ಕನ್ನಡಪ್ರಭ ವಾರ್ತೆ ಮಾಲೂರು
ಸಮಸಮಾಜ ನಿರ್ಮಾಣ ಗುರಿ
ದೇಶವು ಆನೇಕ ಜಾತಿ, ಭಾಷೆ, ಪದ್ಧತಿಗಳನ್ನು ಒಳಗೊಂಡಿದೆ. ಅಂಬೇಡ್ಕರ್ ಅವರು ಸಮ ಸಮಾಜ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಜೀವನ ಇಡೀ ಶ್ರಮಿಸಿದರು. ಸಾವಿರಾರು ವರ್ಷಗಳ ನೋವು ಅಸಮಾನತೆ ಹೋಗಲಾಡಿಸಲು ಅಂಬೇಡ್ಕರ್ ಹೋರಾಡಿದರು. ಬುದ್ಧ-ಬಸವ-ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಆಲೋಚನೆಗಳನ್ನು ಪ್ರತಿಯೊಬ್ಬರು ಅರ್ಥಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ದೇಶದಲ್ಲಿ 6 ಸಾವಿರ ಜಾತಿ, 220 ಭಾಷೆಗಳಿರುವ ಪರಂಪರೆ ಹೊಂದಿರುವ ನಾವು ಸಮಾಜ ಸುಧಾರಣೆಗಾಗಿ ಸಮಾನತೆ ಸಮಾಜಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅರಿವು ಭಾರತದ ಪ್ರಯತ್ನ ಉತ್ತಮವಾಗಿದೆ. ಇದು ನಿರಂತರವಾಗಿ ನಡೆಯುತ್ತಿರಲಿ ಎಂದರು.
ಎಸ್ಪಿ ನಿಖಿಲ್, ತಹಸೀಲ್ದಾರ್ ರೂಪ, ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ, ಅರಿವು ಶಿವಪ್ಪ, ಸಂಪಂಗೆರೆ ಮುನಿರಾಜು, ಮುಖಂಡ ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಅಬ್ಬಣಿ ಶಿವಪ್ಪ, ಸಿಪಿಐ ವಸಂತ್ ಕುಮಾರ್, ಬೆಡಶೆಟ್ಟಿಹಳ್ಳಿ ರಮೇಶ್, ರೈತಸಂಘದ ತಿಪ್ಪಸಂದ್ರ ಶ್ರೀನಿವಾಸ್, ಸಾಹಿತಿ ಮಂಜು ಕನ್ನಿಕಾ, ಪಂಚಾಯ್ತಿ ಅಧಿಕಾರಿ ಸುಮತಿ, ವಿಜಯ ಕುಮಾರ್ ಇನ್ನಿತರರು ಇದ್ದರು.ಮಾಲೂರು ತಾಲೂಕಿನ ಅರಳೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾನತೆಗಾಗಿ ಸಹಭೋಜನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮಾತನಾಡಿದರು.