ಚಂದಗಾಲು ಗ್ರಾಮಕ್ಕೆ ತಹಸೀಲ್ದಾರ್, ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

KannadaprabhaNewsNetwork |  
Published : Nov 05, 2024, 12:37 AM IST
4ಕೆಎಂಎನ್ ಡಿ24 | Kannada Prabha

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದ ಸರ್ಕಾರಿ ಶಾಲೆಗೆ ಸೇರಿದ ಸರ್ವೇ ನಂ.215 ರಲ್ಲಿರುವ 30 ಗುಂಟೆ ಜಮೀನನ್ನು ಪಹಣಿಯಲ್ಲಿ ಖಬರ್ ಸ್ಥಾನಕ್ಕೆ ಸೇಪರ್ಡೆಯಿಂದ ಗ್ರಾಮಸ್ಥರು ಹಾಗೂ ಶಾಲಾ ಆಡಳಿತ ಮಂಡಳಿ ಆತಂಕಕ್ಕೆ ಒಳಗಾಗಿರುವ ಮಾಹಿತಿ ಮೇರೆಗೆ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಹಾಗೂ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಚಂದಗಾಲು ಗ್ರಾಮದ ಸರ್ಕಾರಿ ಶಾಲೆಗೆ ಸೇರಿದ ಸರ್ವೇ ನಂ.215 ರಲ್ಲಿರುವ 30 ಗುಂಟೆ ಜಮೀನನ್ನು ಪಹಣಿಯಲ್ಲಿ ಖಬರ್ ಸ್ಥಾನಕ್ಕೆ ಸೇಪರ್ಡೆಯಿಂದ ಗ್ರಾಮಸ್ಥರು ಹಾಗೂ ಶಾಲಾ ಆಡಳಿತ ಮಂಡಳಿ ಆತಂಕಕ್ಕೆ ಒಳಗಾಗಿರುವ ಮಾಹಿತಿ ಮೇರೆಗೆ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಹಾಗೂ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದರು.

ಶಾಲೆಗೆ ಭೇಟಿ ನೀಡಿದ ತಹಸೀಲ್ದಾರ್, ಕಂದಾಯ ಅಧಿಕಾರಿ ರೇವಣ್ಣ ಗ್ರಾಮ ಲೆಕ್ಕಿಗ ನಬಿ ಇತರರು ಸೇರಿ ಗ್ರಾಮದ ನಕ್ಷೆ, ಶಾಲೆ ಆರಂಭ ದಿನ ಸೇರಿದಂತೆ ಸರ್ಕಾರದ ದಾಖಲೆಗಳನ್ನು ಪರಿಶೀಸಿದರು. ಗ್ರಾಮಸ್ಥರು ಹಾಗೂ ಶಾಲಾಭಿವೃದ್ಧಿ ಸಮಿತಿರೊಂದಿಗೆ ಹಲವು ಬಾರಿ ಚರ್ಚೆ ನಡೆಸಿದರು.

ಶಾಲಾ ದಾಖಲೆಗಳು ಪರಿಶೀಲನೆ ನಡೆಸಿದ್ದು, ಪಹಣಿ ಕಲಂ ನಂ 9ರಲ್ಲಿ ಖಬರಸ್ಥಾನ ವಕ್ಫ್ ಆಸ್ತಿ ಎಂದು ಇದೆ. ನಂತರ ಕಲಂ 12ರಲ್ಲಿ ಪ್ರಾಥಮಿಕ ಶಾಲೆ ಎಂದು ನಮೂದಾಗಿದೆ. 2014-15 ಭಾಗದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ಶಾಲೆ ದಾಖಲೆಯೊಂದಿಗೆ ವರದಿ ಮಾಡಿ ಮೇಲಾಧಿಕಾರಿಗಳ ಗಮನಕ್ಕೆ ಪ್ರಸ್ತಾಪನೆಗೆ ಕಳುಹಿಸಿ ಅವರ ಗಮನಕ್ಕೆ ತಂದು ಖಬರಸ್ಥಾನ ಇರುವುದನ್ನು ತೆಗೆಸಲಾಗುತ್ತದೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ಮುಂದಿನ ಆದೇಶದಲ್ಲಿ ಶಾಲಾ ಹೆಸರಿನ ಪಹಣಿಯಲ್ಲಿ ಶಾಲೆ ಎಂದು ನಮೂದಾಗಿ ಬರುತ್ತದೆ. ಅಲ್ಲಿವರೆಗೂ ತಾಳ್ಮೆಯಿಂದ ಇರಲು ಮನವಿ ಮಾಡಿದರು.

ಈ ವೇಳೆ ಕರವೇ ಅಧ್ಯಕ್ಷ ಚಂದಗಾಲು ಶಂಕರ್, ಮುಖ್ಯ ಶಿಕ್ಷಕಿ ಭಾರತಿ, ಶಾಲಾ ಆಡಳಿತಮಂಡಳಿ ಉಪಾಧ್ಯಕ್ಷ ಸಿದ್ದರಾಜು, ಸದಸ್ಯರ ಶೈಲಜಾ, ಚಂದ್ರಿಕಾ, ಶ್ರೀನಿವಾಸು, ಗಾ.ಪಂ ಸದಸ್ಯ ರಮೇಶ್, ಯಜಮಾನ್ ಶ್ರೀನಿವಾಸ್, ಶಿವಕುಮಾರ್, ರಾಮಚಂದ್ರ ಸೇರಿದಂತೆ ಇತರರು ಇದ್ದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ