ಚಿಕ್ಕೋಡಿಯಲ್ಲಿ ಪಾಕಿಸ್ತಾನ ಪರ ಘೋಷಣೆಗೆ ಕಿಡಿ

KannadaprabhaNewsNetwork |  
Published : Jun 06, 2024, 12:32 AM IST
1545 | Kannada Prabha

ಸಾರಾಂಶ

ಪಾಕಿಸ್ತಾನ ಈಗ ಭಿಕಾರಿಯಾಗಿದೆ. ಅಲ್ಲಿ ಊಟಕ್ಕೆ ಆಹಾರವಿಲ್ಲ. ಭಾರತದ ಅನ್ನ ಉಂಡು, ಇಲ್ಲಿಯೇ ಹುಟ್ಟಿ, ಎಲ್ಲ ಸೌಲಭ್ಯ ಪಡೆದು ಪಾಕಿಸ್ತಾನ ಪರ ಘೋಷಣೆ ಕೂಗುತ್ತಾರೆ ಎಂದರೆ ಅಂತಹವರಿಗೆ ಮಾನ-ಮರ್ಯಾದೆ ಇಲ್ಲವೇ?

ಧಾರವಾಡ:

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ವಿಜಯೋತ್ಸವ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆಯನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಖಂಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಚಿಕ್ಕೋಡಿಯಲ್ಲಿ ಕೆಲ ಮುಸ್ಲಿಂ ಕಿಡಿಗೇಡಿಗಳು ಪಾಕಿಸ್ತಾನ ಪರ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ. ಚಿಕ್ಕೋಡಿ ಪೊಲೀಸರು ಕೂಡಲೇ ಅಂತಹ ಕಿಡಿಗೇಡಿಗಳನ್ನು ಬಂಧಿಸಿ, ದೂರು ದಾಖಲಿಸಿಕೊಂಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂತಹ ಘಟನೆಗಳು ಕಾಂಗ್ರೆಸ್‌ ಅವಧಿಯಲ್ಲೇ ಏಕಾಗುತ್ತಿವೆ? ಕಾಂಗ್ರೆಸ್‌ ಗೆದ್ದ ತಕ್ಷಣವೇ ಈ ರೀತಿಯ ವಾತಾವರಣ ಏಕೆ ಸೃಷ್ಟಿಯಾಗುತ್ತಿದೆ? ಬೆಳಗಾವಿಯಲ್ಲೂ ಈ ಹಿಂದೆ ಕಾಂಗ್ರೆಸ್‌ ಗೆದ್ದಾಗಲೂ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು. ವಿಧಾನಸೌಧದಲ್ಲೇ ರಾಜ್ಯಸಭಾ ಸದಸ್ಯ ಗೆದ್ದಾಗಲೂ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಕಡೆ ಯಾರಾದರೂ ಗೆದ್ದರೆ ಮುಸ್ಲಿಂರಿಗೆ ಪಾಕಿಸ್ತಾನ ಪರ ಏಕೆ ಇಷ್ಟು ಉತ್ಸಾಹ ಬರುತ್ತಿದೆ ಎಂದು ಮುತಾಲಿಕ ಪ್ರಶ್ನಿಸಿದರು.

ಪಾಕಿಸ್ತಾನ ಈಗ ಭಿಕಾರಿಯಾಗಿದೆ. ಅಲ್ಲಿ ಊಟಕ್ಕೆ ಆಹಾರವಿಲ್ಲ. ಭಾರತದ ಅನ್ನ ಉಂಡು, ಇಲ್ಲಿಯೇ ಹುಟ್ಟಿ, ಎಲ್ಲ ಸೌಲಭ್ಯ ಪಡೆದು ಪಾಕಿಸ್ತಾನ ಪರ ಘೋಷಣೆ ಕೂಗುತ್ತಾರೆ ಎಂದರೆ ಅಂತಹವರಿಗೆ ಮಾನ-ಮರ್ಯಾದೆ ಇಲ್ಲವೇ? ಸರ್ಕಾರ, ಪೊಲೀಸ್‌ ಇಲಾಖೆ ಕೂಡಲೇ ಇಂತಹವರನ್ನು ಎನ್‌ಕೌಂಟ‌ರ್ ಮಾಡಬೇಕು. ದೇಶದ್ರೋಹದ ಘೋಷಣೆ ಕೂಗಿ ಇಲ್ಲಿ ಬದುಕುತ್ತಾರೆ ಎಂದರೆ ಇದೊಂದು ರೀತಿಯ ಕ್ಯಾನ್ಸ‌ರ್ ಇದ್ದಂತೆ. ಇದನ್ನು ಹಾಗೇ ಬಿಟ್ಟರೆ ಅದು ಹರಡುತ್ತ ಹೋಗುತ್ತದೆ. ಇದನ್ನು ಕೂಡಲೇ ಹದ್ದುಬಸ್ತಿನಲ್ಲಿ ಇಡುವ ಕೆಲಸವನ್ನು ಸರ್ಕಾರ ಮಾಡಬೇಕು. ಇಲ್ಲದೇ ಹೋದರೆ ಇದಕ್ಕೆ ನಾವು ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...