ಕನ್ನಡಪ್ರಭ ವಾರ್ತೆ ಕುಣಿಗಲ್ ಸುತ್ತೂರು ಸಂಸ್ಥಾನ ಮಠದಲ್ಲಿ ಜನವರಿ 26ರಿಂದ 30ರವರೆಗೆ ನಡೆಯಲಿರುವ ಜಾತ್ರೆ ಕೃಷಿ ಸಾರ್ವಜನಿಕ ಹಾಗೂ ಹಲವಾರು ಕಲೆಗಳ ಆಗರವಾಗಿದೆ ಎಂದು ಕುಣಿಗಲ್ ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎನ್ ಎಸ್ ವಸಂತ್ ಕುಮಾರ್ ತಿಳಿಸಿದ್ದಾರೆ. ಕುಣಿಗಲ್ ಪಟ್ಟಣದ ಹುಚ್ಚಮಾಸ್ತಿ ಗೌಡ ವೃತಕ್ಕೆ ಬಂದ ಸುತ್ತೂರು ಜಾತ್ರಾ ರಥವನ್ನು ಸ್ವಾಗತಿಸಿ ನಂತರ ಮಾತನಾಡಿದರು. ಜಾತ್ರೆ ಎಂದರೆ ಕೇವಲ ದೇವರ ಆರಾಧನೆ ಉತ್ಸವ ಇರುತ್ತದೆ ಆದರೆ ಸುತ್ತೂರು ಜಾತ್ರೆಯಲ್ಲಿ ಕೃಷಿ, ಸಂಸ್ಕೃತಿ, ವ್ಯವಸಾಯ, ಜನಪದ, ಕಲೆ,ಸಾಹಿತ್ಯ, ಸಂಗೀತ, ಸಿನಿಮಾ, ಶಿಕ್ಷಣ ಸೇರಿದಂತೆ ಹಲವಾರು ಆಯಾಮ ವಸ್ತು ಪ್ರದರ್ಶನ ಹೀಗೆ ವಿವಿಧ ಭಾಗವಾಗಿ ಜಾತ್ರೆಯನ್ನು ಆಚರಿಸಲಾಗುತ್ತದೆ ಎಂದರು.
ಜನವರಿ 26ರಂದು ಉತ್ಸವ ಮೂರ್ತಿಯನ್ನು ಗದ್ದುಗೆ ಪ್ರತಿಷ್ಠಾಪಿಸಲಾಗಿ 27ರ ಸೋಮವಾರ ಹಾಲರವಿ ಹಾಗೂ ಸೋಮೇಶ್ವರ ಸ್ವಾಮಿಗೆ ಕುಂಭ ಅಭಿಷೇಕ ಮತ್ತು ಸಾಮೂಹಿಕ ವಿವಾಹ ನಡೆಯಲಿದೆ. 28 ರ ಮಂಗಳವಾರ ವೀರಭದ್ರೇಶ್ವರ ಕೊಂಡೋತ್ಸವ ಹಾಗೂ ರಥೋತ್ಸವ. 29 ರ ಬುಧುವಾರ ಮಹಾದೇಶ್ವರ ಸ್ವಾಮಿ ಕೊಂಡೋತ್ಸವ ಲಕ್ಷದೀಪೋತ್ಸವ ಹಾಗೂ ಮುತ್ತಿನ ಪಲ್ಲಕ್ಕಿ 30 ರ ಗುರುವಾರ ತೆಪ್ಪೋತ್ಸವ ಹಾಗೂ 31ರ ಶುಕ್ರವಾರ ಅನ್ನ ಬ್ರಹ್ಮೋತ್ಸವ ನಡೆಯಲಿದೆ.ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಪರಮಶಿವಯ್ಯ ಕುಣಿಗಲ್ ಟೌನ್ ಕಾರ್ಯದರ್ಶಿ ಪ್ರಸಾದ್, ಟೌನ್ ಉಪಾಧ್ಯಕ್ಷ ಬಸವರಾಜು, ನಿರ್ದೇಶಕರಾದ ಕೆಇಬಿ ಶಿವಣ್ಣ, ಕಗ್ಗೆರೆ ಕೃಪಾ ಶಂಕರ್, ಹೋಟೆಲ್ ಆರಾಧ್ಯ, ಸೂಳೇ ಕುಪ್ಪೆ ರಾಜಶೇಖರ್, ವಿದ್ವಾನ್ ಓ ಎಸ್ ಕುಮಾರಸ್ವಾಮಿ, ಕೊತ್ತಕೆರೆ ಸತೀಶ್, ಗವಿಮಠದ ರುದ್ರೇಶ್, ಹಾಗೂ ಸುತ್ತೂರು ಸಂಸ್ಥಾನ ಮಠದ ರಥದ ಉಸ್ತುವಾರಿಗಳಾದ ಪಂಚಾಕ್ಷರಯ್ಯ ಸೇರಿದಂತೆ ಇತರರು ಇದ್ದರು.