಸಪಟ್ಟಿದ್ದ ವೃದ್ದಯಾದವಗಿರಿಯಲ್ಲಿ ನಡೆಯುತ್ತಿದ್ದ ಕೇಬಲ್ಕಾಮಗಾರಿ ಅಳವಡಿಕೆ ವೇಳೆ ಎಲ್ಲೆಡೆ ಗುಂಡಿಗಳು ಇರುವುದನ್ನು ಕಂಡು ಕಾರನ್ನು ಚಾಲನೆ ಮಾಡುತ್ತಿದ್ದ ವೃದ್ದರೊಬ್ಬರು ಗಾಬರಿಯಾಗಿ ಕಾರನ್ನು ನಿಲ್ಲಿಸಿ, ಅಲ್ಲೆ ಇದ್ದ ಟೀ ಅಂಗಡಿ ಬಳಿ ಬಂದು ಯಾವ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿಲ್ಲ, ಎಲ್ಲ ರಸ್ತೆಗಳಲ್ಲೂ ಗುಂಡಿಗಳಿದ್ದು ಕಾರನ್ನು ಚಾಲನೆ ಮಾಡಲು ಭಯವಾಗುತ್ತಿದೆ ಎಂದು ತಮ್ಮ ಕಷ್ಟವನ್ನು ಹೇಳಿಕೊಂಡ ಬಗ್ಗೆ ಸ್ಥಳೀಯರು ತಿಳಿಸಿದರು. ತ್ವರಿತವಾಗಿ ನಡೆಯುತ್ತಿರುವ ಕಾಮಗಾರಿಯಾದವಗಿರಿಯಲ್ಲಿ ನೆಲದಡಿ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿಯನ್ನು ಗುತ್ತಿಗೆದಾರ ಈಗ ತ್ವರಿತವಾಗಿ ಕೈಗೊಂಡಿದ್ದು. ಕೇಬಲ್ ಅಳವಡಿಕೆಯಾದ ಕೂಡಲೇ ಮಣ್ಣುಗಳನ್ನು ಮುಚ್ಚಿ, ಉಳಿದ ಮಣ್ಣನ್ನು ಟ್ರ್ಯಾಕ್ಟರ್ ಗೆ ತುಂಬಿಸಿ, ಕೇಬಲ್ ಗಳ ಬಂಡಲ್ ಗಳನ್ನು ಸ್ಥಳಾಂತರಿಸಿ, ಗುಂಡಿಗಳಿಗೆ ಜಿಲ್ಲಿಗಳನ್ನು ಹಾಕಿಸಿ ನಂತರ ಡಾಂಬರಣ ಮಾಡುತ್ತಿದ್ದಾರೆ. ಪತ್ರಿಕೆಗೆ ಅಭಿನಂದಿಸಿದ ಗಜೇಂದ್ರ, ನಾಗರಾಜ್---ಫೋಟೋ- 27ಎಂವೈಎಸ್ 22- -------ಯಾದವಗಿರಿಯಲ್ಲಿ ಹಲವಾರು ದಿನಗಳಿಂದ ನಡೆಯುತ್ತಿರುವ ನೆಲದಡಿ ವಿದ್ಯುತ್ ಕೇಬಲ್ ಕಾಮಗಾರಿಯನ್ನು ಬೇಕಾಬಿಟ್ಟಿಯಾಗಿ ಮಾಡುತ್ತಿದ್ದರು. ಗುಂಡಿಗಳನ್ನು ಸರಿಯಾಗಿ ಮುಚ್ಚದೆ ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ಬಹಳ ತೊಂದರೆ ಪಡುತ್ತಿದ್ದರು. ಗುಂಡಿಗಳನ್ನು ಮುಚ್ಚುವಂತೆ ಹೇಳಿದರೆ ಕೇವಲವಾಗಿ ಮಾತನಾಡಿ ಹೋಗುತ್ತಿದ್ದರು, ಆದರೆ ಕನ್ನಡಪ್ರಭ ವರದಿ ಬಂದ ಒಂದೇ ದಿನದಲ್ಲಿ ಗುಂಡಿಗಳನ್ನು ಮುಚ್ಚಿ ಮುಂದೆ ಆಗಬಹುದಾದ ಅಪಘಾತಗಳನ್ನು ತಪ್ಪಿದಂತಾಗಿದ್ದು, ಪಾದಚಾರಿಗಳಿಗೆ ಅನುಕೂಲವಾಗಿದೆ. ಯಾದವಗಿರಿಯ ನಿವಾಸಿ ಗಜೇಂದ್ರ ಹಾಗೂ ಮಂಜುನಾಥಪುರದ ನಿವಾಸಿ ಎ. ನಾಗರಾಜು ಅವರು ಕನ್ನಡಪ್ರಭ ಪತ್ರಿಕೆಗೆ ಧನ್ಯವಾದ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗನವಾಡಿ ಕಾರ್ಯಕರ್ತೆ ನೇಮಿಸಿಸಲು ಪೋಷಕರ ಒತ್ತಾಯ
೩೦-೩೧ ರಂದು ವಿಸ್ಮಯ ಕೀಟ ಪ್ರಪಂಚ ಪ್ರದರ್ಶನ