ಕೈವಾರ ತಾತಯ್ಯ ಕುರಿತ ಅಧ್ಯಯನ ಪೀಠ ಸ್ಥಾಪಿಸಲಿ

KannadaprabhaNewsNetwork |  
Published : Mar 15, 2025, 01:02 AM IST
೧೪ಕೆಎಲ್‌ಆರ್-೫ಕೋಲಾರದ ನಗರದ ಟೇಕಲ್ ಕ್ರಾಸ್‌ನ ಶ್ರೀ ಯೋಗಿನಾರೇಯೇಣ ಯತೀಂದ್ರರ ಜಯಂತಿ ಪ್ರಯುಕ್ತ ವಿವಿಧ ಕಡೆಗಳಿಂದ  ಮೆರವಣಿಗೆಯ ಟ್ರಾಕ್ಟರ್‌ಗೆ ಚಾಲನೆ ಮಾಡುವ ಮೂಲಕ ಮಾಜಿ ಸಂಸದ ಎಸ್.ಮುನಿಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಶ್ರೀ ಕೈವಾರ ತಾತಯ್ಯ ರಚಿಸಿರುವ ಕಾಲಜ್ಞಾನದಂತೆ ಜಗತ್ತಿನ ಭವಿಷ್ಯ ನಡೆಯುತ್ತಿರುವುದು ವಿಸ್ಮಯಕಾರಿಯಾಗಿದ್ದರೂ ಅವರ ದಿವ್ಯಜ್ಞಾನ ಶಕ್ತಿಯು ಸರ್ವರಿಗೂ ಆದರ್ಶವಾಗಿದೆ, ತಾತಯ್ಯ ರಚಿಸಿರುವ ಕೀರ್ತನೆಗಳು ತತ್ವಪದಗಳಲ್ಲಿನ ಸಂದೇಶಗಳನ್ನು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೋಲಾರಸದ್ಗುರು ಶ್ರೀ ಕೈವಾರ ಯೋಗಿನಾರೇಯೇಣ ಯತೀಂದ್ರರ ಕುರಿತು ಸಂಶೋಧನೆಗಳ ಮೂಲಕ ಮುಂದಿನ ಪೀಳಿಗೆಗೆ ಅರಿವುಂಟು ಮಾಡಲು ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಸಂಸದ ಎಂ.ಮಲ್ಲೇಶ್ ಆಗ್ರಹಿಸಿದರು.ನಗರದ ಟೇಕಲ್ ಕ್ರಾಸ್‌ನ ಶ್ರೀ ಯೋಗಿನಾರೇಯೇಣ ಯತೀಂದ್ರರ ವೃತ್ತದ ಕೈವಾರ ತಾತಯ್ಯರ ಪುತ್ಥಳಿಕೆಗೆ ಪುಷ್ಪ ನಮನ ಸಲ್ಲಿಸಿದ ಅವರು, ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ನಿಜವಾಗುತ್ತಿರುವ ಕಾಲಜ್ಞಾನ

ಶ್ರೀ ಕೈವಾರ ತಾತಯ್ಯ ರಚಿಸಿರುವ ಕಾಲಜ್ಞಾನದಂತೆ ಜಗತ್ತಿನ ಭವಿಷ್ಯ ನಡೆಯುತ್ತಿರುವುದು ವಿಸ್ಮಯಕಾರಿಯಾಗಿದ್ದರೂ ಅವರ ದಿವ್ಯಜ್ಞಾನ ಶಕ್ತಿಯು ಸರ್ವರಿಗೂ ಆದರ್ಶವಾಗಿದೆ, ತಾತಯ್ಯ ರಚಿಸಿರುವ ಕೀರ್ತನೆಗಳು ತತ್ವಪದಗಳಲ್ಲಿನ ಸಂದೇಶಗಳನ್ನು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದರು.ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಕೈವಾರ ಕ್ಷೇತ್ರವನ್ನು ಹೊಂದಿರುವಂತ ಕೋಲಾರ ಜಿಲ್ಲೆಯಲ್ಲಿ ನಾವೆಲ್ಲಾ ಜನಿಸಿರುವುದು ಪುಣ್ಯ, ನಾವುಗಳು ತಾತಯ್ಯ ಸಂಚರಿಸಿದ ಕ್ಷೇತ್ರದಲ್ಲಿರುವುದು ಅದೃಷ್ಟಕರವಾಗಿದೆ, ಕೈವಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರೆ ಸಾಕು ನಿಮ್ಮ ಪಾಪಗಳೆಲ್ಲಾ ಕಳೆದು ಹೋಗಿ ಪುಣ್ಯ ಲಭಿಸುತ್ತದೆ ಎಂದು ತಿಳಿಸಿದರು.ಟೇಕಲ್‌ ರಸ್ತೆ ತಾತಯ್ಯ ರಸ್ತೆಯಾಗಲಿ

ಕೈವಾರ ತಾತನಯ್ಯರ ಪುತ್ಥಳಿಗೆ ಇರುವ ಟೇಕಲ್ ರಸ್ತೆ ಎಂಬುವುದನ್ನು ಮರೆತು ಎಲ್ಲರೂ ಕೈವಾರ ತಾತನಯ್ಯರ ರಸ್ತೆಯೆಂದು ಬಳಬೇಕು ರಸ್ತೆಯಲ್ಲಿನ ಅಂಗಡಿಗಳಲ್ಲೂ ಕೈವಾರ ತಾತಾಯ್ಯನವರ ರಸ್ತೆ ಎಂದು ಫಲಕಗಳಲ್ಲಿ ಬರೆಸಬೇಕು. ಬಲಿಜ ಸಮುದಾಯದವರನ್ನು ೨ಎಗೆ ಸೇರ್ಪಡೆ ಮಾಡಿರುವುದು ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಮತ್ತು ಬೊಮ್ಮಾಯಿರ ಆಡಳಿತದಲ್ಲಿ ಸಮುದಾಯದ ನಾಯಕ ಪಿ.ಸಿ.ಮೋಹನ್, ಮನೋಹರ್, ಎಂ.ಆರ್.ಸೀತಾರಾಮ್ ಮುಂತಾದವರು ಓ.ಬಿ.ಸಿ. ಕಮಿಷನ್ ಜಾರಿಗೆ ತಂದಿದ್ದು ಪ್ರಧಾನಿ ಮೋದಿಜೀ ಎಂದರು.

ಕೈವಾರ ತಾತಯ್ಯರ ಅಧ್ಯಯನ ಪೀಠ, ಬಲಿಜ ಜನಾಂಗದ ಅಭಿವೃದ್ದಿ ನಿಗಮ ರಚಿಸಿ ಅನುದಾನ ಬಿಡುಗಡೆ ಮಾಡಬೇಕು, ಕೈವಾರ ತಾತಯ್ಯರ ಸಮುದಾಯ ಭವನಗಳು ಜಿಲ್ಲೆಗೊಂದು ನಿರ್ಮಿಸಬೇಕು, ಪ್ರತಿ ಗ್ರಾಮಗಳಲ್ಲೂ ತಾತಯ್ಯರ ಭಜನ ಮಂದಿರಗಳನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು. ಅಧ್ಯಯನ ಪೀಠ ಸ್ಥಾಪಿಸಲಿ

ಅಂತರಗಂಗೆ ಮೇಲೆ ಸರ್ಕಾರದ ಜಾಗ ಬೇಕಾದಷ್ಟು ಇದ್ದು ಅಧ್ಯಯನ ಪೀಠಕ್ಕೆ ೧೦ ಎಕರೆ ಜಾಗವನ್ನು ಮಂಜೂರು ಮಾಡಲು ಸರ್ಕಾರವನ್ನು ಒತ್ತಾಯಿಸಬೇಕು. ಮುಂದಿನ ದಿನಗಳಲ್ಲಿ ಯುವ ಮುಖಂಡ ವಿ.ರಘು (ಚಿಟ್ಟಿ)ರನ್ನು ಕೋಲಾರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಲು ನೀವು ಆಡಳಿತ ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದರು.

ಜೆ.ಡಿ.ಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್ ಮಾತನಾಡಿ, ಕಾಲಜ್ಞಾನಿಯ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳುವ ಮೂಲಕ ಜೀವನವನ್ನು ಆದರ್ಶಮಯವಾಗಿಸಿ ಕೊಳ್ಳುವಂತಾಗಬೇಕು. ಬಲಿಜ ಸಮುದಾಯದ ಎಲ್ಲಾ ಸಂಘಟನೆಗಳು ಒಂದೇ ವೇದಿಕೆಗೆ ಬಂದಾಗ ಮಾತ್ರ ಯಾವುದೇ ಸಾಧನೆಗಳು ಮಾಡಲು ಸಾಧ್ಯ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಮುಂದುವರೆದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ನುಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುರೇಶ್‌ಕುಮಾರ್, ಜಿಲ್ಲಾ ಅಧ್ಯಕ್ಷ ಕೆ.ಎನ್.ರವೀಂದ್ರ ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಬೆಂಗಳೂರಿನ ಸಮುದಾಯದ ಯುವ ಮುಖಂಡರಾದ ಮಂಜುನಾಥ್, ನರಸಭೆ ಮಾಜಿ ಅಧ್ಯಕ್ಷ ವಿ.ರಘು(ಚಿಟ್ಟಿ), ನಗರಸಭೆ ಉಪಾಧ್ಯಕ್ಷೆ ಸಂಗೀತಾ ಜಗದೀಶ್, ನಗರಸಭೆ ಸದಸ್ಯ ಪ್ರವೀಣ್ ಗೌಡ ಮತ್ತಿತರರು ಇದ್ದರು.

ತಾತಯ್ಯ ಭಾವಚಿತ್ರ ಮೆರವಣಿಗೆ

ವೇದಿಕೆ ಕಾರ್ಯಕ್ರಮದ ನಂತರ ವಿವಿಧ ಕಡೆಗಳಿಂದ ಅಗಮಿಸಿದ ಪಲ್ಲಕ್ಕಿಗಳಿಗೆ ಜಾನಪದ ಕಲಾತಂಡಗಳ ಮೆರವಣಿಗೆಗೆ ಗಣ್ಯರಿಂದ ಚಾಲನೆ ನೀಡಿದರು, ಮೆರವಣಿಗೆಯಲ್ಲಿ ಸಂಸದ ಮಲ್ಲೇಶ್, ಮಾಜಿ ಸಂಸದ ಎಸ್.ಮುನಿಸ್ವಾಮಿ, ಜೆ.ಡಿ.ಎಸ್.ಮುಖಂಡ ಶ್ರೀನಾಥ್ ಮುಂತಾದವರು ಕುಣಿದು ಕುಪ್ಪಳಿಸಿದರು.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ