A Unified Step by NGOs for the Comprehensive Development of the District
ಸಮನ್ವಯ ಸಭೆ
--
-ಶಿಕ್ಷಣ, ಯುವಜನ ಅಭಿವೃದ್ಧಿ, ಸಾಮಾಜಿಕ ಸಬಲೀಕರಣಕ್ಕೆ ಸಾಮೂಹಿಕ ಕಾರ್ಯತಂತ್ರ ರೂಪಿಸಲು ಚರ್ಚೆ
--
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ, ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸಂಘ-ಸಂಸ್ಥೆಗಳ ಸಭೆಯನ್ನು, ಎಪಿಡಿ (ಅಸೋಶಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಿಲಿಟಿ) ಸಂಸ್ಥೆಯ ವತಿಯಿಂದ ನಗರದ ಎನ್‌ವಿಎಂ ಹೋಟೆಲ್‌ನಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಭೆ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯ ಅಭಿವೃದ್ಧಿಗೆ ಸಂಘ-ಸಂಸ್ಥೆಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದು, ಸಾಮೂಹಿಕ ದೃಷ್ಟಿಕೋನ ರೂಪಿಸುವುದು ಹಾಗೂ ವಿವಿಧ ಅಭಿವೃದ್ದಿ ಕ್ಷೇತ್ರಗಳಲ್ಲಿ ಜಂಟಿ ಕಾರ್ಯಯೋಜನೆಗಳನ್ನು ಸಿದ್ಧಪಡಿಸುವ ಕುರಿತು ಚರ್ಚಿಸಲಾಯಿತು.
ಶಿಕ್ಷಣದ ಗುಣಮಟ್ಟ ಮತ್ತು ಕಲಿಕೆಗೆ ಆದ್ಯತೆ, ಮಕ್ಕಳಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಬೆಳೆಸುವುದು, ಶಿಕ್ಷಣದ ಗುಣಮಟ್ಟ ಸುಧಾರಿಸುವುದು ಹಾಗೂ ಮಕ್ಕಳ ಸಮಗ್ರ ಬೆಳವಣಿಗೆಗೆ ಅಗತ್ಯವಾದ ಜೀವನ ಕೌಶಲಗಳನ್ನು ಅಭಿವೃದ್ಧಿಪಡಿಸುವ ಕುರಿತು ವಿಚಾರ ವಿನಿಮಯ ನಡೆಯಿತು.
ಯುವಜನರ ಅಭಿವೃದ್ಧಿ, ಸಾಮಾಜಿಕ ಸಬಲೀಕರಣ, ಜೀವನೋಪಾಯದ ಅವಕಾಶಗಳ ವಿಸ್ತರಣೆ ಹಾಗೂ ಸಮುದಾಯದ ಜನರ ಜೀವನಮಟ್ಟ ಸುಧಾರಿಸುವಲ್ಲಿ ಸಂಘ-ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವನ್ನು ಒತ್ತಿಹೇಳಲಾಯಿತು.
‘ವಿಷನ್ ಫಾರ್ ಯಾದಗಿರಿ’ಗೆ ಒತ್ತು ಜಿಲ್ಲೆಯ ಅಭಿವೃದ್ಧಿಗೆ ದೀರ್ಘಕಾಲೀನ ದೃಷ್ಟಿಕೋನ ರೂಪಿಸುವುದು, ಸಂಘ-ಸಂಸ್ಥೆಗಳ ನಡುವಿನ ಸಹಯೋಗ ಹೆಚ್ಚಿಸುವುದು ಹಾಗೂ ಸಮಗ್ರ ಕಾರ್ಯಯೋಜನೆ ಸಿದ್ಧಪಡಿಸುವ ಕುರಿತು ಚರ್ಚಿಸಲಾಯಿತು.
ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಬದಲು ಸಾಮಾನ್ಯ ಗುರಿಗಳನ್ನು ಗುರುತಿಸಿಕೊಂಡು ಸಾಮೂಹಿಕವಾಗಿ ಕೆಲಸ ಮಾಡುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಕುರಿತು ವಿಚಾರ ವಿನಿಮಯ ನಡೆಯಿತು.
ಜಿಲ್ಲೆಯ ಶಿಕ್ಷಣ, ಯುವಜನ ಅಭಿವೃದ್ಧಿ, ಸಾಮಾಜಿಕ ಸಬಲೀಕರಣ ಮತ್ತು ಜೀವನೋಪಾಯ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಬದಲಾವಣೆ ತರಲು ಸಂಘ-ಸಂಸ್ಥೆಗಳ ಸಾಮೂಹಿಕ ಪ್ರಯತ್ನ ಹಾಗೂ ನಿರಂತರ ಸಹಯೋಗ ಅಗತ್ಯ ಎಂಬ ಆಶಯದೊಂದಿಗೆ ಸಭೆ ನಡೆಯಿತು.
ಈ ಸಭೆಯಲ್ಲಿ ಡಾನ್ ಬಾಸ್ಕೋ ಯಾದಗಿರಿ , ಕಲಿಕೆ ಟಾಟಾ ಟ್ರಸ್ಟ್ , ಮಿತ್ರ ಫಾರ್ ಚೇಂಜ್, ಕ್ವೆಸ್ಟ್ ಅಲಯನ್ಸ್, ಆಲದಮರ, ಎಪಿಡಿ, ಮಂಟರ್ ಸೋಶಿಯಲ್ ಸರ್ವಿಸ್ ಸೇರಿದಂತೆ 16ಕ್ಕೂ ಹೆಚ್ಚು ಸರ್ಕಾರೇತರ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಫೋಟೊ: 23ವೈಡಿಆರ್7
ಯಾದಗಿರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ, ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸಂಘ-ಸಂಸ್ಥೆಗಳ ಸಭೆಯನ್ನು, ಎಪಿಡಿ (ಅಸೋಶಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಿಲಿಟಿ) ಸಂಸ್ಥೆಯ ವತಿಯಿಂದ ನಗರದ ಎನ್‌ವಿಎಂ ಹೋಟೆಲ್‌ನಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಭೆ ಹಮ್ಮಿಕೊಳ್ಳಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.