ಜಗತ್ತಿನಲ್ಲಿ ಜನರು ಮಾಡಬಾರದ ಪಾಪಗಳನ್ನು ಮಾಡಿದ ಮೇಲೂ ತಾವು ಅವುಗಳಿಂದ ಮುಕ್ತರಾಗಬೇಕು ನಮ್ಮ ಪಾಪ ಕಳೆದುಕೊಳ್ಳಬೇಕೆಂದು ಗುಡಿ ಗುಂಡಾರ, ತೀರ್ಥ ಸ್ನಾನ ಎಂದು ಅಲೆಯುತ್ತಾರೆ. ಆದರೆ ದಕ್ಷಿಣ ರಾಜಸ್ಥಾನದಲ್ಲಿ ವಾಗಡ್ ಹರಿದ್ವಾರ ಎಂದು ಪ್ರಸಿದ್ಧವಾಗಿರುವ ಗೋತಮೇಶ್ವರ ಮಹಾದೇವ ಮಂದಿರದಲ್ಲಿ ಇರುವ ಕುಂಡವೊಂದರಲ್ಲಿ ಸ್ನಾನ ಮಾಡಿ 12 ರು. ಕೊಟ್ಟರೆ ‘ಪಾಪ ಮುಕ್ತಿ’ ಎಂಬ ಪ್ರಮಾಣ ಪತ್ರ ನೀಡುತ್ತಾರೆ. ಅಂದರೆ ಈ ವ್ಯಕ್ತಿಯು ತನ್ನ ಜೀವನದ ಎಲ್ಲಾ ಹಿಂದಿನ ಪಾಪಗಳಿಂದ ಮುಕ್ತನಾದ ಎಂದು ಅರ್ಥವಂತೆ.