ವಿದ್ಯಾಭ್ಯಾಸ ವೇಳೆ ಕಲಿಕೆ ತುಡಿತ, ಉತ್ಸಾಹ ಸ್ವಾಭಿಮಾನದ ಬದುಕಿಗೆ ಸಹಕಾರಿ: ಡಾ. ಕೃಷ್ಣೇಗೌಡ

KannadaprabhaNewsNetwork |  
Published : Sep 24, 2026, 01:30 AM IST
ಹೊಳೆನರಸೀಪುರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸಾಂಸ್ಕøತಿಕ, ಕ್ರೀಡೆ, ಎನ್‍ಎಸ್‍ಎಸ್, ರೇಂಜರ್ಸ್ ಮತ್ತು ಯುವ ರೆಡ್‍ಕ್ರಾಸ್ ಘಟಕಗಳ ಉದ್ಘಾಟನೆಯನ್ನು ಕಾಲೇಜು ಶಿಕ್ಷಣ ಇಲಾಖೆಯ ನಿ. ಜಂಟಿ ನಿರ್ದೇಶಕ ಡಾ. ಕೆ.ಟಿ.ಕೃಷ್ಣೇಗೌಡ ನೆರವೇರಿಸಿದರು. ಡಾ. ಗುರುರಾಜ್, ಕೆ.ಎಸ್.ಚಂದ್ರಕಲಾ, ಡಾ. ಕುಸುಮ ಎಂ., ಲಕ್ಷ್ಮಣ್, ಮಂಜುರಾಜ್ ಇದ್ದರು. | Kannada Prabha

ಸಾರಾಂಶ

ಸಮಯ ಮೀಸಲಿಟ್ಟು, ಗುರಿ ಯಶಸ್ವಿಯಾಗಿ ತಲುಪಿದಾಗ ಮಾತ್ರ ತಂದೆ, ತಾಯಿ, ಹಿತೈಷಿಗಳು, ಕಲಿತ ಶಾಲೆ ಹಾಗೂ ಕಲಿಸಿದ ಗುರುಗಳು ನಿಮ್ಮ ಬಗ್ಗೆ ಹೆಮ್ಮೆ ಪಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಾಂಸ್ಕೃತಿಕ, ಕ್ರೀಡೆ, ಎನ್‍ಎಸ್‍ಎಸ್, ರೇಂಜರ್ಸ್, ಯುವ ರೆಡ್‍ಕ್ರಾಸ್ ಘಟಕಗಳ ಉದ್ಘಾಟನೆಯಲ್ಲಿ

ಕನ್ನಡಪ್ರಭ ವಾರ್ತೆಹೊಳೆನರಸೀಪುರ

ಮಹಿಳೆ ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಸೊಸೆಯಾಗಿ, ಅತ್ತೆಯಾಗಿ ಕುಟುಂಬದಲ್ಲಿ ತನ್ನ ಸ್ಥಾನಕ್ಕೆ ತಕ್ಕಂತೆ ನಿರ್ವಹಿಸುವ ಜವಾಬ್ದಾರಿಗಳು ಅನನ್ಯ, ಅಭಿನಂದನೀಯ. ಈ ಎಲ್ಲಾ ಕರ್ತವ್ಯ ನಿರ್ವಹಿಸಲು ಅಗತ್ಯ ಜ್ಞಾನ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಿಂದ ಪಡೆಯಬಹುದು. ನಿಮ್ಮ ಕಲಿಕೆಯ ತುಡಿತ ಮತ್ತು ನೀವು ತೋರುವ ಉತ್ಸಾಹ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ್ತ ಸ್ಥಾನ ಹಾಗೂ ಸ್ವಾಭಿಮಾನದ ಬದುಕಿಗೆ ಸಹಕಾರಿಯಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿ. ಜಂಟಿ ನಿರ್ದೇಶಕರಾದ ಡಾ. ಕೆ.ಟಿ.ಕೃಷ್ಣೇಗೌಡ ತಿಳಿಸಿದರು.ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 2026-27ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‍ಎಸ್‍ಎಸ್, ರೇಂಜರ್ಸ್ ಮತ್ತು ಯುವ ರೆಡ್‍ಕ್ರಾಸ್ ಘಟಕಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕಲಿಕೆ ಸಮಯದಲ್ಲಿ ನೀವು ಶಿಕ್ಷಣ, ಕಲಿಕೆ ಹಾಗೂ ನಿಮ್ಮ ಗುರಿ ಸಕಾರಗೊಳಿಸಲು ಹೆಚ್ಚು

ಸಮಯ ಮೀಸಲಿಟ್ಟು, ಗುರಿ ಯಶಸ್ವಿಯಾಗಿ ತಲುಪಿದಾಗ ಮಾತ್ರ ತಂದೆ, ತಾಯಿ, ಹಿತೈಷಿಗಳು, ಕಲಿತ ಶಾಲೆ ಹಾಗೂ ಕಲಿಸಿದ ಗುರುಗಳು ನಿಮ್ಮ ಬಗ್ಗೆ ಹೆಮ್ಮೆ ಪಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಗೌರವಯುತವಾದ ಬದುಕು ಹಾಗೂ ಕಲಿಕೆಗೆ ಅಗತ್ಯವಾದ ಸಲಹೆ, ಸೂಚನೆಗಳು ಹಾಗೂ ಹಲವಾರು ವಿಷಯಗಳ ಕುರಿತು ಮಾರ್ಗದರ್ಶನ ನೀಡಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಗುರುರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಾಗೂ ಐಕ್ಯುಎಸಿ ಸಂಚಾಲಕರಾದ ಡಾ. ಮಂಜುರಾಜು ಪ್ರಾಸ್ತಾವಿಕ ನುಡಿಗಳ್ನಾಡಿದರು. ಕಾಲೇಜಿನ ಜಾಲತಾಣವನ್ನು (ವೆಬ್‍ಸೈಟ್) ಲೋಕಾರ್ಪಣೆ

ಮಾಡಲಾಯಿತು.

ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಮಹದೇವಪ್ಪ ಎಸ್.ಎನ್., ಪ್ರೇರಣಾ ರೇಂಜರ್ಸ್ ಸಂಚಾಲಕರಾದ ವಿದ್ಯಾ ಕೆ., ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ. ಕುಸುಮ ಎಂ., ಯುವ ರೆಡ್ ಕ್ರಾಸ್ ಸಂಚಾಲಕರಾದ ಚಂದ್ರಕಲಾ ಕೆ.ಎಸ್., ಅಧ್ಯಾಪಕ ಕಾರ್ಯದರ್ಶಿ ಡಾ. ಜಗದೀಶ್ ಆರ್.ಡಿ., ಪತ್ರಾಂಕಿತ ವ್ಯವಸ್ಥಾಪಕರ ನಾಗೇಶ್ ನಾಯಕ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಮಾಜಿ ಪುರಸಭಾಧ್ಯಕ್ಷ ಲಕ್ಷ್ಮಣ್, ಅಣ್ಣೇಗೌಡ, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಂಚಜನ್ಯ ಗಣಪತಿ ಅದ್ಧೂರಿ ವಿಸರ್ಜನಾ ಮೆರವಣಿಗೆ
ಪ್ರತಾಪ ಸಿಂಹರಿಂದ ದಲಿತ ಸಮಿತಿಗೆ ಅಪಮಾನ: ದಸಂಸ ಜಿಲ್ಲಾ ಸಂಚಾಲಕ ಅರೇಹಳ್ಳಿ ನಿಂಗರಾಜು ಆಕ್ಷೇಪ