ಅಗಲಿದ ಲೀಲಮ್ಮನಿಗೆ ಅಶ್ರುತರ್ಪಣ

KannadaprabhaNewsNetwork |  
Published : Dec 10, 2023, 01:30 AM IST
ಪೋಟೋ 1 : ನೆಲಮಂಗಲ ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಟಿ ಲೀಲಾವತಿ ಅವರ  ಪ್ರಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಟ್ಟಿರುವುದು | Kannada Prabha

ಸಾರಾಂಶ

ದಾಬಸ್‌ಪೇಟೆ: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಕಾಯಿಲೆಗಳಿಂದ ಡಿ.8ರಂದು ಸಂಜೆ 5.40ರಲ್ಲಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಲೀಲಾವತಿ ಅವರ ಪಾರ್ಥಿವ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ದಾಬಸ್‌ಪೇಟೆ: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಕಾಯಿಲೆಗಳಿಂದ ಡಿ.8ರಂದು ಸಂಜೆ 5.40ರಲ್ಲಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಲೀಲಾವತಿ ಅವರ ಪಾರ್ಥಿವ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಸಾರ್ವಜನಿಕರ ದರ್ಶನ:

ನೆಲಮಂಗಲ ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶನಿವಾರ ಮುಂಜಾನೆ 5.45 ಗಂಟೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ 10.15ಕ್ಕೆ ರವೀಂದ್ರ ಕಲಾಕ್ಷೇತ್ರಕ್ಕೆ ತರಲಾಯಿತು.

5ರಿಂದಲೇ ಕಾದಿದ್ದ ಅಭಿಮಾನಿಗಳು:

ಲೀಲಾವತಿ ಅವರ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟಿದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಹಾಗೂ ಸಾರ್ವಜನಿಕರು ಮುಂಜಾನೆ 5 ಗಂಟೆಯಿಂದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಕಾದು ಕುಳಿತ್ತಿದ್ದರು..

ವಿದ್ಯಾರ್ಥಿಗಳಿಂದ ಅಂತಿಮ ದರ್ಶನ:

ಶಾಲಾ ಕಾಲೇಜು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗುವ ಮುನ್ನವೇ ಅಂಬೇಡ್ಕರ್ ಕ್ರೀಡಾಂಗಣಕ್ಕೆ ತೆರಳಿ ಅಂತಿಮ ದರ್ಶನ ಪಡೆದ ಬಳಿಕ ಶಾಲಾ ಕಾಲೇಜುಗಳಿಗೆ ತೆರಳಿದರು.

ಲೀಲಮ್ಮನನ್ನು ನೋಡಲು ಬಿಡಿ:

ಲೀಲಾವತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸಾರ್ವಜನಿಕರಿಗೆ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಲಾಗಿತ್ತು. ನೆಲಮಂಗಲ ತಾಲೂಕಿನ ತಿಪ್ಪಗೊಂಡನಹಳ್ಳಿಯ ವೃದ್ಧೆಯೊಬ್ಬರು ಸರತಿ ಸಾಲಿನಲ್ಲಿ ನಿಂತು ಬರುತ್ತಿದ್ದಾಗ ಪೊಲೀಸರು ಬೇಗ ತೆರಳುವಂತೆ ತಿಳಿಸಿದಾಗ ನಾನು ಲೀಲಮ್ಮನವರ ಅಭಿಮಾನಿ ಅವರನ್ನು ನೋಡಲು ಬಿಡಿ ಎಂದು ಕೆಲ ನಿಮಿಷ ಅಲ್ಲಿಯೇ ನಿಂತು ಭಾವುಕರಾದರು.

ನಾಯಿ ಅಂತಿಮ ದರ್ಶನ:

ಅಂಬೇಡ್ಕರ್ ಕ್ರೀಡಾಂಗಣಕ್ಕೆ ಬ್ಲಾಕಿಯನ್ನು ಕರೆತರುತ್ತಿದ್ದಂತೆ ಪಾರ್ಥಿವ ಶರೀರದ ಮುಂದೆಯೇ ಕುಳಿತುಕೊಂಡಿತ್ತು. ನಟ ವಿನೋದ್ ರಾಜ್ ಬ್ಲಾಕಿಗೆ ಲೀಲಾವತಿ ಅವರ ಪಾರ್ಥಿವ ಶರೀರವನ್ನು ತೋರಿಸಿದರು.ಪೋಟೋ 1 :

ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಟಿ ಲೀಲಾವತಿ ಅವರ ಸಾರ್ವಜನಿಕರ ದರ್ಶನಕ್ಕಿಟ್ಟಿದ್ದ ಲೀಲಾವತಿ ಅವರ ಪಾರ್ಥಿವ ಶರೀರ. ಪೋಟೋ 2 :

ಲೀಲಾವತಿ ಅಂತಿಮ ದರ್ಶನ ಪಡೆಯಲು ಸರದಿಯಲ್ಲಿ ನಿಂತಿರುವ ಸಾರ್ವಜನಿಕರು.ಪೋಟೋ 3 :

ಲೀಲಾವತಿ ಅವರ ಮಗ ವಿನೋದ್ ರಾಜ್ ಅವರ ಪತ್ನಿ ಹಾಗೂ ಪುತ್ರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!