)
-ಕನ್ನಡ ಭಾಷಾಭಿಮಾನ ನಮ್ಮ ನಿತ್ಯದ ಉಸಿರಾಗಲಿ; ಸಚಿವ ಎಸ್.ಎಸ್.ಮಲ್ಲಿಕಾರ್ಜುನ । 71ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕೈಗಾರಿಕಾ ವಿಕೇಂದ್ರೀಕರಣದ ಮೂಲಕ ಐಟಿ-ಬಿಟಿ ಮತ್ತು ಇತರೆ ಉದ್ದಿಮೆಗಳನ್ನು ದಾವಣಗೆರೆಗೆ ತಂದು, ಸ್ಥಳೀಯವಾಗಿ ಯುವ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ 71ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ಥಳೀಯವಾಗಿ ನಮ್ಮ ಯುವ ಜನರಿಗೆ ಉದ್ಯೋಗಾವಕಾಶ ಸಿಗಲೆಂಬ ಸದುದ್ದೇಶದಿಂದ ಐಟಿ ಬಿಟಿ, ಇತರೆ ಉದ್ಯಮಗಳನ್ನು ಇಲ್ಲಿಗೆ ತರುವ ಪ್ರಯತ್ನ ಸಾಗಿದೆ ಎಂದರು.
ಆಲೂರು ವೆಂಕಟರಾಯರು, ಕೆಂಗಲ್ ಹನುಮಂತಯ್ಯ, ಎಸ್.ನಿಜಲಿಂಗಪ್ಪ ಮತ್ತಿತರೆ ಮಹನೀಯರ ಹೋರಾಟವನ್ನು ನಾವೆಲ್ಲರೂ ಸದಾ ಸ್ಮರಿಸಬೇಕು. ನಮ್ಮ ನಾಡಿಗೆ 2 ಸಾವಿರ ವರ್ಷಗಳ ಸಾಹಿತ್ಯಿಕ, ಐತಿಹಾಸಿಕ, ಸಾಂಸ್ಕೃತಿಕ ಪರಂಪರೆ, ಹಿನ್ನೆಲೆ, ಇತಿಹಾಸವಿದೆ. ಇಂತಹ ಕನ್ನಡದ ನೆಲದಲ್ಲಿ ಜನಿಸಿದ ನಾವೇ ಪುಣ್ಯವಂತರು. ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಬಳಸಿ, ಉಳಿಸುವ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರಿಗೆ ಸಾಮಾಜಿಕ ಹಾಗೂ ಆರ್ಥಿಕ ಬಲ ತುಂಬುತ್ತಿವೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಅದೆಷ್ಟೋ ಬಡ ಕುಟುಂಬಗಳಿಗೆ ಆಸರೆಯಾಗಿದೆ. ರಾಜ್ಯದಲ್ಲಿ ತೀವ್ರ ಬರ ಆವರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ರೈತರ ನೆರವಿಗೆ ತಮ್ಮ ಸರ್ಕಾರ ಸದಾ ಸಿದ್ಧವಿದೆ ಎಂದು ಅವರು ಭರವಸೆ ನೀಡಿದರು.
ದಕ್ಷಿಣ ಶಾಸಕ ಸಮರ್ಥ ಎಂ.ಶಾಮನೂರು, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಪೂರ್ವ ವಲಯ ಐಜಿಪಿ ಎನ್.ಸತೀಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಟ ಡಾ.ಎಚ್.ಟಿ.ಶೇಖರ, ಜಿಪಂ ಸಿಇಒ ಸಾಹಿತ್ಯ ಎಂ.ಆಲದಕಟ್ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಪಾಲಿಕೆ ಆಯುಕ್ತ ಡಾ.ಎನ್.ಮಹಾಂತೇಶ, ಕಾಂಗ್ರೆಸ್ ಮುಖಂಡರಾದ ಡಿ.ಬಸವರಾಜ, ಮಾಜಿ ಮೇಯರ್ ಕೆ.ಚಮನ್ ಸಾಬ್, ಪಾಲಿಕೆ ವಿಪಕ್ಷದ ಮಾಜಿ ನಾಯಕ ಎ.ನಾಗರಾಜ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು , ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು.
ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವ
2.ಜಿ. ಮುರಿಗಪ್ಪಗೌಡ-ಹೊನ್ನಾಳಿ-ಸಾಹಿತ್ಯ,
4.ಕೆ.ಮಾನಾಚಾರಿ, ಸೊರಟೂರು, ಹೊನ್ನಾಳಿ ಹಿಂದುಸ್ತಾನಿ ಸಂಗೀತ
5.ಕೊಟ್ರಪ್ಪ, ಹರಿಹರ ಡೊಳ್ಳು ಕುಣಿತ(ಜಾನಪದ)6.ರಮಾಬಾಯಿ ಕಮಲಾಕರ್, ದಾವಣಗೆರೆ ಸಂಗೀತ,
7.ಬಿ. ತಿರುಕಪ್ಪ, ದಾವಣಗೆರೆ ಕನ್ನಡ ಪರ ಹೋರಾಟ,8.ಪಿ. ಜಯರಾಮನ್-ದಾವಣಗೆರೆ-ಕ್ರೀಡೆ
9. ಕನ್ನಡಪ್ರಭ ಹಿರಿಯ ವರದಿಗಾರ ಬಾ.ರಾ. ಮಹೇಶ, ಚನ್ನಗಿರಿ-ಪತ್ರಿಕೋದ್ಯಮ,10. ಎ.ಕೆ. ಓಬಪ್ಪ, ಜಗಳೂರು ಸಂಕೀರ್ಣ,
11. ಕುಮಾರ, ದಾವಣಗೆರೆ -ಛಾಯಾಗ್ರಹಣ,12. ಎಚ್.ಎನ್. ಶಿವಕುಮಾರಸ್ವಾಮಿ, ಚನ್ನಗಿರಿ-ತಬಲಾ,
13. ಬೆನಕನಹಳ್ಳಿ ಶೇಖರಗೌಡ, ಹೊನ್ನಾಳಿ- ಮಾಧ್ಯಮ14.ಗೀತಾ ಚಂದ್ರಶೇಖರ, ದಾವಣಗೆರೆ-ಸಮಾಜ ಸೇವೆ
15.ಬಾಳಪ್ಪ ಹೆಚ್, ದಾವಣಗೆರೆ-ಜಾನಪದ16.ಮಂಜುನಾಥ ಬಿ. ದಾವಣಗೆರೆ-ಛಾಯಾಗ್ರಹಣ
17.ಜಿ. ಮುದ್ದುವೀರಸ್ವಾಮಿ ದಾವಣಗೆರೆ-ಸಾಹಿತ್ಯ18.ರವಿಕುಮಾರ್ ಕೆ.ಬಿ., ಹರಿಹರ ವೀರಗಾಸೆ
19. ಶಹನವಾಜ್ ಯು. ಆರ್. ದಾವಣಗೆರೆ ಸಮಾಜ ಸೇವೆ20.ಜಿ. ಶಂಭುಲಿಂಗಪ್ಪ, ದಾವಣಗೆರೆ-ಸಂಗೀತ
21. ಎಸ್.ಎಸ್. ಮಂಜುಶ್ರೀ(ಗೌಡ), ದಾವಣಗೆರೆ ಕನ್ನಡಪರ ಸಂಘಟನೆ22.ರಮೇಶ್ ಮಾನೆ, ಹರಿಹರ-ಕನ್ನಡ ಪರ ಹೋರಾಟಗಾರರು.
23.ಎಂ.ವೈ.ಸತೀಶ. ದಾವಣಗೆರೆ ಮಾಧ್ಯಮ24.ಶಿವಮೂರ್ತಿ ಆರ್. ಚನ್ನಗಿರಿ-ಸಂಕೀರ್ಣ
25 ಎಂ.ಆರ್. ಮಾಲತೇಶ್, ಹರಿಹರ-ಜಾನಪದ26.ಡಿ.ರಂಗನಾಥ, ಹರಿಹರ ದಾವಣಗೆರೆ-ಬೀದಿ ನಾಟಕ
27.ರಮೇಶ ಜಹಗೀರ್ದಾರ್, ದಾವಣಗೆರೆ-ಮಾಧ್ಯಮ28.ಎಸ್.ಪಿ. ನಾರಾಯಣರಾವ್(ಬಾಬುರಾವ್ ಸುತ್ರಾವ್) ದಾವಣಗೆರೆ-ಕನ್ನಡ ಪರ ಹೋರಾಟ
29.ಎಸ್. ಕೋಟೇಶ್, ದಾವಣಗೆರೆ-ಜಾನಪದ30.ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ, ದಾವಣಗೆರೆ ಮಾಧ್ಯಮ
31.ಶೇಖರಗೌಡ ಪಾಟೀಲ್, ಹರಿಹರ-ಮಾಧ್ಯಮ32. ಎ.ಎನ್.ನಿಂಗಪ್ಪ, ದಾವಣಗೆರೆ-ಮಾಧ್ಯಮ
33.ಟಿ. ಕರಿಬಸಪ್ಪ ದಾವಣಗೆರೆ- ಸಂಕೀರ್ಣ34.ವೈ. ಮಲ್ಲೇಶ್ ಶಿಲ್ಪಿ, ದಾವಣಗೆರೆ-ಶಿಲ್ಪಕಲೆ
35.ರಮೇಶ್ ಬಿ., ಹೊನ್ನಾಳಿ-ಸಮಾಜ ಸೇವೆ36.ಸಲೀಂ ಜಾವೀದ್, ದಾವಣಗೆರೆ-ಮಾಧ್ಯಮ
37. ಗಣೇಶ್ಕುಮಾರ್ ದಾವಣಗೆರೆ-ಶಿಲ್ಪಿ38 ಪುನೀತ್ ಅಪ್ತಿ, ದಾವಣಗೆರೆ ಮಾಧ್ಯಮ
39.ಬಿ.ಹನುಮಂತರಾವ್, ದಾವಣಗೆರೆ ಮಾಧ್ಯಮ40.ಶಿವ ಕೆ. ಬೆಳಗುತ್ತಿ, ನ್ಯಾಮತಿ, ವಿಜ್ಞಾನ/ತಂತ್ರಜ್ಞಾನ
.............................................ಪಥಸಂಚಲನದಲ್ಲಿ ಭಾಗವಹಿಸಿದ ತಂಡಗಳ ವಿವರ :ಡಿಎಆರ್ ಪೊಲೀಸ್ ತಂಡ- ನಾಗರಾಜ, ಆರ್ಎಸ್ಐ,ಡಿಎಆರ್.
ನಗರ ಉಪ ವಿಭಾಗ ಪೊಲೀಸ್ ತಂಡ-ಸಚಿನ್ ಬಿರಾದಾರ್, ಪಿಎಸ್ಐ, ವಿದ್ಯಾನಗರ ಠಾಣೆ,ಗೃಹರಕ್ಷಕ ದಳ-ಎಚ್.ಕೆ.ಹಾಲೇಶ್, ಪ್ಲಟೂನ್ ಕಮಾಂಡರ್
ಅರಣ್ಯ ರಕ್ಷಕದಳ-ಚೇತನ್, ಡಿಆರ್ಎಫ್ಓಜಿಲ್ಲಾ ಅಗ್ನಿಶಾಮಕ ದಳ- ನಸೀಮ್ ಸಾಬ್, ಫೈರ್ ಸ್ಟೇಷನ್ ಆಫೀಸರ್
ಎಲ್.ಆರ್. ಕಾಲೇಜ್ ಸುನೀಲ್ ಕುಮಾರ್, ಪ್ಲಟೂನ್ ಕಮಾಂಡರ್ಜಿಎಫ್ಜಿಸಿ ಕಾಲೇಜ್ ದವೀದ್ ವೈ., ಪ್ಲಟೂನ್ ಕಮಾಂಡರ್
ಡಿಆರ್ಆರ್ ಕಾಲೇಜ್ ಎಚ್.ಕುಶಾಲ್, ಪ್ಲಟೂನ್ ಕಮಾಂಡರ್ಎವಿಕೆ ಕಾಲೇಜ್-ಸುಕನ್ಯಾ ರಮೇಶ್, ಪ್ಲಟೂನ್ ಕಮಾಂಡರ್
ಸೇಂಟ್ ಪಾಲ್ಸ್ ಕಾನ್ವೆಂಟ್ ಹೈಸ್ಕೂಲ್-ಭುವನಾ ಬೆಳ್ಳೂಡಿ, ಫ್ಲಟೂನ್ ಕಮಾಂಡರ್ಭಾರತ್ ಸ್ಕೌಟ್ಸ್ & ಗೈಡ್ಸ್ ಡಿಸ್ಟ್ರಿಕ್ಟ್ ಟ್ರೂಪ್ ಗರ್ಲ್ಸ್-ಧನುಶ್ರೀ ಹಿರೇಮಠ, ಪ್ಲಟೂನ್ ಕಮಾಂಡರ್
ಸಿದ್ದಗಂಗಾ ಸ್ಕೂಲ್ ದೀಕ್ಷಾ ಆರ್, ಪ್ಲಟೂನ್ ಕಮಾಂಡರ್ಜೈನ್ ಪಬ್ಲಿಕ್ ಸ್ಕೂಲ್ -ನಿಧಿ ಎಸ್ ಪಾಟೀಲ್, ಪ್ಲಟೂನ್ ಕಮಾಂಡರ್
ಪೊಲೀಸ್ ವಾದ್ಯವೃಂದ ಹೊನ್ನೂರಪ್ಪ ಬ್ಯಾಂಡ್ ಮಾಸ್ಟರ್ ಡಿಆರ್........................................
ಪಥ ಸಂಚಲನ ಪ್ರಶಸ್ತಿ ವಿಜೇತರ ವಿವರಪೊಲೀಸ್ ಹಾಗೂ ಸರ್ಕಾರಿ ಇಲಾಖಾ ತಂಡಗಳ ವಿಭಾಗ 1. ಪ್ರಥಮ ಸ್ಥಾನ -ಡಿಎಆರ್ ಪೊಲೀಸ್ ತಂಡ 2.ದ್ವಿತೀಯ ಸ್ಥಾನ -ನಗರ ಉಪ ವಿಭಾಗ 3.ತೃತೀಯ ಸ್ಥಾನ -ಆಗ್ನಿ ಶಾಮಕ ದಳ - ಎನ್ಸಿಸಿ ವಿಭಾಗ 1.ಪ್ರಥಮ ಸ್ಥಾನ-ಜಿಎಫ್ ಜಿಸಿ 2. ದ್ವಿತೀಯ ಸ್ಥಾನ ಎಆರ್ಜಿ ಕಾಲೇಜು, 3.ತೃತೀಯ ಸ್ಥಾನ -ಡಿಆರ್ಆರ್ ಕಾಲೇಜ್, ಶಾಲಾ ತಂಡಗಳ ವಿಭಾಗ:ಪ್ರಥಮ ಸ್ಥಾನ -ಸಿದ್ಧಗಂಗಾ ಶಾಲೆ, ದ್ವಿತೀಯ ಸ್ಥಾನ ಜೈನ್ ಪಬ್ಲಿಕ್ ಶಾಲೆ, ತೃತೀಯ ಸ್ಥಾನ ಭಾರತ್ ಸ್ಕೌಟ್ ಮತ್ತು ಗೈಡ್ ತಂಡ. ಬೆಸ್ಟ್ ಡ್ರೆಸ್ ವಿಭಾಗ: ಪ್ರಥಮ ಸ್ಥಾನ-ಎವಿಕೆ ಕಾಲೇಜ್ ಎನ್.ಸಿ.ಸಿ. ತಂಡ, 2. ದ್ವಿತೀಯ ಸ್ಥಾನ-ಸೇಂಟ್ ಪಾಲ್ಸ್ ಕಾನ್ವೆಂಟ್ನ ಎನ್.ಸಿ.ಸಿ. ತಂಡ, ತೃತೀಯಸ್ಥಾನ- ಸಿದ್ಧಗಂಗಾ ಸ್ಕೂಲ್.
...................................ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂರು ತಂಡ
ಪ್ರಥಮ ಸ್ಥಾನ ಜೈನ್ ವಿದ್ಯಾಲಯ ಶಾಲೆ, ದಾವಣಗೆರೆ ದಕ್ಷಿಣ -ಇಮ್ಮಡಿ ಪುಲಕೇಶಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಥೀಮ್ ದ್ವಿತೀಯ ಸ್ಥಾನ ರಾಷ್ಟ್ರೋತ್ಥಾನ ಪ್ರೌಢಶಾಲೆ, ದಾವಣಗೆರೆ ದಕ್ಷಿಣ ವಲಯ-ಹಚ್ಚೇವು ಕನ್ನಡದ ದೀಪ ಹಾಗೂ ತೃತೀಯ ಸ್ಥಾನ ಗುರುಬಸಮ್ಮ ಜಿಗಟೇರಿ ಇಂಗ್ಲೀಷ್ ಮೀಡಿಯಂ ಶಾಲೆ, ನಿಟ್ಟುವಳ್ಳಿ, ದಾವಣಗೆರೆ ಉತ್ತರ ವಲಯ,ಕನ್ನಡ ಹಾಡುಗಳ ರೀಮಿಕ್ಸ್ ವಂದೇ ಮಾತರಂ ಗೀತೆಯನ್ನು ಪುಷ್ಪಾ ಮಹಾಲಿಂಗಪ್ಪ ಪ್ರೌಢಶಾಲೆ ಮಹಾಲಿಂಗ ಮತ್ತು ತಂಡ ಮತ್ತು ನಾಡಗೀತೆಯನ್ನು ಶಿಕ್ಷಕರ ಜಿಲ್ಲಾ ತಂಡದ ಅಜಯ್ ನಾರಾಯಣ ತಂಡವು ಪ್ರಸ್ತುತಿ ಪಡೆಸಿದವು.
............................(ಫೋಟೋ ಬರಲಿವೆ)