ಹೆದ್ದಾರಿಯಲ್ಲಿ ಇದ್ದೂ ಇಲ್ಲದಂತಾದ ಬೀದಿ ದೀಪ

KannadaprabhaNewsNetwork |  
Published : Nov 12, 2026, 02:15 AM IST
(11ಎನ್.ಆರ್.ಡಿ4 ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಕು ನೀಡದ ವಿದ್ಯುತ ದೀಪಗಳು.)  | Kannada Prabha

ಸಾರಾಂಶ

ಹುಬ್ಬಳ್ಳಿ-ಸೋಲ್ಲಾಪೂರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪಟ್ಟಣದ ಸೌಂದರ್ಯ ಹೆಚ್ಚಿಸುವ ಮತ್ತು ನಗರ ಪ್ರದೇಶದಲ್ಲಿನ ಹೆದ್ದಾರಿ ಸಂಚಾರ ಸುಗಮ ಹಾಗೂ ಸುರಕ್ಷಿತವಾಗಿರಲಿ ಎಂಬ ಉದ್ದೇಶದಿಂದ ವಿದ್ಯುತ್‌ ದೀಪದ ಕಂಬ ಅಳವಡಿಸಲಾಗಿದೆ. ಆದರೆ ಈ ವಿದ್ಯುತ್‌ ಕಂಬಗಳು ಬೆಳಕು ನೀಡದೆ ಇದ್ದೂ ಇಲ್ಲದಂತಾಗಿವೆ.

ಡಿವೈಡರ್ ಅಗಲೀಕರಣ ಅಪೂರ್ಣ । ಮುರಿದು ಬಿದ್ದಿರುವ ಹತ್ತಕ್ಕೂ ಹೆಚ್ಚು ಕಂಬಗಳುಎಸ್.ಜಿ. ತೆಗ್ಗಿನಮನಿ

ಕನ್ನಡಪ್ರಭ ವಾರ್ತೆ ನರಗುಂದ

ಹುಬ್ಬಳ್ಳಿ-ಸೋಲ್ಲಾಪೂರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪಟ್ಟಣದ ಸೌಂದರ್ಯ ಹೆಚ್ಚಿಸುವ ಮತ್ತು ನಗರ ಪ್ರದೇಶದಲ್ಲಿನ ಹೆದ್ದಾರಿ ಸಂಚಾರ ಸುಗಮ ಹಾಗೂ ಸುರಕ್ಷಿತವಾಗಿರಲಿ ಎಂಬ ಉದ್ದೇಶದಿಂದ ವಿದ್ಯುತ್‌ ದೀಪದ ಕಂಬ ಅಳವಡಿಸಲಾಗಿದೆ. ಆದರೆ ಈ ವಿದ್ಯುತ್‌ ಕಂಬಗಳು ಬೆಳಕು ನೀಡದೆ ಇದ್ದೂ ಇಲ್ಲದಂತಾಗಿವೆ.

ಒಂದು ಕಡೆ ಹೆದ್ದಾರಿ ಮಧ್ಯೆ ಇರುವ ಬೀದಿ ದೀಪಗಳು ಬೆಳಕು ನೀಡದೆ ಇರುವುದು ಅಪಘಾತಗಳಿಗೆ ದಾರಿ ಮಾಡಿಕೊಟ್ಟಿದ್ದು. ಮತ್ತೊಂದು ಕಡೆ ಅವೈಜ್ಞಾನಿಕ ಡಿವೈಡರ್ ನಿರ್ಮಾಣ ಮಾಡಿದ್ದರಿಂದ ಪ್ರತಿ ನಿತ್ಯ ಅಪಘಾತಗಳು ಈ ರಸ್ತೆಯಲ್ಲಿ ನಡೆದರೂ ಕೂಡ ಸಂಬಂಧಿಸಿದ ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ.

₹ 2 ಕೋಟಿ 70 ಲಕ್ಷ ಖರ್ಚು:

ರಾಷ್ಟ್ರೀಯ ಹೆದ್ದಾರಿ ನಿಗಮದ ವ್ಯಾಪ್ತಿಗೆ ಬರುವ ಹುಬ್ಬಳ್ಳಿ-ಸೋಲ್ಲಾಪೂರ ರಾಷ್ಟ್ರೀಯ ಹೆದ್ದಾರಿ 5.2 ಕಿಮೀ ನಗರದಲ್ಲಿ ಹಾದುಹೋಗಿದೆ. ಜನ ಹಾಗೂ ವಾಹನ ಸಂಚಾರಕ್ಕೆ ಅಡೆ ತಡೆಯಾಗದಂತೆ ಮತ್ತು ಪಟ್ಟಣ ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶದಿಂದ 2022ರಲ್ಲಿ ಲೋಕೋಪಯೋಗಿ ಇಲಾಖೆ ₹2 ಕೋಟಿ 70ಲಕ್ಷದ ವೆಚ್ಚದಲ್ಲಿ ಡಿವೈಡರ್ ನಿರ್ಮಿಸಿ 5.2 ಕಿಮೀ ವ್ಯಾಪ್ತಿಯಲ್ಲಿ 72 ಬೀದಿ ದೀಪಗಳನ್ನು ಅಳವಡಿಸಿದೆ. ಅವೈಜ್ಞಾನಿಕವಾಗಿ ಡಿವೈಡರ್ ನಿರ್ಮಿಸಿದ್ದರಿಂದ ಅಪಘಾತಗಳು ಹೆಚ್ಚಾಗುತ್ತಿದ್ದಂತೆ 1.50 ಮೀಟ‌ರ್ ಇದ್ದ ಡಿವೈಡರನ್ನು 3 ಮೀಟರ್‌ಗೆ ಹೆಚ್ಚಿಸಲು ಕ್ರಮ ಕೈಗೊಂಡಿತ್ತು. ಆದರೆ ಡಿವೈಡರ್ ಅಗಲೀಕರಣ ಅಪೂರ್ಣಗೊಂಡಿದೆ. 72 ವಿದ್ಯುತ್ ಕಂಬಗಳಲ್ಲಿ ಹತ್ತಕ್ಕೂ ಹೆಚ್ಚು ಕಂಬಗಳು ಮುರಿದು ಬಿದ್ದಿವೆ. ಇಂತಹ ಸ್ಥಿತಿಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ನಿಗಮಕ್ಕೆ ಹಸ್ತಾರಿಸಲು ಮುಂದಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ನಿಗಮ ಅಧಿಕಾರಿಗಳು ತಿರಸ್ಕರಿಸಿದ್ದಾರೆ.

ವಿದ್ಯುತ್‌ ಬಿಲ್ ಭರಿಸುವುದು ಕಷ್ಟ:

ಇನ್ನೊಂದು ಕಡೆ ವಿದ್ಯುತ್ ದೀಪಗಳ ನಿರ್ವಹಣೆಯಿಂದ ಬಿಲ್‌ ಭರಿಸುವುದು ಕಷ್ಟ ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ಬೀದಿ ದೀಪಗಳ ದುರಸ್ತಿ, ನಿರ್ವಹಣೆಗೆ ಯಾರು ಜವಾಬ್ದಾರರು ಎಂಬುದು ಮಾತ್ರ ಕಗ್ಗಂಟಾಗಿದೆ.

ಅಧಿಕಾರಿಗಳಿಗೇ ಸ್ಪಷ್ಟತೆ ಇಲ್ಲ:

ಈ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಲ್ಲಿ ಸ್ಪಷ್ಟತೆಯೇ ಇಲ್ಲವಾಗಿದೆ. 2022ರಲ್ಲಿ ಕಾಮಗಾರಿ ಆರಂಭಿಸಿದ್ದು 2023ಕ್ಕೆ ಕಾಮಗಾರಿ ಪೂರ್ಣಗೊಳಿಸಿ ರಾಷ್ಟ್ರೀಯ ಹೆದ್ದಾರಿಗೆ ಹಸ್ತಾಂತರಿಸಿದ್ದೇವೆ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ. ಆದರೆ ಡಿವೈಡರ್ ಮತ್ತು ಬೀದಿ ದೀಪಗಳ ಕಾಮಗಾರಿ ಪೂರ್ಣಗೊಂಡಿಲ್ಲ, ಇದರಿಂದ ನಾವು ತಿರಸ್ಕರಿಸಿದ್ದೇವೆ ಎಂದು ಹೆದ್ದಾರಿ ಅಧಿಕಾರಿಗಳು ಹೇಳಿದ್ದಾರೆ.

ಹೆದ್ದಾರಿ ಕತ್ತಲಲ್ಲಿ:

ನಿತ್ಯ ಹೆದ್ದಾರಿ ದೀಪ ಉರಿದರೆ ವಿದ್ಯುತ್ ಬಿಲ್ ಭರಿಸಲು ಆಗದು ಎಂದು ಪುರಸಭೆ ಹಿಂದೇಟು ಹಾಕುವುತ್ತಿರುವುದು ಕೇಳಿ ಬಂದಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಹೆದ್ದಾರಿ ಕತ್ತಲಲ್ಲಿ ಮುಳುಗುವಂತಾಗಿದೆ. ಹಬ್ಬ ಹರಿದಿನಗಳಲ್ಲಿ ಹೆದ್ದಾರಿ ದೀಪಗಳನ್ನು ಬೆಳಗಿಸುವಂತೆ ಶಾಸಕರು ಈ ಹಿಂದೆ ನಡೆದ ಸಭೆಯಲ್ಲಿ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮುರಿದು ಬಿದ್ದ ಕಂಬಗಳು:

ಅಪಘಾತದಿಂದ ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮುರಿದ ಬಿದ್ದ ಸಂದರ್ಭದಲ್ಲಿ ಪೊಲೀಸರು ಬಂದು ವಾಹನಗಳಿಗೆ ದಂಡ ಹಾಕಿ ಕಳುಹಿಸಿದ್ದು ದಂಡದ ಹಣ ಎಲ್ಲಿಗೆ ಹೋಯಿತು?, ಈ ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬಾರದೆ ಇರುವುದು ಆಶ್ಚರ್ಯ ತರುವ ಸಂಗತಿ. ಎಷ್ಟು ವಾಹನಗಳ ಅಪಘಾತದಿಂದ ಹೆದ್ದಾರಿ ಕಂಬಗಳು ಎಷ್ಟು ಬಿದ್ದಿವೆ ಎಂಬುದರ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇಲ್ಲವಾಗಿದೆ.ಡಿವೈಡರ್‌ ವಿಸ್ತರಣೆಗೆ ಬಂದಿರುವ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈ ಕಾಮಗಾರಿಯನ್ನು ಮೇಲಾಧಿಕಾರಿಗಳು ಪರಿಶೀಲನೆ ಮಾಡಿ ಕಳೆಪ ಕಾಮಗಾರಿ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಎಲ್ಲಾ 72 ವಿದ್ಯುತ್‌ ದೀಪಗಳನ್ನು ಪ್ರತಿ ದಿನ ಬೆಳಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು.

ಬಸವರಾಜ ತಾವರೆ, ಜಯ ಕರ್ನಾಟಕ ಸಂಘಟನೆ ಜಿಲ್ಲಾ ಮುಖಂಡರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಿಂದ ಎಷ್ಟು ಕಂಬಗಳು ಮುರಿದು ಬಿದ್ದಿವೆ ಎನ್ನುವ ಬಗ್ಗೆ ಪರಿಶೀಲನೆ ಮಾಡಿ ಅವುಗಳನ್ನು ದುರಸ್ತಿ ಮಾಡಿ ವಿದ್ಯುತ್ ದೀಪ ಬೆಳಗಿಸಲು ಕ್ರಮ ಕೈಗೊಳ್ಳುತ್ತೇವೆ.

ಬಸವರಾಜ ಬಿರಾದಾರ, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌