ವಿಕಸಿತ ಭಾರತ ಗುರಿ ತಲುಪಲು ಪೂರಕವಾದ ಬಜೆಟ್-ಸಂಸದ ಬೊಮ್ಮಾಯಿ

KannadaprabhaNewsNetwork |  
Published : Feb 02, 2025, 01:00 AM IST
(ಫೋಟೋ-ಬಸವರಾಜ ಬೊಮ್ಮಾಯಿ) | Kannada Prabha

ಸಾರಾಂಶ

ಕೇಂದ್ರದ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಸರ್ಪ್ರೈಸ್‌ ಗಿಫ್ಟ್ ಕೊಟ್ಟಿದ್ದು, ಇದರಿಂದ ಮಧ್ಯಮ ವರ್ಗದವರ ಉಳಿತಾಯ ಹೆಚ್ಚಲಿದೆ. ಇದೊಂದು ಆರ್ಥಿಕ ಮತ್ತು ಸಾಮಾಜಿಕ ವಲಯದಲ್ಲಿ ಸಮತೋಲನ ಕಾಯ್ದುಕೊಂಡಿರುವ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಹಾವೇರಿ: ಕೇಂದ್ರದ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಸರ್ಪ್ರೈಸ್‌ ಗಿಫ್ಟ್ ಕೊಟ್ಟಿದ್ದು, ಇದರಿಂದ ಮಧ್ಯಮ ವರ್ಗದವರ ಉಳಿತಾಯ ಹೆಚ್ಚಲಿದೆ. ಇದೊಂದು ಆರ್ಥಿಕ ಮತ್ತು ಸಾಮಾಜಿಕ ವಲಯದಲ್ಲಿ ಸಮತೋಲನ ಕಾಯ್ದುಕೊಂಡಿರುವ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.ಕೇಂದ್ರದ ಬಜೆಟ್ ಮಂಡನೆ ಬಳಿಕ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಇದೊಂದು ದೂರದೃಷ್ಟಿಯ ವಿಕಸಿತ ಭಾರತ 2047ರ ಅಡಿಗೆ ತೆಗೆದುಕೊಂಡು ಹೋಗುವ ಅಭಿವೃದ್ಧಿ ಪರವಾಗಿರುವ ಬಜೆಟ್. ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗೆ ಸಮತೋಲನ ತೆಗೆದುಕೊಂಡು ಹೋಗುವ ಬಜೆಟ್. ಆತ್ಮನಿರ್ಭರ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಕನಸಿಗೆ ಪೂರಕವಾದ ಬಜೆಟ್ ಆಗಿದೆ ಎಂದು ಹೇಳಿದರು.ಮಧ್ಯಮವರ್ಗದ ಜನರ ನಿರೀಕ್ಷೆಗಳಿಗೆ ಬೂಸ್ಟ್ ನೀಡಿದೆ. ಮಧ್ಯಮ ವರ್ಗದ ಉಳಿತಾಯ ಹೆಚ್ಚಿಸಿದೆ. ಇದೊಂದು ಮಧ್ಯಮ ವರ್ಗದವರಿಗೆ ಸರ್ಪರೈಸ್ ಗಿಫ್ಟ್. ಎಲ್ಲರೂ ₹ 10ಲಕ್ಷ ತೆರಿಗೆ ವಿನಾಯಿತಿ ನಿರೀಕ್ಷೆ ಮಾಡಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ₹12 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಿ ಸರ್ಪರೈಸ್ ಗಿಫ್ಟ್ ನೀಡಿದ್ದಾರೆ ಎಂದರು.ಅಭಿವೃದ್ಧಿಯಲ್ಲಿ ಆರ್ಥಿಕ ಹಾಗೂ ಸಾಮಾಜಿಕ ವಲಯದಲ್ಲಿ ಸಮತೋಲನ ಕಾಯ್ದುಕೊಳ್ಳಲಾಗಿದೆ. ಬಡವರು, ರೈತರು, ಮಹಿಳೆಯರು, ಯುವಕರು, ಎಸ್ಸಿ, ಎಸ್ಟಿ ಸಮುದಾಯಗಳಿಗೆ ಆದ್ಯತೆ ನೀಡಲಾಗಿದೆ. ದುಡಿಯುವ ಕೈಗಳಿಗೆ ವಿಫುಲವಾದ ಅವಕಾಶ ಕೊಟ್ಟಿರುವ ಬಜೆಟ್. ತನ್ನದೇ ತಾಂತ್ರಿಕತೆಗೆ ಸಂಶೋಧನೆಗೆ ವಿಶೇಷವಾಗಿ ಕೃಷಿಯನ್ನು ಆತ್ಮನಿರ್ಭರ ಮಾಡುವ ಬಜೆಟ್. ಯೂರಿಯಾ ಗೊಬ್ಬರ, ಬೀಜ, ಉತ್ಪಾದನೆಯಲ್ಲಿ ನಾವು ಸಂಪೂರ್ಣವಾಗಿ ಆತ್ಮನಿರ್ಭರವಾಗಲು ಅವಕಾಶ ನೀಡಲಾಗಿದೆ. ಹಳ್ಳಿಗಾಡಿನಲ್ಲಿ ಸ್ವಯಂ ಉದ್ಯೋಗವಕಾಶ, ಹಳ್ಳಿಗಳಿಂದ ಶಹರಕ್ಕೆ ಹೋಗುವುದನ್ನು ತಡೆಯಲು ಕ್ರಮಕೈಗೊಳ್ಳಲಾಗಿದೆ. ರೈಲ್ವೆ, ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಬಂಡವಾಳ ಹರಿದು ಬರುತ್ತಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಆರೋಗ್ಯ ವಲಯದಲ್ಲಿ ಕ್ಯಾನ್ಸರ್ ನಿಯಂತಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು.ರಾಜ್ಯಗಳಿಗೆ 1.5 ಲಕ್ಷ ಕೋಟಿ ರು., 50 ವರ್ಷಗಳವರೆಗೆ ಬಡ್ಡಿ ರಹಿತ ಸಾಲ ಘೋಷಿಸಲಾಗಿದ್ದು, ಇದರಿಂದ ಕರ್ನಾಟಕಕ್ಕೂ 7ರಿಂದ 8 ಸಾವಿರ ಕೋಟಿ ರು. ಸಾಲ ದೊರೆಯುವ ಸಾಧ್ಯತೆ ಇದೆ. ಆದ್ದರಿಂದ 2025-26ರ ಹೊತ್ತಿಗೆ ಶೇ. 7ರಿಂದ 8 ರ ವರೆಗೆ ಜಿಡಿಪಿ ಅಭಿವೃದ್ಧಿ ನಿರೀಕ್ಷೆ ಮಾಡಬಹುದು. ತೆರಿಗೆಯಲ್ಲಿ ಬಹಳ ಸರಳೀಕರಣ ಮಾಡಲಾಗಿದೆ. ಕಸ್ಟಮ್ಸ್‌ನಲ್ಲಿ ಸರಳೀಕರಣ ಮಾಡಲಾಗಿದೆ. ವಿಶೇಷವಾಗಿರುವ ಕ್ಯಾನ್ಸರ್, ಎಲೆಕ್ಟ್ರಾನಿಕ್ಸ್, ಮೆಡಿಕಲ್ ಸೈನ್ಸ್, ನವ ತಂತಜ್ಞಾನಕ್ಕೆ ಬಹಳಷ್ಟು ಒತ್ತು ಕೊಟ್ಟಿರುವ ಬಜೆಟ್ ಇದಾಗಿದೆ ಎಂದು ಬಣ್ಣಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುದ್ರಣ ಸಂಸ್ಥೆಗಳ ಕಡೆಗಣನೆ: ಸಿ.ಆರ್.ಜನಾರ್ದನ್‌ ಅಸಮಾಧಾನ
ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿಗೆ ಚಿದಂಬರ ಬೈಕಂಪಾಡಿ ಆಯ್ಕೆ