ಸಿದ್ದರಾಮಯ್ಯನವರ ಕನಸಿನ ಕೂಸಾದ ಇಂದಿರಾ ಕ್ಯಾಂಟಿನ ಬುಧವಾರ ಉದ್ಘಾಟನೆಗೊಳ್ಳಲಿದೆ. ಈ ಕ್ಯಾಂಟಿನಿಂದ ಬಡವರ, ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಬಸ್ ನಿಲ್ದಾಣದ ಹತ್ತಿರ ಪ್ರಾರಂಭಿಸಲಾಗಿದೆ
ಶ್ರೀನಿವಾಸ ಬಬಲಾದಿ
ಕನ್ನಡಪ್ರಭ ವಾರ್ತೆ ಲೋಕಾಪುರಮುಧೋಳ ಮತಕ್ಷೇತ್ರವನ್ನು ಅಭಿವೃದ್ಧಿಯತ್ತ ಮುನ್ನಡೆಸುತ್ತಿರುವ ಶಾಸಕ ಆರ್.ಬಿ.ತಿಮ್ಮಾಪುರ ಅವರು ಉತ್ತರ ಕರ್ನಾಟಕ ಭಾಗದ ದಲಿತ ಹಿರಿಯ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಸಾಮಾನ್ಯ ಹಿನ್ನೆಲೆಯಿಂದ ಬಂದು, ರಾಜಕಿಯದಲ್ಲಿ ಎತ್ತರಕ್ಕೆ ಬೆಳೆದಿರುವ ಆರ್.ಬಿ.ತಿಮ್ಮಾಪುರ ಅವರು ತಮ್ಮ ಸರಳತೆ ಹಾಗೂ ನೇರ ನಡೆ ನುಡಿಯಿಂದ ಜನಮನ ಗೆದ್ದಿದ್ದಾರೆ. ತುಳಿತಕ್ಕೆ ಒಳಗಾದ ದೀನ ದಲಿತರ, ರೈತರ ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಸದಾ ಧ್ವನಿ ಎತ್ತುವವರು ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿ ಗುರುತಿಸಿಕೊಂಡಿದ್ದಾರೆ.
ಸಚಿವರಾಗಿ, ಶಾಸಕರಾಗಿ ಮುಧೋಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಘಟಪ್ರಭಾ ನದಿಯ ತೀರದ ಕ್ಷೇತ್ರವಾದ ಮುಧೋಳದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಹಾಗೂ ಕಾಲುವೆಗಳಿಗೆ ನೀರು ಹರಿಸಲು ಆದ್ಯತೆ ನೀಡಿದ್ದಾರೆ. ಗ್ರಾಮೀಣ ರಸ್ತೆಗಳ ಸುಧಾರಣೆ, ಕುಡಿಯುವ ನೀರಿನ ಯೋಜನೆಗಳು, ಶಾಲೆ-ಕಾಲೇಜುಗಳ ಕಟ್ಟಡ ನಿರ್ಮಾಣ, ಆಸ್ಪತ್ರೆ ಮೇಲ್ದರ್ಜೆಗೆ ಪ್ರಮುಖ ಪಾತ್ರ ವಹಿಸಿದ್ದಾರೆ.ಸಕ್ಕರೆ ಕಾರ್ಖಾನೆಗೆ ಕಾಯಕಲ್ಪ:ರೈತರ ಜೀವನಾಡಿಯಾಗಿದ್ದ ರನ್ನ ರೈತರ ಸಹಕಾರ ಸಕ್ಕರೆ ಕಾರ್ಖಾನೆ ಹಾನಿಯಿಂದ ಸ್ಥಗಿತಗೊಂಡಿತ್ತು. ಶಾಸಕರಾದ ಮೇಲೆ ಆರ್.ಬಿ.ತಿಮ್ಮಾಪುರ ಅವರು ಕಾರ್ಖಾನೆ ಪುನ: ಪ್ರಾರಂಭಿಸಲು ಪ್ರಾಮಾಣಿಕ ಪ್ರಯತ್ನ ಪಟ್ಟರು. ಇದರಿಂದ ಕಬ್ಬು ಬೆಳೆಗಾರರ, ರೈತರ ಮತ್ತು ಕಾರ್ಮಿಕರ ವರ್ಗದವರಿಗೆ, ಷೇರುದಾರರಿಗೆ ವರದಾನವಾಯಿತು.
ಕೃಷ್ಣಾ ಮೇಲ್ಡಂಡೆ ಯೋಜನೆ ವಿಶೇಷ ಪರಿಹಾರ: ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ದೊರಕಿಸಲು ಹಗಲಿರುಳು ಶ್ರಮಿಸಿ ನೀರಾವರಿಗೆ ಎಕರೆಗೆ ₹ 40 ಲಕ್ಷ, ಒಣಬೇಸಾಯಿಗೆ ₹ 30 ಲಕ್ಷ ಗಳನ್ನು ಸರ್ಕಾರ ಘೋಷಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದವರಲ್ಲಿ ಆರ್.ಬಿ.ತಿಮ್ಮಾಪುರ ಅವರ ಪಾತ್ರ ಪ್ರಮುಖವಾಗಿದೆ.ಬಾಗಲಕೋಟೆ ಜಿಲ್ಲೆಗೆ ಮೆಡಿಕಲ್ ಕಾಲೇಜು: ಬಾಗಲಕೋಟೆ ಶಾಸಕ ದಿ.ಎಚ್.ವೈ.ಮೇಟಿ ಅವರ ಕನಸಿನ ಕೂಸಾಗಿದ್ದ ಬಾಗಲಕೋಟೆ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜ ತರುವಲ್ಲಿ ತಿಮ್ಮಾಪುರ ಅವರ ಪಾತ್ರ ಅಪಾರವಾಗಿದೆ. ಕಾಲೇಜನ್ನು ಪ್ರಾರಂಭಿಸಲು ಯಶಸ್ವಿಯಾಗಿದ್ದಾರೆ.
ಲೋಕಾಪುರ ಪಟ್ಟಣ: ಮುಧೋಳ ಮತಕ್ಷೇತ್ರದಲ್ಲಿ ಲೋಕಾಪುರ ಪಟ್ಟಣ ದೊಡ್ಡ ಪಟ್ಟಣವಾಗಿದ್ದರಿಂದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಎಪಿಎಂಸಿ ಸ್ಥಾಪಿಸಲು, ಹಳೆಯ ಕೆಇಬಿ ಸ್ಟೇಷನ್, ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಮೇಲ್ದರ್ಜೆಗೆರಿಸಿದ್ದಾರೆ. ಹಲವು ಸೌಲಭ್ಯಗಳನ್ನು ನೀಡುವಲ್ಲಿ ಆರ್.ಬಿ.ತಿಮ್ಮಾಪುರ ಅವರ ಕೊಡುಗೆ ಅಪಾರವಾಗಿದೆ. ವರ್ಚಗಲ್ ಕರೆಗೆ ಅಭಿವೃದ್ಧಿಗೆ ₹ 1 ಕೋಟಿ ನೀಡಿದ್ದಾರೆ.ಸಿದ್ದರಾಮಯ್ಯನವರ ಕನಸಿನ ಕೂಸಾದ ಇಂದಿರಾ ಕ್ಯಾಂಟಿನ ಬುಧವಾರ ಉದ್ಘಾಟನೆಗೊಳ್ಳಲಿದೆ. ಈ ಕ್ಯಾಂಟಿನಿಂದ ಬಡವರ, ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಬಸ್ ನಿಲ್ದಾಣದ ಹತ್ತಿರ ಪ್ರಾರಂಭಿಸಲಾಗಿದೆ. ಲೋಕಾಪುರ ಪಟ್ಟಣವು ಬೆಳೆಯುತ್ತಿರುವುದರಿಂದ ಮುಂದಿನ ದಿನಮಾನಗಳಲ್ಲಿ ನೀರಿನ ತೊಂದರೆ ಅನುಭವಿಸಬಾರದೆಂದು ಮನಗಂಡು ₹ 133 ಕೋಟಿಗಳಲ್ಲಿ ಕೃಷ್ಣಾ ನದಿಯಿಂದ ಲೋಕಾಪುರ ಪಟ್ಟಣಕ್ಕೆ ನೀರು ತಂದು ಕುಡಿಯುವ ನೀರಿನ ಯೋಜನೆ ಪೂರೈಸಲು ಪ್ರಯತ್ನಿಸುತ್ತಿದ್ದಾರೆ ಇದು ಸರ್ಕಾರದ ಕ್ಯಾಬಿನೆಟ್ ಮಂಜೂರಾತಿ ಹಂತದಲ್ಲಿದೆ.