ರಾಜ್ಯದ ಪೌರಕಾರ್ಮಿಕರೊಬ್ಬರಿಂದ ಮೈಸೂರು ದಸರಾ ಉದ್ಘಾಟಿಸಲು ಒತ್ತಾಯ

KannadaprabhaNewsNetwork |  
Published : Jul 27, 2026, 01:15 AM IST
ರಾಜ್ಯ ಪೌರಕಾರ್ಮಿಕರೊಬ್ಬರಿಂದ ಮೈಸೂರು ದಸರಾಉದ್ಘಾಟಿಸಬೇಕೆಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ | Kannada Prabha

ಸಾರಾಂಶ

ತರೀಕೆರೆನಾಡ ಹಬ್ಬವಾದ ಮೈಸೂರು ದಸರಾವನ್ನು ರಾಜ್ಯದ ಪೌರ ಕಾರ್ಮಿಕರೊಬ್ಬರಿಂದ ಉದ್ಘಾಟಿಸಬೇಕೆಂದು ಸರ್ಕಾರದ ಗಮನ ಸೆಳೆಯಲು‌ ಸಾಹಿತಿ‌ ಮನಸುಳಿ‌ ಮೋಹನ್ ಪಟ್ಟಣದ ಸಂಗೊಳ್ಳಿರಾಯಣ್ಣ ಪುತ್ಥಳಿ ಬಳಿ ಒಂದು‌ ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ಮಾಡಿದರು.

ಸಂಗೊಳ್ಳಿರಾಯಣ್ಣ ಪುತ್ಥಳಿ ಬಳಿ ಸಾಂಕೇತಿಕ ಉಪವಾಸ ಸತ್ಯಾಗ್ರಹ

ಕನ್ನಡಪ್ರಭ ವಾರ್ತೆ ತರೀಕೆರೆ

ನಾಡ ಹಬ್ಬವಾದ ಮೈಸೂರು ದಸರಾವನ್ನು ರಾಜ್ಯದ ಪೌರ ಕಾರ್ಮಿಕರೊಬ್ಬರಿಂದ ಉದ್ಘಾಟಿಸಬೇಕೆಂದು ಸರ್ಕಾರದ ಗಮನ ಸೆಳೆಯಲು‌ ಸಾಹಿತಿ‌ ಮನಸುಳಿ‌ ಮೋಹನ್ ಪಟ್ಟಣದ ಸಂಗೊಳ್ಳಿರಾಯಣ್ಣ ಪುತ್ಥಳಿ ಬಳಿ ಒಂದು‌ ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ಮಾಡಿದರು.

ಈ ಸಂದರ್ಭದಲ್ಲಿ ಸಾಹಿತಿ ಮನಸುಳಿ ಮೋಹನ್ ಮಾತನಾಡಿ, ಸಮ ಸಮಾಜದ ನಿರ್ಮಾಣ, ಸಮಬಾಳು ಸಮಪಾಲು ಇವುಗಳು ಬುದ್ಧ, ಬಸವಣ್ಣ. ಡಾ.ಬಿ.ಆರ್.ಅಂಬೇಡ್ಕರ್ ಆಶಯಗಳನ್ನು ಸಾಕಾರಗೊಳಿಸಲು ಪೌರ ಕಾರ್ಮಿಕರನ್ನು ನಾಡ ಹಬ್ಬಕ್ಕೆ ಗುರುತಿಸುವುದು ಅಗತ್ಯ. ನಾಡಿನ ಸ್ವಚ್ಛತೆ, ಸಾರ್ವಜನಿಕವಾಗಿ ರೋಗಗಳ ನಿಯಂತ್ರಣ ಆಗಿರುವುದು ಪೌರ ಕಾರ್ಮಿಕರ ಶ್ರಮದಿಂದ ಇವರ ಶ್ರಮಕ್ಕೆ ಗೌರವ ಸಲ್ಲಿಸಲು ನಾಡ ದೇವತೆ ಶ್ರೀ ಚಾಮುಂಡೇಶ್ವರಿಗೆ ಪೌರ ಕಾರ್ಮಿಕರಿಂದ ಪೂಜೆ ಸಲ್ಲಿಸುವ ಮೂಲಕ ಸಮಾನತೆ ಮತ್ತಷ್ಟು ಗಟ್ಟಿಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉಪವಾಸ ಸತ್ಯಾಗ್ರಹಿ ಹೂವಿನ ಜಯ್ಯಣ್ಣ, ಜಯ ಕರ್ನಾಟಕ ಸಂಘದ ಅಧ್ಯಕ್ಷ ಜಗದೀಶ್, ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್.ಧರ್ಮರಾಜ್, ಟಿ.ಎಸ್.ವರ್ಮಪ್ರಕಾಶ್, ಮಲೆನಾಡು ನಾಗರಾಜ್, ಪುರಸಭೆ ಸದಸ್ಯರಾದ ಹಳಿಯೂರು ಕುಮಾರ್, ಟಿ.ಎಂ.ಭೋಜರಾಜ್, ಕೃಷಿಕ ಸಮಾಜದ ನಿರ್ದೇಶಕ ಗಿರಿರಾಜ್, ಸಾಹಿತಿ ಕವಾಲಿ ಸೋಮಶೇಖರ್, ಕನ್ನಡ ಶ್ರೀ ಭಗವಾನ್ ಇತರರು ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿದರು.

-

26ಕೆಟಿಆರ್.ಕೆ.1ಃ ರಾಜ್ಯ ಪೌರಕಾರ್ಮಿಕರೊಬ್ಬರಿಂದ ಮೈಸೂರು ದಸರಾ ಉದ್ಘಾಟಸಬೇಕೆಂದು ಒತ್ತಾಯಿಸಿ ತರೀಕೆರೆಯಲ್ಲಿ ಸಾಹಿತಿ ಮನಸುಳಿ ಮೋಹನ್ ಅವರು ಉಪವಾಸ ಸತ್ಯಾಗ್ರಹ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೊಡ್ಡದಾಳವಟ್ಟದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ
ಸಮಾಜಕ್ಕೆ ಉಪಯುಕ್ತ ವ್ಯಕ್ತಿಯಾಗುವುದು ಮುಖ್ಯ: ಸಂಸದ