ಚನ್ನಪಟ್ಟಣ: ಸಾಮಾಜಿಕ ನಾಟಕಗಳು ಜನರ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತವೆ. ಮೌಲ್ಯಗಳು ಮತ್ತು ಅಪಮೌಲ್ಯಗಳನ್ನು ಅನಾವರಣಗೊಳಿಸುತ್ತವೆ. ಅನ್ಯಾಯ, ಅನೀತಿ, ಶೋಷಣೆ, ಬಾಲ್ಯವಿವಾಹ, ಅಸ್ಪೃಶ್ಯತೆ, ಅನಾಚಾರಗಳನ್ನು ಕನ್ನಡಿ ಹಿಡಿದು ತೋರಿಸುತ್ತವೆ ಎಂದು ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಕೆ.ವಿ.ಶಂಕರೇಗೌಡ ವಿರಚಿತ, ಮಂಜು, ಕೊಡಗು ನಿರ್ದೇಶಿಸಿರುವ ಪಾದುಕಾ ಕಿರೀಟಿ ನಾಟಕ ರಾಜಗೃಹದೊಳಗಿನ ದ್ವೇ಼ಷ, ಹತಾಸೆ, ಅಧಿಕಾರದ ದುರಾಸೆ, ತ್ಯಾಗದ ಮತ್ತು ಮಮತೆಯ ತಿರುವುಗಳ ಸಂಕೇತಿಕತೆಯನ್ನು ಪ್ರದರ್ಶನ ಮಾಡುತ್ತದೆ. ಮನುಷ್ಯ ಜೀವನ ಸಂಕೀರ್ಣತೆಯ ವ್ಯೂಹ. ಯಾವುದೂ ಸರಾಗವೂ, ಸುಲಲಿತವೂ ಆಗಿರುವುದಲ್ಲ. ಏರಿಳಿತಗಳ, ಕಷ್ಟ ಸುಖಗಳ ಸಮ್ಮಿಶ್ರಣ. ನ್ಯಾಯ ಬದ್ಧತೆಯ ಬದುಕು ಮತ್ತು ಆಡಳಿತ ವಿಧಾನವೇ ಮನುಷ್ಯನ ಜೀವನದ ಯಶಸ್ಸಿನ ಮೆಟ್ಟಿಲು ಎನ್ನುವುದನ್ನು ನಾಟಕ ಪ್ರಸ್ತುತಪಡಿಸುತ್ತದೆ ಎಂದರು.
ಜನರ ನಡುವಿದ್ದು, ಅವರ ನೊವು, ಸಂಕಟಗಳ ಪರಿಹಾರಕ್ಕೆ ಶ್ರಮಿಸಿದ ಇಬ್ಬರು ಮಹನೀಯರೀಗೆ ಜನಮುಖಿ ಟ್ರಸ್ಟ್ ಈ ವರ್ಷದಿಂದ ಜನಮುಖಿ ಸೇವಾ ಪ್ರಶಸ್ತಿ ನೀಡುತ್ತಿದೆ. ಮುಂದಿನ ವರ್ಷ ಸಾಹಿತ್ಯ, ಕೃಷಿ, ನಾಟಕ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ರಾಜ್ಯಮಟ್ಟದ ಜನಮುಖಿ ಸೇವಾ ಪ್ರಶಸ್ತಿ ನೀಡಲಿದೆ. ಪ್ರಸ್ತುತ ಸಾಲಿನಲ್ಲಿ ಮಾಜಿ ಶಾಸಕರು, ಶಿಕ್ಷಣ ತಜ್ಞರೂ, ರಾಜಕೀಯ ಮುತ್ಸದ್ಧಿಗಳೂ ಆದ ಸಿ.ಎಂ.ಲಿಂಗಪ್ಪ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು.ರಾಮನಗರದಲ್ಲಿ ಜನಜಾಗೃತಿ ವೇದಿಕೆಯನ್ನು ಕಟ್ಟಿ. ಅನೇಕ ಜನಪರ ಹೋರಾಟಗಳನ್ನು ಸಂಘಟಿಸಿದವರು. ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಯೋಜಿಸಿದವರು. ನಗರಸಭೆಯ ಅಧ್ಯಕ್ಷರಾಗಿ ನಗರಸಭೆಯ ಆವರಣದಲ್ಲಿ ಸಂವಿಧಾನದ ಪೀಠಿಕೆಯನ್ನು, ಸಾಂಸ್ಕೃತಿಕ ನಾಯಕ ಬಸವಣ್ಣನವರ ಪುತ್ಥಳಿ ಅನಾವರಣ ಮಾಡಿದವರೂ ಆದ ಕೆ.ಶೇಷಾದ್ರಿ ಅವರಿಗೆ ನೀಡುತ್ತಿರುವುದು ಪ್ರಶಂಸನೀಯ ಎಂದರು.
ನಿನಾಸಂ ತಂಡದವರು ಇಡೀ ರಾಜ್ಯಾಂದ್ಯಂತ ಅನೇಕ ನಾಟಕಗಳನ್ನು ಪ್ರದರ್ಶನ ಮಾಡುತ್ತಾ ಬರುತ್ತಿದ್ದಾರೆ. ಅದ್ಭುತ ನಟನೆ ಮಾಡುತ್ತಾ. ಸಾಮಾಜಿಕ ಸಂದೇಶ ಹೊತ್ತಿರುವ ನಾಟಕಗಳನ್ನು ಅಭಿನಯಿಸುತ್ತಾರೆ. ಪ್ರತಿಯೋಂದು ನಾಟಕದಲ್ಲಿಯೂ ಅಭಿವ್ಯಕ್ತಿ ಸ್ವಾತಂತ್ರವನ್ನು ಎತ್ತಿ ಹಿಡಿಯುವ, ಜನರ ತಪ್ಪು ಒಪ್ಪುಗಳು, ನೋವು ನಲಿವಿಗೆ ಸ್ಪಂದಿಸುವ ನಾಟಕಗಳನ್ನು ಅಭಿನಯಿಸುತ್ತಾ ಬಂದಿದ್ದಾರೆ. ಸಮಾಜದ ಅಂಕುಡೊಂಕುಗಳನ್ನು ತೋರಿಸಿ, ಸರಿ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದರು.
ದಶರಥನಿಗೆ ಮೂವರು ಪತ್ನಿಯರು. ಕೌಸಲ್ಯಾ, ಸುಮಿತ್ರಾ, ಕೈಕೇಯಿ. ನಾಲ್ವರು ಪುತ್ರರು, ರಾಮ, ಲಕ್ಶ್ಮಣ, ಭರತ, ಶತ್ರುಜ್ನ. ಮಂಥರೆಯ ಮಮತೆಯ ಸುಳಿಗೆ ಸಿಲುಕಿ ಶ್ರೀ ರಾಮ ವನವಾಸಕ್ಕೆ ತೆರಳುವ, ಭರತ ಕಾಡಿಗೆ ಹೋಗಿ, ಅಣ್ಣನ ಮನವೊಲಿಸಿ, ಮರಳಿ ರಾಜ್ಯಭಾರಕ್ಕೆ ಕರೆತರುವ ಪ್ರಯತ್ನದ ವಿಫಲತೆ, ಶ್ರೀರಾಮನ ಪಾದುಕೆಗಳನ್ನು ತಂದು, ಕಿರೀಟದಂತೆ ಸಿಂಹಾಸನದ ಮೇಲಿಟ್ಟು ಭರತ ಆಡಳಿತ ನಡೆಸುವ ಘಟನಾವಳಿಗಳು, ಸನ್ನಿವೇಶಗಳನ್ನು ಕೊಡಗು ಮಂಜು ನಿದೇರ್ಶನದಲ್ಲಿ ಅಭಿನಯಿಸಿದರು.
ಪೊಟೋ೧೫ಸಿಪಿಟಿ೧: