-ಮಾಹಿತಿ ಕಾರ್ಯಾಗಾರ
- ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಸಲಹೆ------------
ಕನ್ನಡಪ್ರಭ ವಾರ್ತೆ ಶಿವಮೊಗ್ಗಸೂಕ್ಷ್ಮ, ಸಣ್ಣ ಉದ್ಯಮಗಳ ಮಾರುಕಟ್ಟೆ ಮತ್ತು ವ್ಯಾಪಾರ ಸಕ್ರಿಯಗೊಳಿಸುವಿಕೆ ಹೆಚ್ಚಿಸಲು ಇ-ವಾಣಿಜ್ಯ ಉತ್ತಮ ವೇದಿಕೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘ, ರಾಷ್ಟ್ರೀಯ ಸಣ್ಣ ಕ್ಯೆಗಾರಿಕೆಗಳ ನಿಗಮದ ಸಹಯೋಗದೊಂದಿಗೆ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ಎಂಎಸ್‌ಎಂಇ ವ್ಯಾಪಾರ ಸಕ್ರಿಯಗೊಳಿಸುವಿಕೆ ಮತ್ತು ಮಾರುಕಟ್ಟೆ (ತಂಡ) ಉಪಕ್ರಮ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳನ್ನು ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಇ ವಾಣಿಜ್ಯ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ಜಂಟಿ ನಿರ್ದೇಶಕ ಎಚ್. ಸುರೇಶ್ ಮಾತನಾಡಿ, ಎಂಎಸ್‌ಎಂಇಗಳಿಗೆ ವ್ಯವಹಾರ ಉತ್ಪನ್ನಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ಗೆ ಇ-ಕಾಮರ್ಸ್ ತುಂಬಾ ಉಪಯುಕ್ತ. ಈ ಸೌಲಭ್ಯ ಎಲ್ಲರೂ ಬಳಸಿಕೊಳ್ಳಬೇಕು ಎಂದು ಹೇಳಿದರು.ಎನ್‌ಎಸ್‌ಐಸಿ ಜನರಲ್ ಮ್ಯಾನೇಜರ್ ಜಿ.ಕಣ್ಣನ್ ಮಾತನಾಡಿ, ಭಾರತ ಸರ್ಕಾರದ ಇ-ಕಾಮರ್ಸ್ ಪ್ರಜಾಪ್ರಭುತ್ವೀಕರಣದ ಉದ್ದೇಶದೊಂದಿಗೆ ಸಮನ್ವಯಗೊಳಿಸಲು ಎಂಎಸ್‌ಎಂಇಗಳ ಪ್ರಯೋಜನಕ್ಕಾಗಿ ರಾಷ್ಟ್ರೀಯ ಸಣ್ಣ ಕ್ಯೆಗಾರಿಕೆಗಳ ನಿಗಮ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಡಿಜಿಟಲ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಎನ್‌ಎಸ್‌ಐಸಿ ಅತ್ಯಂತ ವೇಗವಾಗಿದ್ದು, ಬಿ ಟು ಬಿ ಪೋರ್ಟಲ್ ಎಂಎಸ್‌ಎಂಇ ಗ್ಲೋಬಲ್ ಮಾರ್ಟ್ ಪ್ರಾರಂಭಿಸಿದೆ. ಇದು ಬಿ ಟು ಬಿ ಮಾರ್ಕೆಟಿಂಗ್‌ಗೆ ಆನ್‌ಲೈನ್ ವೇದಿಕೆ ಒದಗಿಸುತ್ತದೆ. ಪ್ರಪಂಚದಾದ್ಯಂತದ ಖರೀದಿದಾರರು ಮತ್ತು ಪೂರೈಕೆದಾರರೊಂದಿಗೆ ಎಂಎಸ್‌ಎಂಇಗಳನ್ನು ಸಂಪರ್ಕಿಸುತ್ತದೆ. ದೇಶದಲ್ಲಿ ಎಂಎಸ್‌ಎಂಇಗಳ ದುರ್ಬಲ ಮಾರ್ಕೆಟಿಂಗ್, ಮಾರುಕಟ್ಟೆ ಪ್ರವೇಶ ಮತ್ತು ಗೋಚರತೆಯ ಸವಾಲನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಗುರಿಯನ್ನು ಈ ಪೋರ್ಟಲ್ ಹೊಂದಿದೆ ಎಂದು ಹೇಳಿದರು.ಎನ್‌ಎಸ್‌ಐಸಿ ಬ್ರಾಂಚ್ ಮ್ಯಾನೇಜರ್ ರುದ್ರಸ್ವಾಮಿ ಎಚ್ ಮಾತನಾಡಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೂಲಕ ಡಿಜಿಟಲ್ ವಾಣಿಜ್ಯಕ್ಕಾಗಿ ಮುಕ್ತ ಜಾಲದ ಮೂಲಕ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಲ್ಲಿ ಇ-ವಾಣಿಜ್ಯ ಅಳವಡಿಕೆ ಪ್ರಚಾರ ಮಾಡುವುದು. ಸಣ್ಣ ವ್ಯವಹಾರಗಳ ಡಿಜಿಟಲೀಕರಣಕ್ಕೆ ಇರುವ ತಡೆಗೋಡೆಯನ್ನು ಕಡಿಮೆ ಮಾಡಲು ನೇರ ವಿತ್ತೀಯ ಮತ್ತು ರಚನಾತ್ಮಕ ಸಹಾಯ ಒದಗಿಸುತ್ತದೆ ಎಂದು ಹೇಳಿದರು.130 ಕ್ಕೂ ಹೆಚ್ಚು ಉತ್ಪಾದನಾ ಅಥವಾ ಸೇವಾ ವಲಯಗಳಲ್ಲಿ ಉದ್ಯಮ ನೋಂದಣಿ ಹೊಂದಿರುವ ಸೂಕ್ಷ್ಮ ಮತ್ತು ಸಣ್ಣ ಉದ್ಯಮಿಗಳು ಭಾಗವಹಿಸಿದ್ದರು.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ವ್ಯವಸ್ಥಾಪಕ ಪ್ರಕಾಶ್ ಕುಮಾರ್, ಸ್ಟೇಟ್ ನೋಡಲ್ ಆಫೀಸರ್ ಕೆ. ದತ್ತ ಕುಮಾರ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕ ಗಣೇಶ್ ಎಂ.ಅಂಗಡಿ, ಪ್ರದೀಪ್ ವಿ ಎಲ್, ರವಿಪ್ರಕಾಶ್ ಜೆನ್ನಿ, ಬಿ.ಸುರೇಶ್ ಕುಮಾರ್, ಪಿ.ರುದ್ರೇಶ್, ವಿನೋದ್ ಗುಜ್ಜಾಡಿ, ಡಾ ಲಕ್ಷ್ಮೀದೇವಿ ಗೋಪಿನಾಥ್, ವಿ.ಕೆ.ಜೈನ್, ಮಾಜಿ ಅಧ್ಯಕ್ಷ ಟಿ.ಆರ್.ಅಶ್ವಥ್ ನಾರಾಯಣ್ ಶೆಟ್ಟಿ, ಡಿ.ಎಂ.ಶಂಕರಪ್ಪ, ಕಾರ್ಯನಿರ್ವಾಹಕ ಕಾರ್ಯದರ್ಶಿ ಕಮಲಾಕ್ಷರಪ್ಪ, ಸಿಬ್ಬಂದಿ ಚೆನ್ನವೀರಪ್ಪ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಪ ವ್ಯವಸ್ಥಾಪಕ ಅವಿನಾಶ್ ನಾರಾಯಣ್ ಪಾಟೀಲ್, ಸಾಗರ್ ರಸ್ತೆ ಇಂಡಸ್ಟ್ರಿ ಅಧ್ಯಕ್ಷ ಉಮೇಶ್ ಶಾಸ್ತ್ರೀ, ಮಂಡ್ಲಿ ಕಲ್ಲೂರ್ ಇಂಡಸ್ಟ್ರಿ ಅಧ್ಯಕ್ಷ ಗೆವರ ಚಂದ್, ಡಿಸ್ಟ್ರಿಬ್ಯೂಟರ್ ಅಸೋಸಿಯೇಷನ್ ಅಧ್ಯಕ್ಷ ದೇವರಾಜ್, ಸಂಯೋಜಕ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು ಇದ್ದರು.
----ಪೋಟೋ:-----
21ಎಸ್ಎಂಜಿಕೆಪಿ06
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘ, ರಾಷ್ಟ್ರೀಯ ಸಣ್ಣ ಕ್ಯೆಗಾರಿಕೆಗಳ ನಿಗಮದ ಸಹಯೋಗದೊಂದಿಗೆ ಸಂಘದ ಸಭಾಂಗಣದಲ್ಲಿ ಎಂಎಸ್‌ಎಂಇ ವ್ಯಾಪಾರ ಸಕ್ರಿಯಗೊಳಿಸುವಿಕೆ ಮತ್ತು ಮಾರುಕಟ್ಟೆ (ತಂಡ) ಉಪಕ್ರಮ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳನ್ನು ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಇ ವಾಣಿಜ್ಯ ಮಾಹಿತಿ ಕಾರ್ಯಾಗಾರ ನಡೆಯಿತು.