ಒತ್ತಡ ಬದುಕಿನಿಂದ ಆರೋಗ್ಯದ ಮೇಲೂ ದುಷ್ಪರಿಣಾಮ

KannadaprabhaNewsNetwork |  
Published : May 17, 2024, 12:31 AM IST
16ಕಕಡಿಯು1. | Kannada Prabha

ಸಾರಾಂಶ

ಕಡೂರು, ಆಧುನಿಕ ಜೀವನದ ಒತ್ತಡ ಬದುಕು, ಬದಲಾದ ಆಹಾರ ಪದ್ಧತಿ ಮತ್ತು ನಿದ್ರಾ ಹೀನತೆಯಿಂದ ಎಲ್ಲ ವಯಸ್ಸಿನರವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಚಿಕ್ಕಮಗಳೂರಿನ ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ಹೇಳಿದರು.

ಆರೋಗ್ಯ ಜಾಗೃತಿ - ತಪಾಸಣಾ ಶಿಬಿರ ಉದ್ಘಾಟನೆಯಲ್ಲಿ ಡಾ.ಮೋಹನ್ ಕುಮಾರ್

ಕನ್ಡಡಪ್ರಭ ವಾರ್ತೆ, ಕಡೂರು

ಆಧುನಿಕ ಜೀವನದ ಒತ್ತಡ ಬದುಕು, ಬದಲಾದ ಆಹಾರ ಪದ್ಧತಿ ಮತ್ತು ನಿದ್ರಾ ಹೀನತೆಯಿಂದ ಎಲ್ಲ ವಯಸ್ಸಿನರವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಚಿಕ್ಕಮಗಳೂರಿನ ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ಹೇಳಿದರು.

ಕಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಯುವ ಘಟಕ ಮತ್ತು ಆಂತರಿಕ ಗುಣಮಟ್ಟ ಭರವಸೆ ಘಟಕದಿಂದ ಆಯೋಜಿಸಿದ್ದ ಎರಡು ದಿನಗಳ ಆರೋಗ್ಯ ಜಾಗೃತಿ ಮತ್ತು ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಕೆಲ ಅದ್ಯಯನಗಳ ಪ್ರಕಾರ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ನೆನಪಿನ ಶಕ್ತಿ ಕುಂದುತ್ತಿದ್ದು, ಲ್ಯಾಪ್ ಟ್ಯಾಪ್ ಗಳಲ್ಲಿನ ರೆಡಿ ಉತ್ತರ ಪಡೆದು ಉತ್ತೀರ್ಣರಾಗುತ್ತಿದ್ದಾರೆ. ಮನನ ಮಾಡಿಕೊಳ್ಳಲು ಆಗದಂತಾಗಿದೆ. ಮೊಬೈಲ್ ನಿಂದ ಹೊರ ಬಂದು ಶ್ರದ್ಧೆಯಿಂದ ಪುಸ್ತಕಗಳನ್ನು ಅಧ್ಯಯನ ಮಾಡಿ ಬರೆದಲ್ಲಿ ಗ್ರಹಣಶಕ್ತಿ ಹೆಚ್ಚುವ ಮೂಲಕ ಉತ್ತಮ ಭವಿಷ್ಯ ರೂಪಿಸಿ ಕೊಳ್ಳಲು ಸಾದ್ಯ ಎಂದರು. ಬದಲಾದ ಆಧುನಿಕ ಜೀವನ ಶೈಲಿಯಿಂದ ಕೇವಲ 24 ವರ್ಷದ ವಯಸ್ಸಿನ ಯುವಕನಿಗೆ ಹೃದಯಾಘಾತ ಆಗುತ್ತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ದೇಹಕ್ಕೆ ಒತ್ತಡ ಮತ್ತು ಯಾವುದೇ ವ್ಯಾಯಾಮ ವಿಲ್ಲದೆ ಎಲ್ಲವನ್ನೂ ಕುಳಿತಲ್ಲಿಯೇ ಮಾಡುವ ಕಾರಣಕ್ಕೆ ಆಗಿದೆ. ನಮ್ಮ ದೇಹ ಸದಾ ಕ್ರಿಯಾಶೀಲವಾಗಿರಲು ಪ್ರತಿನಿತ್ಯ ವ್ಯಾಯಾಮ ಮಾಡುವುದು ಅತೀ ಮುಖ್ಯವಾಗಿದೆ. ಇತ್ತೀಚಿನ ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಮುಳುಗಿ ದೈಹಿಕ ತೊಂದರೆಗಳಿಗೆ ಈಡಾಗುತ್ತಿದ್ದಾರೆ. ಇದು ತಪ್ಪಬೇಕು. ಆರೋಗ್ಯಕರ ಆಹಾರ ಮತ್ತು ಜೀವನ ಶೈಲಿ ರೂಡಿಸಿಕೊಳ್ಳಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಕೆ. ವಿ,ರಾಜಣ್ಣ ಮಾತನಾಡಿ, ಯುವ ಜನತೆಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಇಂತಹ ಜಾಗೃತಿ ಮೂಡಿಸುವ ಈ ಆರೋಗ್ಯ ಶಿಬಿರ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ದೈಹಿಕ ತೊಂದರೆಗಳ ಕುರಿತು ತಪಾಸಣೆಗೆ ಒಳಗಾಗಿ ಅಗತ್ಯ ಸಲಹೆ ಮತ್ತು ಚಿಕಿತ್ಸೆಪಡೆದು ಉತ್ತಮ ಆರೋಗ್ಯ ಹೊಂದಬೇಕು. ಈ ನಿಟ್ಟಿನಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ವಿವಿಧ ವಿಭಾಗಗಳ ವೈದ್ಯರು ಭಾಗವಹಿಸಲಿದ್ದು ವಿದ್ಯಾರ್ಥಿಗಳು ತಪಾಸಣೆಗೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರುಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್.ಟಿ.ಮಂಜುನಾಥ್, ಯುವರೆಡ್ ಕ್ರಾಸ್ ಸಂಚಾಲಕ ಟಿ.ಕೆ.ತಿಮ್ಮೇಗೌಡ, ಐಕ್ಯೂಎಸಿ ಸಂಚಾಲಕ ಎಂ.ರಾಘವೇಂದ್ರ ಕುಮಾರ್, ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಎಚ್.ಎಸ್.ಜಲಜಾಕ್ಷಿ ,ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.-- ಬಾಕ್ಸ್ ---ವಿದ್ಯಾರ್ಥಿಗಳಲ್ಲಿ ಅಂಗಾಂಗ ದಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಮೆದುಳು ನಿಷ್ಕ್ರಿಯಗೊಂಡ ಸಮಯದಲ್ಲಿ ಅವರ ಕುಟುಂಬ ವರ್ಗದವರು ಆ ವ್ಯಕ್ತಿಯ ಅಂಗಾಂಗಳನ್ನು ದಾನ ಮಾಡಿ ಅನೇಕರಿಗೆ ಜೀವದಾನ ಮಾಡಿ ಸತ್ತ ನಂತರವೂ ಬದುಕಬಹುದು. ಈ ಬಗ್ಗೆ ವಿದ್ಯಾರ್ಥಿಗಳು ಚಿಂತನೆ ನಡೆಸಿ ನಿರ್ಧಾರ ಕೈಗೊಳ್ಳಬೇಕು.

-- ಡಾ.ಮೋಹನ್ ಕುಮಾರ್. 16ಕೆಕೆಡಿಯು1.

ಕಡೂರಿನ ಸರ್ಕಾರಿ ಪ್ತಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಯುವ ಘಟಕ ಮತ್ತು ಆಂತರಿಕ ಗುಣಮಟ್ಟ ಭರವಸೆ ಘಟಕದಿಂದ ಆಯೋಜಿಸಿದ್ದ ಎರಡು ದಿನಗಳ ಆರೋಗ್ಯ ಜಾಗೃತಿ ಮತ್ತು ತಪಾಸಣಾ ಶಿಬಿರವನ್ನು ಜಿಲ್ಲಾ ಸರ್ಜನ್ ಡಾ ಮೋಹನ್ ಕುಮಾರ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''