ಕನಸು ನನಸು ಮಾಡಲು ನಿರ್ದಿಷ್ಟ ಗುರಿ ಅಗತ್ಯ: ವಿನೋದಕುಮಾರ ಗುಂಡೆ

KannadaprabhaNewsNetwork |  
Published : Dec 28, 2024, 01:01 AM IST
ಚಿಕ್ಕೋಡಿ  ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡ 3 ದಿನಗಳ ಪ್ರವೇಶ ಕಾರ್ಯಾಗಾರ ದಿಕ್ಷಾರಂಭ-2024ನ್ನು ವಿನೋದಕುಮಾರ ಗುಂಡೆ ಉದ್ಘಾಟಿಸಿದರು. ಡಾ.ಪ್ರಸಾದ ರಾಂಪುರೆ,ಕುಮಾರ ಚೌಗಲಾ,ಮಹೇಶ ಲಟ್ಟೆ, ಸರಸ್ವತಿ ಕುರಣಿ ಇದ್ದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸು ಕಾಣಿ, ಕಾಣಿದ ಕನಸು ನನಸು ಮಾಡಲು ನಿರ್ದಿಷ್ಠ ಗುರಿ ಇಟ್ಟುಕೊಳ್ಳಬೇಕೆಂದು ಬೆಂಗಳೂರು ಎಬಿಬಿ ಇಂಡಿಯಾ ಲಿ., ಅಸೋಸಿಯೇಟ್ ಸೇಲ್ಸ್ ಡೈರೆಕ್ಟರ್ ವಿನೋದಕುಮಾರ ಗುಂಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸು ಕಾಣಿ, ಕಾಣಿದ ಕನಸು ನನಸು ಮಾಡಲು ನಿರ್ದಿಷ್ಠ ಗುರಿ ಇಟ್ಟುಕೊಳ್ಳಬೇಕೆಂದು ಬೆಂಗಳೂರು ಎಬಿಬಿ ಇಂಡಿಯಾ ಲಿ., ಅಸೋಸಿಯೇಟ್ ಸೇಲ್ಸ್ ಡೈರೆಕ್ಟರ್ ವಿನೋದಕುಮಾರ ಗುಂಡೆ ಹೇಳಿದರು.

ಚಿಕ್ಕೋಡಿಯ ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಬಿಎ ಮತ್ತು ಎಂಸಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ 3 ದಿನಗಳ ಪ್ರವೇಶ ಕಾರ್ಯಾಗಾರ ದಿಕ್ಷಾರಂಭ-2024 ಉದ್ಘಾಟಿಸಿ ಮಾತನಾಡಿ, ನಿಮ್ಮ ಜೀವನದಲ್ಲಿ ಎದರಾಗುವ ವೈಫಲ್ಯ ನಿಮಗೆ ಪಾಠ ಕಲಿಸುತ್ತವೆ. ಜ್ಞಾನ ಒಂದು ಶಕ್ತಿ, ಜ್ಞಾನ ಪಡೆಯಲೂ ಹಸಿವಿರಲಿ. ಬದಲಾವಣಿ ಅನಿವಾರ್ಯ ಹಾಗಾಗಿ ಮಾರುಕಟ್ಟೆಗೆ ಅನುಗುಣವಾಗಿ ನಿಮ್ಮನ್ನು ಅಪಗ್ರೇಡ್ ಮಾಡಿಕೊಳ್ಳಿ. ಉದ್ಯಮದಲ್ಲಿ ಒಂದು ಟೀಂನಲ್ಲಿ ನಾವು ಯಾವ ರೀತಿ ಕಾರ್ಯ ನಿರ್ವಹಿಸುತ್ತೇವೆಂಬುದು ಮುಖ್ಯ. ಈ ಗುಣ ಬೆಳೆಸಿಕೊಳ್ಳಬೇಕೆಂದರೆ ಬೇರೆ ಬೇರೆ ಚಟುವಟುಕೆಗಳಲ್ಲಿ ಭಾಗವಹಿಸಿ ಎಂದು ಹೇಳಿದರು. ಮೊಬೈಲ್‌ ನಲ್ಲಿ ಉಪಯುಕ್ತ ಮಾಹಿತಿ ಬ್ರೌಸ್ ಮಾಡಿ, ಅನಗತ್ಯ ತಪ್ಪಿಸಿ. ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಜಿಡಿಪಿ ಉನ್ನತಿಕರಿಸಲು ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡಿ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಪ್ರಸಾದ ರಾಂಪೂರೆ ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ, ನಿರಂತರ ಕಲಿಕೆ ಹಾಗೂ ಸವಾಲುಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ಬೇಕು. ಹೊಸ ವಿಷಯ ಕಲಿಯಲೂ ಕುತುಹಲವಿರಲಿ. ನಮ್ಮ ಸುತ್ತಮುತ್ತಲಿನ ಯಶಸ್ವಿ ವ್ಯಕ್ತಿತ್ವ ಮಾದರಿಯಾಗಿಟ್ಟುಕೊಂಡು ನಿಮ್ಮ ಗುರಿ ಸಾಧಿಸಲೂ ಕಾರ್ಯತತ್ಪರರಾಗಿ ಎಂದು ಸಲಹೆ ನೀಡಿದರು.

ಕಾಲೇಜಿನ ಶೈಕ್ಷಣಿಕ ಚಟುವಟಿಕೆ ಸಂಯೋಜಕ ಪ್ರೊ.ಕುಮಾರ ಚೌಗಲಾ, ಉದ್ಯೋಗಾವಕಾಶ ಅಧಿಕಾರಿ ಮಹೇಶ ಲಟ್ಟೆ, ಡಾ.ಪ್ರವೀಣ ಪಾಟೀಲ, ಸಂತೋಷ ಖೋತ, ಆನಂದ ಮಿರ್ಜಿ, ಸರಸ್ವತಿ ಕುರಣಿ, ಅನಿಶಾ ಪಾಂಡಾ, ಕೀರ್ತಿ ಪಾಟೀಲ, ಜ್ಯೋತಿ ಕಾಗಲಕರ, ಐಶ್ವರ್ಯ ವಂಟಮುತ್ತೆ ಇದ್ದರು. ಸುನೀಲ ಶಿಂಧೆ ಸ್ವಾಗತಿಸಿದರು. ಮಹಾಲಕ್ಷ್ಮಿ ಅರಮಣಿ ನಿರೂಪಿಸಿದರು. ಶ್ರೇಯಾ ಕೆರಿಪಾಳೆ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ