ಗದಗ: ಸಂಗೀತ ಕೇವಲ ಮನರಂಜನೆಗೆ ಮಾತ್ರವಲ್ಲ, ನಮ್ಮ ಸಂಸ್ಕೃತಿಯ ಸಂಕೇತ. ಸಂಗೀತ ಮಾನಸಿಕ ನೆಮ್ಮದಿಗೆ ಕಾರಣ ಮಾತ್ರವಲ್ಲದೆ, ಭಗವಂತನ ಒಲುಮೆಗೆ ಕಾರಣಾಗುವ ಮಾಧ್ಯಮವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಮಹಿಳಾ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರೀತಿ ಹೊನ್ನಗುಡಿ ಹೇಳಿದರು.
ಈ ವೇಳೆ ಸುಕ್ರುಸಾಬ ಮುಲ್ಲಾ ಹಾರ್ಮೋನಿಯಂ ಸೋಲೋ, ಸಂಜಯಕುಮಾರ ಅರ್ಕಸಾಲಿ ವಯೋಲಿನ್ ಸೋಲೋ, ನಾಗೇಂದ್ರ ಅಕ್ಕಸಾಲಿ ತಬಲಾ ಸೋಲೋ, ಕುಮಾರ ಮಠ ಹಿಂದೂಸ್ತಾನಿ ಗಾಯನ, ಕೃತಿಕಾ ಶರಣಯ್ಯ ಹಿಡ್ಕಿಮಠ ವಚನ ಗಾಯನ ಪ್ರಸ್ತುತಪಡಿಸಿ ರಂಜಿಸಿದರು. ಕಲಾವಿದರನ್ನು ಸನ್ಮಾನಿಸಲಾಯಿತು. ಕಲಾ ವಿಕಾಸ ಪರಿಷತ್ ವತಿಯಿಂದ ಪುಸ್ತಕ ದಾಸೋಹ ಯೋಜನೆಯಡಿ ಯುವಕರಿಗೆ ಉಚಿತ ಪುಸ್ತಕ ವಿತರಿಸಲಾಯಿತು.
ವನಜಾಕ್ಷಿ ಎಸ್. ತೋಟಗಂಟಿಮಠ, ಪಂ. ಫಕೀರೇಶ್ವರ ಶಾಸ್ತ್ರಿ ಹಿರೇಮಠ, ಡಾ. ಸಂತೋಷ್ ತೋಟಗಂಟಿಮಠ, ವಿಜಯಕುಮಾರ ಹಿರೇಮಠ, ಅನಿತಾ ತೋಟಗಂಟಿಮಠ, ಸ್ನೇಹಾ ಹಿರೇಮಠ ಇದ್ದರು. ಪಂ. ಸಿ.ಕೆ.ಎಚ್. ಶಾಸ್ತ್ರೀ ಕಡಣಿ ಸ್ವಾಗತಿಸಿದರು. ಕುಮಾರ ಹಿರೇಮಠ ವಂದಿಸಿದರು.ಉತ್ತಮ ನಿರ್ಧಾರವೇ ಉಜ್ವಲ ಭವಿಷ್ಯಕ್ಕೆ ಅಡಿಪಾಯರೋಣ: ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಆರೋಗ್ಯದ ದೃಷ್ಟಿಯಿಂದ ತಂಬಾಕು ಮುಕ್ತ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಉತ್ತಮ ನಿರ್ಧಾರವೇ ಉಜ್ವಲ ಭವಿಷ್ಯಕ್ಕೆ ಅಡಿಪಾಯ ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ತಿಳಿಸಿದರು.ತಾಲೂಕಿನ ಅಬ್ಬಿಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಐಇಸಿ ವಿಭಾಗ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ನಡೆದ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ವಿಷಯ ಕುರಿತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿವರ್ಷ ವಿಶ್ವಾದ್ಯಂತ ಲಕ್ಷಾನುಗಟ್ಟಲೆ ಜನರು ತಂಬಾಕು ಉತ್ಪನ್ನಗಳ ನೇರ ಮತ್ತು ಪರೋಕ್ಷ ಬಳಕೆಯಿಂದ ಮೃತಪಡುತ್ತಿದ್ದಾರೆ. ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುತ್ತ ಈ ಮರಣಾಂತಿಕ ಚಟವನ್ನು ತಡೆಗಟ್ಟಲು ನಿರಂತರ ಜಾಗೃತಿ ಅಗತ್ಯ ಈ ಮಹತ್ಕಾರ್ಯದಲ್ಲಿ ವಿದ್ಯಾರ್ಥಿಗಳೆಲ್ಲರೂ ಕೈಜೋಡಿಸಬೇಕೆಂದರು.