ಸದ್ಯದಲ್ಲಿಯೇ ಶಿರಸಿಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಆರಂಭ

KannadaprabhaNewsNetwork |  
Published : Jan 05, 2025, 01:30 AM IST
ಪೊಲೀಸ್‌ | Kannada Prabha

ಸಾರಾಂಶ

ಶಿರಸಿ ಜನತೆಯ ಹಲವು ವರ್ಷದ ಬೇಡಿಕೆಯಾಗಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಟ್ರಾಫಿಕ್ ಪೊಲೀಸ್ ಠಾಣೆ ಸದ್ಯವೇ ಆರಂಭಗೊಳ್ಳಲಿದ್ದು, ಠಾಣೆಗೆ ಅಗತ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜನೆ ಮಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಶಿರಸಿ: ಶಿರಸಿ ಜನತೆಯ ಹಲವು ವರ್ಷದ ಬೇಡಿಕೆಯಾಗಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಟ್ರಾಫಿಕ್ ಪೊಲೀಸ್ ಠಾಣೆ ಸದ್ಯವೇ ಆರಂಭಗೊಳ್ಳಲಿದ್ದು, ಠಾಣೆಗೆ ಅಗತ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜನೆ ಮಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.

ನಗರದ ಹಳೆ ಟಿವಿ ಸ್ಟೇಶನ್ ಕಟ್ಟಡದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಆರಂಭಿಸಲು ನಿರ್ಧರಿಸಿ, ಶಾಸಕ ಭೀಮಣ್ಣ ನಾಯ್ಕ, ಮಂಗಳೂರು ವಲಯದ ಐಜಿಪಿ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಇನ್ನಿತರರು ಕಟ್ಟಡ ಪರಿಶೀಲಿಸಿ, ಸೂಕ್ತವಾದ ಜಾಗ ಎಂದು ಗುರುತಿಸಿದ್ದರು. ಆದರೆ ಈ ಜಾಗವು ಅಬಕಾರಿ ಇಲಾಖೆಯ ಮಾಲೀಕತ್ವದಲ್ಲಿರುವ ಕಾರಣ ಅವರಿಂದ ಒಪ್ಪಿಗೆ ಪಡೆಯಲು ವಿಳಂಬವಾಯಿತು. ಶಾಸಕ ಭೀಮಣ್ಣ ನಾಯ್ಕ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರು ವಿಶೇಷ ಪ್ರಯತ್ನ ವಹಿಸಿ, ಅಬಕಾರಿ ಇಲಾಖೆಯಿಂದ ಹಳೆ ಟಿವಿ ಸ್ಟೇಶನ್ ಜಾಗವನ್ನು ಬಾಡಿಗೆ ಆಧಾರದಲ್ಲಿ ಪಡೆದು ಈ ತಿಂಗಳ ಅಂತ್ಯದೊಳಗಡೆ ಟ್ರಾಫಿಕ್ ಪೊಲೀಸ್ ಠಾಣೆ ಆರಂಭಗೊಳಿಸಲು ಸಿದ್ಧತೆ ನಡೆಸಿದ್ದಾರೆ.

ಅಧಿಕಾರಿ, ಸಿಬ್ಬಂದಿ ನಿಯೋಜನೆ: ಶಿರಸಿ ನಗರ ಠಾಣೆಯ ತನಿಖಾ ಪಿಎಸ್‌ಐ ಮಹಾಂತಪ್ಪ ಕುಂಬಾರ ಅವರನ್ನು ಟ್ರಾಫಿಕ್ ಠಾಣೆಯ ಪಿಎಸ್‌ಐ ಆಗಿ ಒಒಡಿ ಆದೇಶದ ಮೇಲೆ ನೇಮಕ ಮಾಡಲಾಗಿದೆ. ಎಎಸ್‌ಐಗಳಾಗಿ ಶಿರಸಿ ಹೊಸ ಮಾರುಕಟ್ಟೆಯ ಠಾಣೆ ಥಾಕು ಹೊಸಕಟ್ಟಾ, ಬನವಾಸಿ ಠಾಣೆಯ ಸಂತೋಷ ಸಿರ್ಸಿಕರ್, ಹೆಡ್ ಕಾನ್ಸಸ್ಟೇಬಲ್‌ಗಳಾಗಿ ದಾಂಡೇಲಿ ಗ್ರಾಮೀಣ ಠಾಣೆಯ ಚಂದ್ರಪ್ಪ ಕೊರವರ, ಕುಮಟಾ ಠಾಣೆಯ ಪ್ರಶಾಂತ ಪಾವಸ್ಕರ, ದಾಂಡೇಲಿ ನಗರ ಠಾಣೆಯ ಜಿಮ್ಮು ಶಿಂಧೆ, ಸಿದ್ದಾಪುರ ಠಾಣೆಯ ದೇವರಾಜ ನಾಯ್ಕ, ಸೆನ್ ಠಾಣೆಯ ಚಂದ್ರಶೇಖರ ನಾಯ್ಕ, ಮಲ್ಲಾಪುರ ಠಾಣೆಯ ಜೊಸೆಫ್‌ರಾಜ ಸಾವೇರಿ ಥೋಮಸ್, ಮಹಿಳಾ ಹೆಡ್ ಕಾನ್ಸ್‌ಸ್ಟೇಬಲ್‌ಗಳಾಗಿ ಯಲ್ಲಾಪುರ ಠಾಣೆಯ ಸುಲೋಚನಾ ನಾಯ್ಕ, ದಾಂಡೇಲಿ ನಗರ ಠಾಣೆಯ ಪೂರ್ಣಿಮಾ ನಾಯ್ಕ, ಪೊಲೀಸ್ ಸಿಬ್ಬಂದಿ ರಾಮನಗರ ಠಾಣೆಯ ಕೋಟೆ ನಾಯ್ಕ ಕೆ., ಜೋಯ್ಡಾ ಠಾಣೆಯ ಮೀನಾಕ್ಷಿ ನಾರಾಯಣಪುರ, ಸಿದ್ದಾಪುರ ಠಾಣೆಯ ಶಾಂತಲಾ ನಾಯ್ಕ, ಯಲ್ಲಾಪುರ ಠಾಣೆಯ ಪರಶುರಾಮ ಕೆ., ಕಾರವಾರ ಗ್ರಾಮೀಣ ಠಾಣೆಯ ಶಿವನಿಂಗಯ್ಯ ಸ್ವಾಮಿ, ಕಾರವಾರ ಸಂಚಾರ ಠಾಣೆಯ ಬಸವರಾಜ ಕಂಬಳಿ, ಕದ್ರಾ ಠಾಣೆಯ ಮಹೇಶ ಸಾವಸಂಗಿ, ಕಾರವಾರ ಮಹಿಳಾ ಠಾಣೆಯ ಸಿದ್ದಾರೂಡ ರೊಟ್ಟಿಗವಾಡ, ದಿವ್ಯಾ ನಾಯ್ಕ, ಮುಕ್ತಾಬಾಯಿ ಸೂರ್ಯವಂಶಿ, ದಾಂಡೇಲಿ ಗ್ರಾಮೀಣ ಠಾಣೆಯ ಮಂಜುನಾಥ ಬಿ.ಎನ್., ಹಳಿಯಾಳ ಠಾಣೆಯ ಸಂತೋಷ ಉರ್ಮಿ, ಜೋಯಿಡಾ ಠಾಣೆಯ ದಯಾನಂದ ನಾಯ್ಕ, ಎನ್. ವೆಂಕಟೇಶ, ಕಾರವಾರ ನಗರ ಠಾಣೆಯ ನಾಗರಾಜ ಬಮ್ಮಿಗಟ್ಟಿ, ದಾಂಡೇಲಿ ನಗರ ಠಾಣೆಯ ಲಕ್ಷ್ಮೀ ನಾಯ್ಕ, ಕಾರವಾರ ಸಂಚಾರ ಠಾಣೆಯ ಮಂಜುನಾಥ ದ್ಯಾಮಣ್ಣನವರ್, ದಾಂಡೇಲಿ ಗ್ರಾಮೀಣ ಠಾಣೆಯ ರೂಪಾ ಗುನಗಾ, ಸಿದ್ದಾಪುರ ಠಾಣೆಯ ನಾಗರಾಜ ತಿಮ್ಮಾಪುರ, ಹಳಿಯಾಳ ಠಾಣೆಯ ಮಂಜುನಾಥ ಬಾಳಿ, ಭಟ್ಕಳ ನಗರ ಠಾಣೆಯ ಶಂಕರ ಚಲುವಾದಿ, ಗೋಕರ್ಣ ಠಾಣೆಯ ರ‍್ಯಾವಪ್ಪ ಬಂಕಾಪರ, ಕಾರವಾರ ಗ್ರಾಮೀಣ ಠಾಣೆಯ ಸುಲೀನ ಚನ್ನಪ್ಪ ಪಾಟೀಲ, ಚಿತ್ತಾಕುಲಾ ಠಾಣೆಯ ಗೋಣೆಬಸಪ್ಪ, ಭಟ್ಕಳ ನಗರ ಠಾಣೆಯ ರಾಘವೇಂದ್ರ ನಾಯ್ಕ, ಸೆನ್ ಅಪರಾಧ ಠಾಣೆಯ ಪ್ರಭಾಕರ ಹರಿಗೋಲ ಇವರನ್ನು ನೇಮಕ ಮಾಡಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಆದೇಶ ಹೊರಡಿಸಿದ್ದಾರೆ.

ಉದ್ಘಾಟನೆಗೆ ಸಿದ್ಧ: ಶಿರಸಿಗೆ ಮಂಜೂರಾಗಿರುವ ಟ್ರಾಫಿಕ್ ಪೊಲೀಸ್ ಠಾಣೆ ಉದ್ಘಾಟನೆಗೆ ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ಆಹ್ವಾನಿಸಲಾಗಿದೆ. ಆದರೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಶಿರಸಿಯ ಹಳೆ ಬಸ್ ನಿಲ್ದಾಣವು ಹೈಟೆಕ್ ನಿಲ್ದಾಣವಾಗಿ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ದಗೊಂಡಿದೆ. ಎರಡೂ ಕಾರ್ಯಕ್ರಮವನ್ನು ಒಟ್ಟಿಗೆ ನಿಗದಿಪಡಿಸಿ, ಗೃಹ ಸಚಿವರು ಹಾಗೂ ಸಾರಿಗೆ ಸಚಿವರ ಸಮ್ಮುಖದಲ್ಲಿ ಈ ತಿಂಗಳ ಅಂತ್ಯದೊಳಗಡೆ ಉದ್ಘಾಟನೆಗೊಂಡು ಆರಂಭಗೊಳ್ಳಲಿದೆ ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ