ಅಹಿಂಸೆ, ಸಮಾನತೆಯಿಂದ ಸಶಕ್ತ ಸಮಾಜ ನಿರ್ಮಾಣ ಸಾಧ್ಯ

KannadaprabhaNewsNetwork |  
Published : Apr 03, 2026, 02:00 AM IST
೩೧ಕೆಎಲ್‌ಆರ್-೫ಕೋಲಾರದ ಜಿಪಂ ಸಭಾಂಗಣದಲ್ಲಿ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದ ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ರಾಜಮನೆತನದಲ್ಲಿ ಜನಿಸಿದರೂ, ಜನಸಾಮಾನ್ಯರ ಕಷ್ಟಗಳನ್ನು ಕಂಡು ಮನನೊಂದ ಅವರು ಎಲ್ಲವನ್ನೂ ತ್ಯಜಿಸಿ ತಪಸ್ಸಿನ ಮೂಲಕ ಜ್ಞಾನೋದಯ ಪಡೆದು ಮಹಾವೀರರಾದರು.

ಕನ್ನಡಪ್ರಭ ವಾರ್ತೆ ಕೋಲಾರಜಗತ್ತಿಗೆ ಶಾಂತಿ ಮತ್ತು ಅಹಿಂಸೆಯ ಪಾಠ ಬೋಧಿಸಿದ ಭಗವಾನ್ ಮಹಾವೀರರ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದ್ದು, ನಾವು ಅಹಿಂಸೆ ಮತ್ತು ಸಮಾನತೆಯ ಹಾದಿಯಲ್ಲಿ ಸಾಗುವುದರಿಂದ ಮಾತ್ರ ಪ್ರಬಲ ಸಮಾಜ ಕಟ್ಟಲು ಸಾಧ್ಯ ಎಂದು ಜಿಪಂ ಸಿಇಒ ಡಾ. ಪ್ರವೀಣ್ ಪಿ.ಬಾಗೇವಾಡಿ ತಿಳಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಹಾವೀರರ ಬದುಕೇ ಒಂದು ಆದರ್ಶವರ್ಧಮಾನ ಮಹಾವೀರರ ಜೀವನದ ಕುರಿತು ಮಾತನಾಡಿದ ಅವರು, ರಾಜಮನೆತನದಲ್ಲಿ ಜನಿಸಿದರೂ, ಜನಸಾಮಾನ್ಯರ ಕಷ್ಟಗಳನ್ನು ಕಂಡು ಮನನೊಂದ ಅವರು ಎಲ್ಲವನ್ನೂ ತ್ಯಜಿಸಿ ತಪಸ್ಸಿನ ಮೂಲಕ ಜ್ಞಾನೋದಯ ಪಡೆದು ಮಹಾವೀರರಾದರು. ಜೈನ ಧರ್ಮದ ೨೪ನೇ ಹಾಗೂ ಕೊನೆಯ ತೀಥಂಕರರಾಗಿ ಅವರು ಅಹಿಂಸೆ, ಸತ್ಯ ಮತ್ತು ಕದಿಯದಿರುವಂತಹ ಉನ್ನತ ತತ್ವಗಳನ್ನು ಬೋಧಿಸಿದರು.ಮನುಷ್ಯ ತನ್ನೊಳಗಿನ ದೌರ್ಬಲ್ಯಗಳನ್ನು ಗೆಲ್ಲುವುದೇ ನಿಜವಾದ ವಿಜಯ. ಅಂತಹ ವಿಜೇತನನ್ನು ’ಜಿನ’ ಎಂದು ಕರೆಯಲಾಗುತ್ತದೆ, ಇದರಿಂದಲೇ ಜೈನ ಧರ್ಮ ಎಂಬ ಹೆಸರು ಬಂದಿದೆ ಎಂದರು.ಇಂದಿನ ಕಾಲಕ್ಕೆ ಅಹಿಂಸೆಯ ಅಗತ್ಯ:ಇಂದು ನಾವು ಚಲನಚಿತ್ರಗಳಲ್ಲೂ ಹಿಂಸೆಯನ್ನೇ ಹೆಚ್ಚು ಇಷ್ಟಪಡುವ ಮನಸ್ಥಿತಿ ಬೆಳೆಸಿಕೊಂಡಿದ್ದೇವೆ. ಆದರೆ, ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಅಹಿಂಸೆ ಮತ್ತು ಸಮಾನತೆ ಅತ್ಯಗತ್ಯ. ಮಹಾವೀರರು, ಬುದ್ಧ, ಬಸವಣ್ಣ, ಗಾಂಧೀಜಿ ಹಾಗೂ ಅಂಬೇಡ್ಕರ್ ಅವರಂತಹ ಮಹಾನ್ ಪುರು?ರು ಭಾರತದ ಇತಿಹಾಸವನ್ನು ಇಂತಹ ಉದಾತ್ತ ತತ್ವಗಳ ಮೂಲಕವೇ ರೂಪಿಸಿದ್ದಾರೆ ಎಂದರು.ಧರ್ಮಗಳ ಸಾರ ಮತ್ತು ಏಕತೆ:ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಬೌದ್ಧ, ಜೈನ, ಹಿಂದೂ, ಸಿಖ್ ಹೀಗೆ ಎಲ್ಲಾ ಧರ್ಮಗಳ ಸಾರವೂ ಮನುಕುಲದ ಒಳಿತನ್ನೇ ಬಯಸುತ್ತವೆ. ಈ ಎಲ್ಲಾ ಧರ್ಮಗಳ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಅನ್ಯೋನ್ಯವಾಗಿ ಬಾಳುವುದೇ ನಾವು ಆ ಮಹಾನ್ ಪುರುಷರಿಗೆ ನೀಡುವ ನಿಜವಾದ ಗೌರವ ಎಂದು ಅವರು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ರವಿಚಂದ್ರ, ಸಹಾಯಕ ಯೋಜನಾಧಿಕಾರಿ ವೆಂಕಟಾಚಲಪತಿ, ಮುಖ್ಯ ಲೆಕ್ಕಾಧಿಕಾರಿ ರಘುನಾಥ ರೆಡ್ಡಿ, ಯೋಜನಾ ನಿರ್ದೇಶಕ ಮಂಜುನಾಥ ಸ್ವಾಮಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು-ಕುಲಪತಿ ಪಾಟೀಲ್‌
ಮಹಿಳೆಯರು ಪುರುಷರಿಗೆ ಸಮಾನವಾಗಿ ಹೆಜ್ಜೆ ಹಾಕುತ್ತಿರುವುದು ಪ್ರಗತಿಯ ಸೂಚಕ