ಶಿಕ್ಷಕರ ಕ್ಷೇತ್ರ ಚುನಾವಣೆ: ಜಿಲ್ಲೆಯಲ್ಲಿ ಶೇ.90.79 ರಷ್ಟು ಮತದಾನ

KannadaprabhaNewsNetwork |  
Published : Oct 24, 2026, 01:15 AM IST
ಕರ್ನಾಟಕ ಉತ್ತರ-ಪೂರ್ವ ಶಿಕ್ಷಕರ ಕ್ಷೇತ್ರದ ಚುನಾವಣೆ-2026 ಹಿನ್ನೆಲೆ, ಯಾದಗಿರಿಯ ತಹಸೀಲ್‌ ಕಾರ್ಯಾಲಯದಲ್ಲಿ ಮತಗಟ್ಟೆಯಲ್ಲಿ ಮತ ಚಲಾಯಿಸಲು ಸಾಲಿನಲ್ಲಿ ನಿಂತಿರುವ ಶಿಕ್ಷಕರ ವರ್ಗ. | Kannada Prabha

ಸಾರಾಂಶ

Teachers' Constituency Election: 90.79% Voter Turnout in the District

-ಕರ್ನಾಟಕ ಉತ್ತರ-ಪೂರ್ವ ಶಿಕ್ಷಕರ ಕ್ಷೇತ್ರದ ಚುನಾವಣೆ । ಶಾಂತಿಯುತ ಚುನಾವಣೆ: 2,259 ಮತದಾರರಲ್ಲಿ 2,051 ಹಕ್ಕು ಚಲಾವಣೆ

--

ಕನ್ನಡಪ್ರಭ ವಾರ್ತೆ ಯಾದಗಿರಿ

ಕರ್ನಾಟಕ ಉತ್ತರ-ಪೂರ್ವ ಶಿಕ್ಷಕರ ಕ್ಷೇತ್ರದ ಚುನಾವಣೆ 2026ರ ಮತದಾನವು ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದ ಮತದಾನ ಯಾದಗಿರಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ಹಾಗೂ ಉತ್ಸಾಹದಿಂದ ಜರುಗಿದೆ ಎಂದು ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ರಾಹುಲ್ ತುಕಾರಾಮ ಪಾಂಡ್ವೆ ಅವರು ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಒಟ್ಟು 2,259 ಮತದಾರರಿದ್ದು, ಇದರಲ್ಲಿ 1,548 ಪುರುಷ ಮತ್ತು 711 ಮಹಿಳಾ ಮತದಾರರು ಸೇರಿದ್ದಾರೆ. ಅಂತಿಮವಾಗಿ ಒಟ್ಟು 90.79% ರಷ್ಟು ಭರ್ಜರಿ ಮತದಾನ ದಾಖಲಾಗಿದೆ. ಪುರುಷರು ಶೇ. 92.64 ಹಾಗೂ ಮಹಿಳೆಯರು ಶೇ. 86.78 ರಷ್ಟು ಮತದಾನ ಮಾಡಿದ್ದಾರೆ.

ಶಹಾಪೂರ ತಹಸೀಲ್ದಾರ್‌ ಕಚೇರಿ ಕಟ್ಟಡ (ಮತಗಟ್ಟೆ 100)ದ ಒಟ್ಟು 631 ಮತದಾರರಲ್ಲಿ 561 ಮತಗಳು ಚಲಾವಣೆಯಾಗಿದ್ದು, ಶೇ. 88.91 ರಷ್ಟು ಮತದಾನವಾಗಿದೆ. ಶೋರಾಪೂರ ತಹಸೀಲ್ದಾರ್‌ ಕಚೇರಿ ಕಟ್ಟಡ (ಮತಗಟ್ಟೆ 101): ಒಟ್ಟು 436 ಮತದಾರರಲ್ಲಿ 406 ಮತಗಳು ಚಲಾವಣೆಯಾಗಿದ್ದು, ಶೇ. 93.12 ರಷ್ಟು ಮತದಾನ ದಾಖಲಾಗಿದೆ.

ಹುಣಸಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಮತಗಟ್ಟೆ 102): ಶೇ. 93.88 ರಷ್ಟು ಮತದಾನ (ಒಟ್ಟು 98 ರಲ್ಲಿ 92 ಮತಗಳು) ನಡೆದಿದೆ.

ಕೆಂಭಾವಿ ಸರ್ಕಾರಿ ಪದವಿ ಪೂರ್ವ ಕಾಲೇಜು (ಮತಗಟ್ಟೆ 103): ಶೇ. 92.79 ರಷ್ಟು ಮತದಾನ ದಾಖಲಾಗಿದೆ.ವಡಗೇರಾ ಸರಕಾರಿ ಪ್ರೌಢಶಾಲೆ (ಮತಗಟ್ಟೆ 104): ಶೇ. 86.00 ರಷ್ಟು ಮತದಾನವಾಗಿದೆ. ಕೋಡೆಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಮತಗಟ್ಟೆ 105): ಶೇ. 91.67 ರಷ್ಟು ಮತದಾನ ದಾಖಲಾಗಿದೆ.

ಯಾದಗಿರಿ ತಹಸೀಲ್ದಾರ್‌ ಕಚೇರಿ ಕಟ್ಟಡ (ಮತಗಟ್ಟೆ 106): ಒಟ್ಟು 573 ಮತದಾರರಲ್ಲಿ 518 ಮತಗಳು ಚಲಾವಣೆಯಾಗಿದ್ದು, ಶೇ. 90.40 ರಷ್ಟು ಮತದಾನವಾಗಿದೆ. ಗುರುಮಠಕಲ್ ತಹಸೀಲ್ದಾರ್‌ ಕಚೇರಿ ಕಟ್ಟಡ (ಮತಗಟ್ಟೆ 107): ಶೇ. 92.02 ರಷ್ಟು ಮತದಾನ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಎಸ್ಪಿ ಪೃಥ್ವಿಕ್‌ ಶಂಕರ್‌, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ, ಸಹಾಯಕ ಆಯಯಕ್ತ ಶ್ರೀಧರ್‌ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ವಿವಿಧೆಡೆ ಚುನಾವಣೆ ವ್ಯವಸ್ಥೆ ಪರಿಶೀಲನೆ ನಡೆಸಿದರು.

.....ಬಾಕ್ಸ್....

2,051 ಮತದಾರರಿಂದ ಹಕ್ಕು ಚಲಾವಣೆ

ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 2,259 ನೋಂದಾಯಿತ ಶಿಕ್ಷಕ ಮತದಾರರಿದ್ದು (1,548 ಪುರುಷರು ಮತ್ತು 711 ಮಹಿಳೆಯರು), ಮಧ್ಯಾಹ್ನ 4 ಗಂಟೆಯವರೆಗೆ 2,051 ಮತದಾರರು (1434 ಪುರುಷರು ಮತ್ತು 617 ಮಹಿಳೆಯರು) ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಪುರುಷರ ಮತದಾನ ಶೇ. 92.63 ಹಾಗೂ ಮಹಿಳೆಯರ ಮತದಾನ ಶೇ.86.77 ಆಗಿರುತ್ತದೆ. ಒಟ್ಟು ಶೇ.90.79ರಷ್ಟು ಮತದಾನವಾಗಿದೆ.

ಯಾದಗಿರಿಯಲ್ಲಿ ಶೇ.90.40 ಮತದಾನವಾಗಿದೆ. ತಹಸೀಲ್ದಾರ್‌ ಕಚೇರಿ ಕಟ್ಟಡದ ಮತಗಟ್ಟೆಯಲ್ಲಿನ ಒಟ್ಟು 573 ಮತದಾರಲ್ಲಿ (ಪುರುಷರು-353 ಹಾಗೂ ಮಹಿಳೆಯರು-220) 518 (ಪುರುಷರು-320 ಹಾಗೂ ಮಹಿಳೆಯರು-198) ಮತಗಳು ಚಲಾವಣೆಯಾಗಿವೆ.

ಶೇ.90.40 ರಷ್ಟು ಮತದಾನವಾಗಿದೆ.

ಶಹಾಪುರ ತಹಸೀಲ್ದಾರ್‌ ಕಚೇರಿ ಮತಗಟ್ಟೆಯಲ್ಲಿನ ಒಟ್ಟು 631 ಮತದಾರರಲ್ಲಿ (ಪುರುಷರು-410 ಹಾಗೂ ಮಹಿಳೆಯರು-221) 561 (ಪುರುಷರು-373 ಹಾಗೂ ಮಹಿಳೆಯರು-188) ಮತಗಳು ಚಲಾವಣೆಯಾಗಿವೆ. ಶೇ.88.91 ರಷ್ಟು ಮತದಾನವಾಗಿದೆ.

ಸುರಪುರದ ತಹಸೀಲ್ದಾರ್‌ ಕಚೇರಿ ಕಟ್ಟಡದ ಮತಗಟ್ಟೆಯಲ್ಲಿನ ಒಟ್ಟು 436 ಮತದಾರರಲ್ಲಿ (ಪುರುಷರು-306 ಹಾಗೂ ಮಹಿಳೆಯರು-130) 406 (ಪುರುಷರು-291 ಹಾಗೂ ಮಹಿಳೆಯರು-115) ಮತಗಳು ಚಲಾವಣೆಯಾಗಿವೆ. ಶೇ..93.12 ರಷ್ಟು ಮತದಾನವಾಗಿದೆ.

ಹುಣಸಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಶೇಕಡಾ 93.88 ರಷ್ಟು ಮತದಾನವಾಗಿದೆ. ಒಟ್ಟು 98 ಮತದಾರರಲ್ಲಿ (ಪುರುಷರು-82 ಹಾಗೂ ಮಹಿಳೆಯರು-16) 92 (ಪುರುಷರು-79 ಹಾಗೂ ಮಹಿಳೆಯರು-13) ಮತಗಳು ಚಲಾವಣೆಯಾಗಿವೆ.

ಕೆಂಭಾವಿಯ ಸರ್ಕಾರಿ ಜ್ಯೂನಿಯರ್ ಕಾಲೇಜು ಮತಗಟ್ಟೆಯಲ್ಲಿನ ಒಟ್ಟು 111 (95 ಪುರುಷರು, 16 ಮಹಿಳೆಯರು) ಮತದಾರರಲ್ಲಿ 103 (90 ಪುರುಷರು ಹಾಗೂ 13 ಮಹಿಳೆಯರ) ಮತಗಳು ಚಲಾವಣೆಯಾಗಿವೆ. ಇಲ್ಲಿ ಶೇ.92.79 ಮತದಾನವಾಗಿದೆ.

ವಡಗೇರಾದ ಸರ್ಕಾರಿ ಶಾಲೆಯ ಮತಗಟ್ಟೆಯ ಒಟ್ಟು 100 ಮತದಾರರಲ್ಲಿ (ಪುರುಷರು-76 ಹಾಗೂ ಮಹಿಳೆಯರು-24) 86 (ಪುರುಷರು-69 ಹಾಗೂ ಮಹಿಳೆಯರು-17) ಮತಗಳು ಚಲಾವಣೆಯಾಗಿವೆ. ಇಲ್ಲಿ ಶೇ.86 ರಷ್ಟು ಮತದಾನವಾಗಿದೆ.

ಕೊಡೇಕಲ್‌ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿನ ಒಟ್ಟು 72 ಮತದಾರರಲ್ಲಿ (59 ಪುರುಷರು, 13 ಮಹಿಳೆಯರು) 66 ಮತಗಳು (ಪುರುಷರು55, ಹಾಗೂ ಮಹಿಳೆಯರು 11) ಚಲಾವಣೆಯಾಗಿವೆ. ಇಲ್ಲಿ ಶೇ. 91.67 ರಷ್ಟು ಮತದಾನವಾಗಿದೆ.

ಗುರುಮಠಕಲ್‌ನ ಒಟ್ಟು 238 (ಪುರುಷರು-167, ಮಹಿಳೆಯರು-71) ಮತದಾರರಲ್ಲಿ 219 (ಪುರುಷರು-157, ಮಹಿಳೆಯರು-62) ಮತಗಳು ಚಲಾವಣೆಯಾಗಿವೆ. ಇಲ್ಲಿ ಶೇ.92.02 ಮತದಾನವಾಗಿದೆ.

-

ಪೋಟೊ

23ವೈಡಿಆರ್1ಎ : ಕರ್ನಾಟಕ ಉತ್ತರ-ಪೂರ್ವ ಶಿಕ್ಷಕರ ಕ್ಷೇತ್ರದ ಚುನಾವಣೆ-2026 ಹಿನ್ನೆಲೆ, ಯಾದಗಿರಿಯ ತಹಸೀಲ್ದಾರ್‌ ಕಾರ್ಯಾಲಯದ ಮತಗಟ್ಟೆಯಲ್ಲಿ ಮತ ಚಲಾಯಿಸಲು ಸಾಲಿನಲ್ಲಿ ನಿಂತಿರುವ ಶಿಕ್ಷಕರ ವರ್ಗ.

-

23ವೈಡಿಆರ್2 : ಕರ್ನಾಟಕ ಉತ್ತರ-ಪೂರ್ವ ಶಿಕ್ಷಕರ ಕ್ಷೇತ್ರದ ಚುನಾವಣೆ-2026 ಹಿನ್ನೆಲೆ, ಯಾದಗಿರಿಯ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಮತಗಟ್ಟೆಯಲ್ಲಿ ವ್ಯವಸ್ಥೆ ಪರಿಶೀಲಿಸಿದ ಜಿಲ್ಲಾಧಿಕಾರಿ ರಾಹುಲ್‌ ಪಾಂಡ್ವೆ, ಎಸ್ಪಿ ಪೃಥ್ವಿಕ್‌ ಶಂಕರ್ ಹಾಗೂ ಅಧಿಕಾರಿಗಳ ತಂಡ.

-

23ವೈಡಿಆರ್‌3 : ಕರ್ನಾಟಕ ಉತ್ತರ-ಪೂರ್ವ ಶಿಕ್ಷಕರ ಕ್ಷೇತ್ರದ ಚುನಾವಣೆ-2026 ಹಿನ್ನೆಲೆ, ಯಾದಗಿರಿಯ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಮತಗಟ್ಟೆಯಲ್ಲಿ ಮತದಾನದ ಹಕ್ಕು ಚಲಾಯಿಸಿದ ಶಿಕ್ಷಕರು.

-

23ವೈಡಿಆರ್4 : ಕರ್ನಾಟಕ ಉತ್ತರ-ಪೂರ್ವ ಶಿಕ್ಷಕರ ಕ್ಷೇತ್ರದ ಚುನಾವಣೆ-2026 ಹಿನ್ನೆಲೆ, ಯಾದಗಿರಿಯ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಮತಗಟ್ಟೆಯಲ್ಲಿ ಮತ ಚಲಾಯಿಸಲು ಸಾಲಿನಲ್ಲಿ ನಿಂತಿರುವ ಶಿಕ್ಷಕರ ವರ್ಗ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೆಲಮಂಗಲ ತಾಲೂಕಲ್ಲಿ ಶೇ. 98 ಶಾಂತಿಯುತ ಮತದಾನ
ಅರವಿಂದ್ ಲಿಮಿಟೆಡ್ ಅರಸೀಕೆರೆ ಘಟಕಕ್ಕೆ ಪ್ರಶಸ್ತಿ