ತಾಯಿ ಹೆಸರಲ್ಲಿ ಮಗನ ಅಂಧಾ ದರ್ಬಾರ್‌

KannadaprabhaNewsNetwork |  
Published : May 26, 2025, 11:48 PM ISTUpdated : May 26, 2025, 11:49 PM IST
ಬೆಳಗಾವಿ ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕರ ಕಚೇರಿ ಕೊಠಡಿಯ ಆಸನದಲ್ಲಿ ಇಮ್ರಾನ್‌ ಪತ್ತೇಖಾನ ಕುಳಿತುಕೊಂಡಿರುವುದು | Kannada Prabha

ಸಾರಾಂಶ

ಬೆಳಗಾವಿ ಮಹಾನಗರ ಪಾಲಿಕೆಯ ಪ್ರತಿಪಕ್ಷದ ನಾಯಕ ಮುಜಮಿಲ್‌ ಡೋಣಿ ಅವರ ಕಚೇರಿ ಕೊಠಡಿಯಲ್ಲಿ ಅ‍ವರ ಆಸನದ ಮೇಲೆ ಪಕ್ಷೇತರ ಸದಸ್ಯೆ ಫತ್ತೆಖಾನ್‌ ಅವರ ಪುತ್ರ ಇಮ್ರಾನ್‌ ಪತ್ತೇಖಾನ್‌ ಅಕ್ರಮವಾಗಿ ಕುಳಿತು ದರ್ಪ ಮೆರೆದಿರುವ ಫೋಟೊ ಈಗ ವೈರಲ್‌ ಆಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಮಹಾನಗರ ಪಾಲಿಕೆಯ ಪ್ರತಿಪಕ್ಷದ ನಾಯಕ ಮುಜಮಿಲ್‌ ಡೋಣಿ ಅವರ ಕಚೇರಿ ಕೊಠಡಿಯಲ್ಲಿ ಅ‍ವರ ಆಸನದ ಮೇಲೆ ಪಕ್ಷೇತರ ಸದಸ್ಯೆ ಫತ್ತೆಖಾನ್‌ ಅವರ ಪುತ್ರ ಇಮ್ರಾನ್‌ ಪತ್ತೇಖಾನ್‌ ಅಕ್ರಮವಾಗಿ ಕುಳಿತು ದರ್ಪ ಮೆರೆದಿರುವ ಫೋಟೊ ಈಗ ವೈರಲ್‌ ಆಗಿದೆ.

ತಾಯಿ ಸದಸ್ಯೆಯಾಗಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಫತ್ತೇಖಾನ್ ತಾನೇ ದರ್ಬಾರ ನಡೆಸುತ್ತಿರುವುದು ಇತರೆ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದೆ. ಪ್ರತಿಪಕ್ಷ ನಾಯಕ ಮುಜಮಿಲ್ ಡೋಣಿ ಅವರ ಸಮ್ಮುಖದಲ್ಲೇ ಫತ್ತೇಖಾನ್ ಅಕ್ರಮವಾಗಿ ಅವರ ಆಸನದಲ್ಲಿ ಕುಳಿತುಕೊಳ್ಳುವ ಮೂಲಕ ಪ್ರತಿಪಕ್ಷದ ನಾಯಕನಿಗೆ ಅವಮಾನ ಮಾಡಲಾಗಿದೆ. ಮಹಾನಗರ ಪಾಲಿಕೆಯ ಸದಸ್ಯರಲ್ಲದ ವ್ಯಕ್ತಿಯೊಬ್ಬರು ನೇರವಾಗಿ ಚುನಾಯಿತ ಪ್ರತಿನಿಧಿಗಳ ಆಸನವನ್ನು ಅತಿಕ್ರಮಿಸಿ ಕುಳಿತುಕೊಂಡಿರುವುದು ಸಂಸ್ಥೆಯ ಗೌರವ, ಸಂವಿಧಾನ ಮತ್ತು ನಿಯಮಾನುಸಾರವಾದ ಕಾರ್ಯಪಟುತೆಗೆ ಧಕ್ಕೆ ತರುವಂತಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಕಳೆದ ಕೆಲ ದಿನಗಳ ಹಿಂದೆ ವಿಪಕ್ಷ ನಾಯಕ ಮುಜಮಿಲ್ ಡೋಣಿಗೆ ಮೀಸಲಾಗಿದ್ದ ಆಸನದಲ್ಲಿ ಪಕ್ಷೇತರ ಸದಸ್ಯೆ ಫತ್ತೆಖಾನ್ ಅವರ ಪುತ್ರ ಇಮ್ರಾನ್ ಫತ್ತೆಖಾನ್ ಆಸೀನರಾಗಿ ದರ್ಪ ಮೆರೆದಿದ್ದಾನೆ. ಪಾಲಿಕೆಯ ನಿಬಂಧನೆಗಳ ಪ್ರಕಾರ, ಸದಸ್ಯರಲ್ಲದವರು ಚುನಾಯಿತ ಪ್ರತಿನಿಧಿಗಳ ಆಸನ ಬಳಸುವುದು ಅಕ್ರಮ. ಆದರೂ ಇಮ್ರಾನ್ ಅವರ ಈ ವರ್ತನೆ ಮಹಾನಗರ ಪಾಲಿಕೆಯಲ್ಲಿನ ಅಶಿಸ್ತಿಗೆ ಹಿಡಿದ ಕೈಗನ್ನಡಿ. ಇಲ್ಲಿ ವೈಯಕ್ತಿಕ ಸಂಬಂಧಗಳನ್ನು ರಾಜಕೀಯ ವಲಯದಲ್ಲಿ ಬಳಸಿಕೊಂಡು ಪಾಲಿಕೆಯಲ್ಲಿ ಹಿಡಿತ ಸಾಧಿಸುವ ಪ್ರಯತ್ನ ಈ ಘಟನೆಯ ಹಿಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿಚಿತ್ರವೆಂದರೆ ತಮ್ಮ ಆಸನದಲ್ಲಿ ಅಕ್ರಮವಾಗಿ ಕುಳಿತುಕೊಂಡಿರುವ ವಿಚಾರಕ್ಕೆ ಪ್ರತಿಪಕ್ಷ ನಾಯಕ ಡೋಣಿ ಕೂಡ ಆಕ್ಷೇಪ ವ್ಯಕ್ತಪಡಿಸದಿರುವುದು ಚರ್ಚೆಗೆ ಕಾರಣವಾಗಿದೆ. ಪ್ರತಿಪಕ್ಷದ ನಾಯಕರ ಕೊಠಡಿಗೆ ತೆರಳಿ, ಅವರ ಆಸನದಲ್ಲಿ ಅಕ್ರಮವಾಗಿ ಕುಳಿತ ವ್ಯಕ್ತಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ