ಕನ್ನಡಕ್ಕಾಗಿ ಎಲ್ಲ ಭೇದ ಮರೆತು ಒಗ್ಗಟ್ಟಿನ ಹೋರಾಟ ಅವಶ್ಯ

KannadaprabhaNewsNetwork |  
Published : Aug 29, 2026, 02:00 AM IST
ಜಮಖಂಡಿ ನಗರದಲ್ಲಿ ಚಲಪತಿ ಬಣದ ಕನ್ನಡ ರಕ್ಷಣಾ ವೇದಿಕೆಯ ತಾಲುಕು ಕಚೇರಿಯನ್ನು ಓಲೇಮಠದ ಆನಂದ ದೇವರು ಉದ್ಘಾಟಿಸಿದರು. ಪದಾಧಿಕಾರಿಗಳು ಸಾರ್ವಜನಿಕರು ಇದ್ದರು.  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿಕನ್ನಡ ಭಾಷೆ, ಕನ್ನಡದ ನೆಲ, ಜಲ, ಗಡಿ ಹಾಗೂ ಸಂಸ್ಕೃತಿಯ ರಕ್ಷಣೆಗೆ ಕನ್ನಡಿಗರು ಪಕ್ಷ, ಜಾತಿ ಮತ್ತು ಧರ್ಮದ ಭೇದ ಮರೆತು ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ ಎಂದು ಓಲೆಮಠದ ಆನಂದ ದೇವರು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಕನ್ನಡ ಭಾಷೆ, ಕನ್ನಡದ ನೆಲ, ಜಲ, ಗಡಿ ಹಾಗೂ ಸಂಸ್ಕೃತಿಯ ರಕ್ಷಣೆಗೆ ಕನ್ನಡಿಗರು ಪಕ್ಷ, ಜಾತಿ ಮತ್ತು ಧರ್ಮದ ಭೇದ ಮರೆತು ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ ಎಂದು ಓಲೆಮಠದ ಆನಂದ ದೇವರು ಕರೆ ನೀಡಿದರು.

ಶುಕ್ರವಾರ ನಗರದ ಕರ್ನಾಟಕ ರಕ್ಷಣಾ ವೇದಿಕೆ ಚಲಪತಿ ಬಣದ ತಾಲೂಕು ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಉಳಿಯಬೇಕು, ಬೆಳೆಯಬೇಕು ಎಂಬುದು ಕೇವಲ ಕನ್ನಡಪರ ಸಂಘಟನೆಗಳ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದರು. ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಉಂಟಾದಾಗ ಸಂಘಟನೆಗಳು ಮೌನವಾಗಿರದೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಮಸ್ಯೆಗಳನ್ನು ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ಅಗತ್ಯವಿದ್ದರೆ ಕಾನೂನುಬದ್ಧವಾಗಿ ಪರಿಣಾಮಕಾರಿ ಹೋರಾಟ ರೂಪಿಸಬೇಕು ಎಂದರು.

ಬಿಜೆಪಿ ಮುಖಂಡ ಕಾಶೀನಾಥ ಚನ್ನವೀರ ಮಾತನಾಡಿ, ಕನ್ನಡ ಭಾಷೆ ಹಾಗೂ ಕನ್ನಡಿಗರ ಹಿತಾಸಕ್ತಿಯ ವಿಚಾರದಲ್ಲಿ ಸಂಘಟಿತ ಹೋರಾಟ ಅಗತ್ಯವಾಗಿದೆ. ನಗರದಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುವ ವಾತಾವರಣ ನಿರ್ಮಾಣವಾಗಬೇಕು. ಕನ್ನಡದ ನೆಲ, ಜಲ, ಗಡಿ ಹಾಗೂ ಸಂಸ್ಕೃತಿಯ ರಕ್ಷಣೆಗೆ ಸಂಘಟನೆಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಆರಂಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಚಲಪತಿ ಬಣದ ವರ್ತಕರ ಘಟಕದ ರಾಜ್ಯಾಧ್ಯಕ್ಷ ಡಾ.ಸಿದ್ಧಾರ್ಥ ಕಾಂಬಳೆ ಸ್ವಾಗತಿಸಿದರು. ಸಮಾಜ ಸೇವಕ ಪ್ರೇಮ ರಾಯಪ್ಪಗೋಳ, ಆಟೋ ರಿಕ್ಷಾ ಘಟಕದ ಜಮಖಂಡಿ ತಾಲೂಕು ಅಧ್ಯಕ್ಷ ಇಮ್ಮಾಹುಸೇನ ಹಿಪ್ಪರಗಿ, ತಾಲೂಕು ಉಪಾಧ್ಯಕ್ಷ ಪ್ರವೀಣ ಹೊಳಪ್ಪಗೋಳ, ನೂತನ ಪದಾಧಿಕಾರಿ ಜಿಲ್ಲಾ ಉಪಾಧ್ಯಕ್ಷ ಯಶವಂತ ಗುಡ್ಡಿಯನ್ನವರ ತಾಲೂಕಿನ ಕೊಣ್ಣೂರ ಗ್ರಾಮದ ಘಟಕದ ಅಧ್ಯಕ್ಷ ಯಮನಪ್ಪ ಪಂಜಾರಿ ತಾಲೂಕಿನ ಸಾವಳಗಿ ಕನೋಳ್ಳಿ ಗ್ರಾಮದ ಘಟಕದ ಅಧ್ಯಕ್ಷ ಮಲ್ಲಪ್ಪ ಶಿಂಗೆ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು, ಕನ್ನಡಪರ ಹೋರಾಟಗಾರರು, ಸಾರ್ವಜನಿಕರು ಉಪಸ್ಥಿತರಿದ್ದರು.ಕನ್ನಡದ ವಿಚಾರದಲ್ಲಿ ಪಕ್ಷ, ಜಾತಿ, ಧರ್ಮದ ಭೇದ ಮರೆತು ಎಲ್ಲರೂ ಕನ್ನಡಿಗರಾಗಿ ಒಂದಾಗಬೇಕು. ಜಮಖಂಡಿಯಲ್ಲಿ ಕನ್ನಡ ಫಲಕಗಳಿಗೆ ಆದ್ಯತೆ ಸಿಗುವಂತೆ ಸಂಘಟನೆ ಮೊದಲು ಜಾಗೃತಿ ಮೂಡಿಸಲಿ. ಅಗತ್ಯವಿದ್ದರೆ ಈ ನೂತನ ಕಚೇರಿಯಿಂದಲೇ ಹೋರಾಟ ಆರಂಭಿಸಿ. ಕನ್ನಡಕ್ಕಾಗಿ ನಡೆಯುವ ಎಲ್ಲ ಹೋರಾಟಗಳಲ್ಲಿ ಓಲೆಮಠ ಸದಾ ನಿಮ್ಮೊಂದಿಗೆ ನಿಲ್ಲಲಿದೆ.

-ಆನಂದ ದೇವರು, ಓಲೆಮಠ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುನಗುಂದ ತಾಲೂಕು ಬರಪೀಡಿತವೆಂದು ಘೋಷಿಸಿ
ಮಣಿಪಾಲ ಆರೋಗ್ಯ ಕಾರ್ಡ್‌ ನೋಂದಣಿಗೆ ಆ.31 ಗಡುವು