ಕನ್ನಡಪ್ರಭ ವಾರ್ತೆ ಇಂಡಿ/ ಚಡಚಣ
ತಾಲೂಕಿನ ಹೊರ್ತಿ ಗ್ರಾಮದಲ್ಲಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಾಗೂ ಸರಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲಾ ಆವರಣದಲ್ಲಿ ನೂತನ ಪ್ರೌಢಶಾಲೆ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಡಿಪ್ಲೊಮಾ ಕಾಲೇಜು ಕಟ್ಟಡ, ಪ್ರಥಮ ದರ್ಜೆ ಕಾಲೇಜು, ಪಿಯು ಕಾಲೇಜುಗಳು, ಪ್ರೌಢ ಶಾಲೆಗಳು, ವಸತಿ ಶಾಲೆಗಳನ್ನು ತರುವುದರ ಮೂಲಕ ಹಿಂದುಳಿದ ಗಡಿ ತಾಲೂಕಿನಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.
ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳು ಅಂದು ನೆಟ್ಟ ಶಿಕ್ಷಣದ ಸಸಿ ಇಂದು ಬೆಳೆದು ಅನೇಕ ಭಾಗದಲ್ಲಿ ಶಿಕ್ಷಣದ ದಾಹ ನಿಗಿಸಿದೆ. ಮಕ್ಕಳೆ ದೇವರು, ಶಾಲೆಯೇ ಜೀವಂತ ದೇವಾಲಯ ಎಂಬ ಪರಿಕಲ್ಪನೆ ಶ್ರೀಗಳಲ್ಲಿ ಇತ್ತು. ಶ್ರೀ ಸಿದ್ದೇಶ್ವರ ಶ್ರೀಗಳು ಪ್ರವಚನಗಳ ಮೂಲಕ ಜಿಲ್ಲೆಯ ಜನರಿಗೆ ಹೃದಯ ಶ್ರೀಮಂತನಾಗಿಸಿದರೆ, ಬಂಥನಾಳದ ಶ್ರೀಗಳು ಶಿಕ್ಷಣ ದಾಸೋಹ ನೀಡಿದ್ದಾರೆ. ಮಹಾನ ಶರಣರು, ಸಂತರ ಆದರ್ಶಗಳು ನಮಗೆಲ್ಲ ಪ್ರೇರಣೆಯಾಗಲಿವೆ ಎಂದು ಹೇಳಿದರು.ಹೊರ್ತಿ ಗ್ರಾಮ ದೊಡ್ಡ ಗ್ರಾಮವಾಗಿದ್ದು, ಇಲ್ಲಿ ಈ ಹಿಂದೆಯೇ ಸರ್ಕಾರಿ ಪ್ರೌಢಶಾಲೆ ಉದ್ಘಾಟನೆಯಾಗಬೇಕಾಗಿತ್ತು. ಶ್ರೀ ರೇವಣಸಿದ್ದೇಶ್ವರನ ಕೃಪಾರ್ಶೀವಾದ ಇಂದು ಭಾರತದ ಶ್ರೇಷ್ಠ ತತ್ವಜ್ಞಾನಿ ಭಾರತದ ಸಂಸ್ಕೃತಿ ಪರಂಪರೆಯನ್ನು ವಿಶ್ವಕ್ಕೆ ಸಾರಿದ ದಾರ್ಶನಿಕ ಯುಗ ಪುರುಷ ಸ್ವಾಮಿವಿವೇಕಾನಂದರ ಜಯಂತ್ಯುತ್ಸವ ದಿನ ಪ್ರೌಢ ಶಾಲೆ ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸ ತಂದಿದೆ. ಯುವ ಸಮುದಾಯಕ್ಕೆ ಸ್ವಾಮಿ ವಿವೇಕಾನಂದರ ಆದರ್ಶಗಳು ಪ್ರೇರಣೆಯಾಗಲಿ ಎಂದು ಹೇಳಿದರು.
ಇಲಿಯಾಸ ಬೋರಾಮಣಿ, ಭೀಮಣ್ಣಾ ಕೌಲಗಿ, ಮಹಾದೇವ ಗಡ್ಡದ, ಶ್ರೀಮಂತ ಇಂಡಿ ,ಜಟ್ಟೆಪ್ಪ ರವಳಿ, ಗುರಣ್ಣಗೌಡ ಪಾಟೀಲ, ಬಿ.ಸಿ ಸಾಹುಕಾರ ಸೇರಿದಂತೆ ಸರಕಾರಿ ಪ್ರೌಢ ಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕ ವೃಂದ್ದ, ಸಿಬಂದ್ದಿ, ಗ್ರಾಮದ ಮುಖಂಡರು ಇದ್ದರು.
ಯಶವಂತರಾಯಗೌಡ ಪಾಟೀಲ, ಶಾಸಕರು