ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮತದಾನ ಜಾಗೃತಿ ಕುರಿತು ವಿವಿಧ ಹಾಡು ಮತ್ತು ಕಿರುನಾಟಕದ ಮೂಲಕ ಮತದಾನ ಜಾಗೃತಿ ಮೂಡಿಸಿದರು. ಗಂಗಾಧರ ಮತ್ತು ಭಾಗ್ಯಾ ಅವರು ವಿದ್ಯಾರ್ಥಿಗಳ ಅನಿಸಿಕೆ ವ್ಯಕ್ತಪಡಿಸಿದರು.
ಸುಸ್ಥಿರ ಅಭಿವೃದ್ಧಿಗೆ ಮತದಾನ ಮುಖ್ಯ ಎಲ್ಲರೂ ಕೂಡಿ ಒಗ್ಗಟ್ಟಿನಿಂದ ಮತದಾನ ಮಾಡಬೇಕು, ಆಗ ಮಾತ್ರ ನಮ್ಮ ದೇಶ ಅಭಿವೃದ್ಧಿಯಾಗುವುದು, ಮತದಾನದ ಮಹತ್ವ ಮತ್ತು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಎನ್.ಎಸ್.ಎಸ್ ಘಟಕದ ಕಾರ್ಯಾಧ್ಯಕ್ಷ ಡಾ.ಸಿದ್ದಪ್ಪ ಭೂಮಣ್ಣವರ ವಿವರಿಸಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ವೆಂಕಟೇಶ ರೊಡ್ಡನ್ನವರ, ಗಂಗಾಧರ, ಗೀತಾ ಮತ್ತು ಹೆರೋಡೋಟಸ್ ಕ್ಲಬ್ ಕಾರ್ಯದರ್ಶಿಗಳಾದ ಪೂಜಾ ಮತ್ತು ಯುವರಾಜ್ ವೇದಿಕೆ ಮೇಲೆ ಉಪಸ್ಥಿತರಿದ್ದರು.ಶಿವಲಿಂಗ ಮುತ್ತೂರ ಸ್ವಾಗತಿಸಿದರು, ಹನುಮಂತ ನಿರೂಪಿಸಿದರು. ನರಸನಗೌಡ ವಂದಿಸಿದರು. ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.