ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಏರ್ಪಡಿಸಿದ್ದ ಶಿಕ್ಷಕ ಎಸ್.ಸಿದ್ದೇಗೌಡ ಸಂಸ್ಮರಣೆಯಲ್ಲಿ ಮಾತನಾಡಿದ ಅವರು, ನಾನು ಇವರ ಶಿಷ್ಯ ಎಂಬ ಹೆಮ್ಮೆಇದೆ. ಬಡತನದ ಬೇಗೆಯಲ್ಲಿದ್ದ ನಾನು ಬೆಂಗಳೂರಿನಲ್ಲಿ ನೆಮ್ಮದಿ ಬದುಕು ಕಾಣಲು ಇವರ ಇಂಗ್ಲಿಷ್ ಕಲಿಕೆಯೇ ಬುನಾದಿ ಆಗಿದೆ ಎಂದರು.
30 ವರ್ಷಗಳ ಹಿಂದೆ ಪ್ರೌಢಶಾಲೆಯಲ್ಲಿ ಓದುವಾಗ ರಸ್ತೆಯಲ್ಲಿ ಮೇಷ್ಟ್ರು ಕಂಡರೆ ಗಲ್ಲಿಗೆ ನುಗ್ಗುತ್ತಿದೆ. ಬಿಡದೆ ಇವರು ಅಲ್ಲಿಯೇ ಗ್ರಾಮರ್ ಕೇಳುತ್ತಿದ್ದರು. ಉತ್ತರ ಹೇಳೊದನ್ನು ಕಲಿ ಎಂದು ಆತ್ಮಸ್ಥೈರ್ಯ ತುಂಬುತ್ತಿದ್ದರು. ಇವರ ಮೇಲೆ ಭಯ, ಭಕ್ತಿಎಲ್ಲವೂ ಇತ್ತು ಎಂದು ಹಳೆಯ ನೆನಪು ನೆನೆದರು.ನಾನಿಂದು ಬೆಂಗಳೂರಿನಂತಹ ನಗರದಲ್ಲಿ ಸ್ವಲ್ಪವಾದರೂ ಇಂಗ್ಲಿಷ್‌ನಲ್ಲಿ ಮಾತನಾಡಲು, ಹೋರಾಟಗಾರನಾಗಿ ಸೇವೆ ಸಲ್ಲಿಸಲು ನಮ್ಮ ಈ ಗುರುವಿನ ಆಶೀರ್ವಾದವೇ ಕಾರಣವಾಗಿದೆ. ಇವರಂತಹ ಸರಳ ಆದರ್ಶ ಗುರುಗಳು ಸಿಕ್ಕರೆ ಹಳ್ಳಿಯ ಮಕ್ಕಳು ನಗರದ ಮಕ್ಕಳನ್ನು ಮೀರಿಸಲಿದ್ದಾರೆ. ಇಂಗ್ಲಿಷ್‌ನಲ್ಲಿ ಫೇಲು ಎನ್ನುವ ಉದ್ಗಾರವೇ ಇರಲಾರದು ಎಂದರು.
ದೇವಸ್ಥಾನದ ಬಳಿ ಇದ್ದನಮ್ಮ ಮನೆಗೆ ಬರುತ್ತಿದ್ದರು.ಇಂಗ್ಲಿಷ್ ಪ್ರಶ್ನೆ ಕೇಳುತ್ತಿದ್ದರು. ನಮ್ಮ ಅಕ್ಕ ಪ್ರಶ್ನೆಗೆ ಉತ್ತರಿಸಿದರೆ ನಾನು ಹಾಡು ಹೇಳುತ್ತ ನುಣುಚಿಕೊಳ್ಳುತ್ತಿದೆ. ಬಿಡದೆ ಕಿವಿ ಹಿಂಡಿ ತಿದ್ದಿಪಾಠ ಹೇಳುತ್ತಿದ್ದರು ಎಂದು ಸ್ಮರಿಸಿದರು.
ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ತಮ್ಮ ಗಾಯನದ ಮೂಲಕ ಗುರು ನಮನವನ್ನು ಭಕ್ತಿಯಿಂದ ಸಮರ್ಪಿಸಿದರು.
ಈ ವೇಳೆ ಪ್ರಾಂಶುಪಾಲ ಎಂ.ಆರ್.ಸಹದೇವ್, ಎನ್‌ಸಿಸಿ ಯೋಜನಾಧಿಕಾರಿಎಸ್.ಎಂ. ಬಸವರಾಜು, ಕುಮಾರಸ್ವಾಮಿ, ಶಿಕ್ಷಕರಾದ ಬಿ.ಎನ್. ಪರಶಿವಮೂರ್ತಿ, ದೀಪಕ್, ಗಿರೀಶ್, ವೆಂಕಟರಮಣ ಹೆಗಡೆ, ಕೃಷ್ಣಪ್ಪ, ರಿಜ್ವಿ, ನಂದಿನಿ, ಚಂದ್ರೇಗೌಡ, ಕೆ.ವಿ. ನಾಗರತ್ನ ಮತ್ತಿತರರಿದ್ದರು.