ಚಳ್ಳಕೆರೆಯಲ್ಲಿ ಕಾಡುಗೊಲ್ಲರಿಂದ ವಿಶಿಷ್ಟ ನಾಗರ ಹಬ್ಬ

KannadaprabhaNewsNetwork |  
Published : Aug 04, 2025, 11:45 PM IST
ಪೋಟೋ೪ಸಿಎಲ್‌ಕೆ೩ ನಾಗರಪಂಚಮಿ ಆಚರಣೆ  ಚಿತ್ರ  | Kannada Prabha

ಸಾರಾಂಶ

ತಾಲೂಕಿನ ವಿಶಿಷ್ಟ ಬುಡಕಟ್ಟು ಆಚರಣೆಯಲ್ಲಿ ನಾಗರ ಪಂಚಮಿ ಹಬ್ಬವೂ ಒಂದು. ಈ ಹಬ್ಬವನ್ನು ಇಲ್ಲಿನ ಕಾಡುಗೊಲ್ಲ ಸಮುದಾಯ ವಿಶಿಷ್ಟ, ಸಂಪ್ರದಾಯಿಕವಾಗಿ ಆಚರಿಸುತ್ತ ಬಂದಿದ್ದಾರೆ.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನ ವಿಶಿಷ್ಟ ಬುಡಕಟ್ಟು ಆಚರಣೆಯಲ್ಲಿ ನಾಗರ ಪಂಚಮಿ ಹಬ್ಬವೂ ಒಂದು. ಈ ಹಬ್ಬವನ್ನು ಇಲ್ಲಿನ ಕಾಡುಗೊಲ್ಲ ಸಮುದಾಯ ವಿಶಿಷ್ಟ, ಸಂಪ್ರದಾಯಿಕವಾಗಿ ಆಚರಿಸುತ್ತ ಬಂದಿದ್ದಾರೆ.

ನಗರದ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿಯಲ್ಲಿ ವಾಸಿಸುವ ಕಾಡುಗೊಲ್ಲ ಸಮುದಾಯದ ಮಳ್ಳಿಗ ವಂಶಸ್ಥರು ಪ್ರತಿ ವರ್ಷ ಎರಡನೇ ಶ್ರಾವಣ ಸೋಮವಾರದಲ್ಲಿ ವಿಶೇಷವಾಗಿ ನಾಗರ ಪಂಚಮಿಯನ್ನು ಆಚರಣೆ ಮಾಡುತ್ತಾರೆ. ನಾಗರ ಕಲ್ಲು ಮತ್ತು ಹುತ್ತಗಳಿಗೆ ಹಾಲು ಎರೆಯುವ ಬದಲು ಅನ್ನ, ಹುಣಸೆಹುಳಿಯಿಂದ ತಯಾರು ಮಾಡಿದ ಸಾಂಬರನ್ನು ದೇವರಿಗೆ ನೈವೇದ್ಯ ಮಾಡುವುದು ವಿಶೇಷ.

ಶ್ರಾವಣದ ಎರಡನೇ ಸೋಮವಾರ ಮುಂಜಾನೆಯಿಂದಲೇ ಆಚರಣೆ ಪ್ರಾರಂಭ ಮಾಡುವ ಇವರು, ನಗರದಿಂದ ಸುಮಾರು 37 ಕಿ.ಮೀ ದೂರವಿರುವ ಪರುಶುರಾಮಪುರ ಹೋಬಳಿಯ ದೊಡ್ಡಚೆಲ್ಲೂರು ಕಾವಲಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಾರೆ. ಅಲ್ಲಿರುವ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸುವ ಪದ್ದತಿ ಇಂದಿಗೂ ನಡೆದು ಬಂದಿದೆ. ಸುಮಾರು 50ಕ್ಕೂ ಹೆಚ್ಚು ಕುಟುಂಬಂಸ್ಥರು ಏಕಕಾಲಕ್ಕೆ ಪೂಜೆ ಸಲ್ಲಿಸುತ್ತಾರೆ.

ಹರಕೆ ಹೊತ್ತವರು ಬೇಡಿಕೆ ಈಡೇರಿದ ನಂತರ ಬೆಳ್ಳಿ ಆಭರಣ, ಅನ್ನ ಸಂತರ್ಪಣೆ, ಮಕ್ಕಳ ಮುಡಿ ಮೂಲಕ ಹರಕೆ ತಿರಿಸುತ್ತಾರೆ. ಇತ್ತೀಚೆಗೆ ಶ್ರೀರಂಗಸ್ವಾಮಿ ಮತ್ತು ಯತ್ತಪ್ಪಸ್ವಾಮಿ ದೇವಾಲಯದಿಂದ ಹೊರಟು ಕಾವಲಿನಲ್ಲಿ ಪೂಜೆ ಸಲ್ಲಿಸಿ ರಾತ್ರಿ‌ ದಾಸಪ್ಪ ಪೂಜಾರಿಗಳು ದ್ಯಾವರಹಳ್ಳಿ ಬಳಿಯ ಭೂತಪ್ಪನ ಗುಡಿ ಬಳಿ ತಂಗಿದರು. ಮಂಗಳವಾರ ಮುಂಜಾನೆ ಹೊರಟು ದೊಡ್ಡರಿ ಬಳಿ ಎದುರು ಪರುವು ಮಾಡುತ್ತಾರೆ. ಇಲ್ಲಿ ಅನ್ನ ಮತ್ತು ಸೊಪ್ಪಿನ ಸಾಂಬರ್ ನೈವೇದ್ಯ ಮಾಡಿ ಸಂಜೆಗೆ ಮರಳಿ ಗೊಲ್ಲರಹಟ್ಟಿಗೆ ಆಗಮಿಸುತ್ತಾರೆ.

ಈ ವೇಳೆ ರಾಜಣ್ಣ, ರಂಗನಾಥ, ಮಂಜುನಾಥ, ವೀರಭದ್ರಪ್ಪ, ತಿಪ್ಪೇಸ್ವಾಮಿ, ವೀರೇಶ್ ಅಪ್ಪು, ಪೂಜಾರಿ ಸುರೇಶ, ದಾಸಪ್ಪರಾದ ರಂಗಸ್ವಾಮಿ, ತಿಪ್ಪೇಸ್ವಾಮಿ ನೂರಾರು ಭಕ್ತರು ಸೇರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ